ಪುಟ:ಮಾಲತಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಲತೀ

ಸನ್ನಾನಂದಕ್ಕೆ ಪಾರವೇ ಇರದು. ನೀನು ಹೊರಗೆ ಹೋದಾಗ ನಾವಿಬ್ಬರೂ
ನಮ್ಮ ತೋಟದಲ್ಲಿ ತಿರುಗಾಡುತ್ತಿರುವೆವು-ತೋಟದ ಹೂವೆಲ್ಲಾ ಅವ
೪ಗೆ ಮುಡಿಸಿ ನೀನು ಮನೆಗೆ ಬರುತ್ತಲೇ ಪರಮಸುಖಿಯಾಗುವಂತೆ ಮಾಡು
ವೆಸು-ನಾವಿಬ್ಬರೂ ಬೇಕಾಗುದುನ್ನೆಲ್ಲಾ ಕುರಿತು ಮಾತಾಡುತ್ತಿರುವೆವು.
ಯುವಕ-ನೀನು ಇಂದಿನಿಂದಲೇ ಆನಂದವನೆಲ್ಲಾ ಮನಸ್ಸಿನಲ್ಲಿ ಕಲ್ಪಿ
ಸಿಕೊಂಡು ಸಂತೋಷಪಡುವಂತಿದೆ.
{gap}}ಮಾತಾಡುತ್ತಿದ್ದ ಹಾಗೆ ಹುಡುಗಿಯು ಸುಮ್ಮನಾದಳು. ಅವಳ ಅರ
೪ದ್ದ ಮುಖವು ದುಃಖದಿಂದ ಬಾಡಿತು. ಯುವಕನ ಮಾತಿಗೆ ಕಿವಿಗೊಡದೆ
ಮಾಲತಿಯು ನಿಟ್ಟುಸುರನ್ನು ಬಿಟ್ಟು, "ಅಣ್ಣ! ಆಹಾ! ಅಮ್ಮನಿಗೆ ಬದುಕಿ
ದ್ದರೆ ಈ ಮದುವೆಯಲ್ಲಿ ಎಷ್ಟೊಂದು ಆನಂದಿಸುತ್ತಿದಳೋ!” ಎಂದು ಹೇಳಿ
ದಳು.
ಯುವಕನೂ ಆ ಮಾತಿಗೆ ವ್ಯಸನಪಟ್ಟುಕೊಂಡು ಅವರೋ ಭಾವಾಂ
ತರದಲ್ಲಿದ್ದವನು, 'ಇದ್ದಿದ್ದ ಹಾಗೆ, ಅವಳು ಬದುಕಿದ್ದರೆ, ಈ ಮದುವೆಯಾಗು
ತಿದ್ದಿತೆ?” ಎಂದುಹೇಳಿದನು.
ಹುಡುಗಿಯು ಆಶ್ಚರ್ಯಪಟ್ಟು ಕೌತೂಹಲದಿಂದ, “ಅವಳು ಬದುಕಿ ದ್ದರೆ ಈ ಮದುವೆಯಾಗುತ್ತಿರಲಿಲ್ಲವೇಕೆ?” ಎಂದು ಕೇಳಿದಳು.
ಯುವಕನು ಸುಮ್ಮನಾಗಿ ಗಂಭೀರಭಾವವನ್ನು ತಾಳಿದನು, ಪ್ರಶ್ನೆಗೆ
ಪ್ರತ್ಯುತ್ತರವನ್ನು ಕೊಡಲಿಲ್ಲ.
ಹುಡುಗಿಯು, 'ಅಣ್ಣ! ತಾಯಿಯು ಬದುಕಿದ್ದರೆ ಈ ಮದುವೆಯಾ
ಗುತ್ತಿರಲಿಲ್ಲವೇಕೆ?' ಎಂದು ಪುನಃ ಕೇಳಿದಳು.
ಯುವಕನು ಹಿಂದು ಮುಂದು ನೋಡುತ್ತಿದ್ದು ಬಳಿಕ, ಅವಳು ಬದು
ಕಿದ್ದರೆ ತಾನು ವಿಲಾಯಿತಿಗೆ ಹೋಗುತ್ತಿರಲಿಲ್ಲವೆಂದೂ ಇಷ್ಟು ದಿನಗಳ ತನಕ
ತನಗೆ ಮದುವೆಯಾಗದಿರುತ್ತಿರಲಿಲ್ಲವೆಂದೂ ಹೇಳಿದನು.
ಮಾಲತಿ-ಅದೇಕೆ? ಅಮ್ಮನು ನಿನ್ನನ್ನು ವಿಲಾಯತಿಗೆ ಕಳುಹುದಾಗಿ
ಹೇಳಿದ್ದಳಲ್ಲವೆ? ನಿಜವಾಗಿ ನೀನೆನಗೆ ಸಂಗತಿಗಳನ್ನೆಲ್ಲಾ ಹೇಳಿಲ್ಲ. ಅನೇಕ
ಮಾತುಗಳನ್ನು ಮರೆಮಾಜಿರುತ್ತಿ-