ಪುಟ:ಮಾಲತಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೊದಲನೆಯ ಪರಿಚ್ಛೇದ


ಯುವಕನು ಸ್ಥಿರಗಂಭೀರಭಾವವನ್ನು ತಾಳಿ ಮೆಲ್ಲ ಮೆಲ್ಲನೆ,
"ಮಾಲತಿ! ನೀನೀಗ ದೊಡ್ಡವಳಾದೆ. ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳ
ಬಲ್ಲೆ, ನಿಜವಾಗಿ ಇದುವರೆಗೂ ಒಂದು ಸಂಗತಿಯನ್ನು ನಿನಗೆ ಹೇಳದೆ ಮರೆ
ಮಾಚಿದ್ದೆನು, ಈಗದನ್ನು ಬಿಚ್ಚಿ ಹೇಳುವೆನು-ಮಾಲತಿ ! ನೀನೆನಗೆ ಸೋ
ದರಿಯಲ್ಲ" ಎಂದನು.
ಮಾಲತಿಯು ರಮೇಶನಿಗೆ ಸೋದರಿಯಲ್ಲ! ಹಾಗಾದರೆ ಈ ಪ್ರಪಂ
ಚದಲ್ಲಿ ಮಾಲತಿಗೆ ಮತ್ತಾರೂ ಇಲ್ಲ ! ಪ್ರಪಂಚದಲ್ಲಿ ಯುವಕನೊಬ್ಬನು
ಸಂಬಂಧಪಟ್ಟ ಸೋದರನೆಂದು ತಿಳಿದಿದ್ದಳು. ಅವನು ಅಣ್ಣನಲ್ಲನೆಂದು
ಹೇಳಿದ ಮಾತು ಅವಳೆದೆಯಲ್ಲಿ ಸಿಡಿಲು ಬಿದ್ದಂಗಾಯಿತು . ಯುವ
ಕನು ಪುನಃ ಹೇಳತೊಡಗಿವನು:--" ಮಾಲತಿ ! ನೀನು ಅಮ್ಮನ ಗೆಳತಿಯ
ಮಗಳು: ನಿನಗೆ ಒಂದು ವರ್ಷವಾಗಿದ್ದಾಗ ಗಂಡನಿಲ್ಲದ ನಿನ್ನ ತಾಯಿಯು
ಸತ್ತು ಹೋದಳು: ಅಮ್ಮನು ನಿನ್ನನ್ನು ತನ್ನ ಮಗಳಂತೆ ಸಾಕಿದಳು; ಆಗೆ
ನಗೆ ಏಳುವರ್ಷ ಅದೆಲ್ಲಾ ಚೆನ್ನಾಗಿ ನೆನವಿದೆ; ನಿನ್ನನ್ನು ನನಗೆ ಕೊಟ್ಟು
ಮದುವೆ ಮಾಡಬೇಕೆಂದು ಅಮ್ಮನು ಯೋಚಿಸಿದ್ದಳು: ಅದುಕಾರಣ
ಅಮ್ಮನು ಬದುಕಿದ್ದರೆ ಈ ಮದುವೆಯಾಗುತ್ತಿರಲಿಲ್ಲವೆಂದು ಹೇಳಿದೆನು”
ಎಂದು ಹೇಳಿದನು. ಅವಳಿಗಾ ಮಾತುಗಳೆಲ್ಲಾ ಕಿವಿಗೆ ಬೀಳಲಿಲ್ಲ. ಅವ
ಳಿಗೆ ನಾಲ್ಕೂ ಕಡೆಯಲ್ಲಿ ಕತ್ತಲೆಯು ಕವಿತುಕೊಂಡಂತಾಗಿ ಅಸದಳ
ವಾವಾನದೋ ಒಂದು ವೇದನೆಯಿಂದ ಅವಳ ಹೃದಯವು ಅದುರಿತು. ಅದಕ್ಕೆ
ಕಾರಣವನ್ನು ಅವಳರಿಯಲಾರದವಳಾಗಿದ್ದಳು.
ಅಂಧಕಾರದಲ್ಲಾವದನ್ನು ಬೆಳಕೆಂದು ತಿಳಿದಿದ್ದಳೋ ಪ್ರಪಂಚದಲ್ಲಿ
ತನಗೆ ಮತ್ತಾರು ಇಲ್ಲದಿದ್ದರೂ ಅಣ್ಣನೊಬ್ಬನಿದ್ದು ಎಲ್ಲರೂ ಇದ್ದಂತೆ ತಿಳಿ
ದಿದ್ದಳೋ ಆರನ್ನು ತನ್ನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳೋ_
ಅಂಥವನು ತನ್ನ ಅಣ್ಣನಲ್ಲ, ಅವನು ತನಗೇನೂ ಅಗತಕ್ಕವನಲ್ಲ_ ಅವ
ನಿಗೂ ತನಗೂ ಅವ ಸಂಬಂಧವೂ ಇಲ್ಲ! ಅವನು ಪ್ರೀತಿಸುವುದಕ್ಕೆ ಕಾರ
ಣವೂ ಇಲ್ಲ! ಈ ಪ್ರಪಂಚದಲ್ಲಿ ಮಾಲತಿಯು ಅನಾಥೆಯಾದ ಬಾಲೆ_
ರಮೇಶನ ಸ್ನೇಹಕ್ಕೆ ಅವಳು ಪಾತ್ರಿಯಲ್ಲ--ಅವನ ಕೃಪೆಗೆ ಪಾತ್ರಿಯಾಗಿ