ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ મ •••••••••••••• .. • • • • • • •••••• • • • •

  • * * * A ೪
  • * */ Porn

ದಶಗಳನ ಚಿತ್ರದಲ್ಲಿ ವಿಭೀಷ ನ ಹಿತೋ? ದೇಣಾಮೃತವು ನಿಲ್ಲದೆ ಹೋಯಿತು, ಅಣ್ಣನಿಂದ ತಿರಸ್ಕಾ' ವನ್ನು ಹೊಂದಿದನು, ಅಲ್ಲಿಂದೆದ್ದನು, ಪಾರಾವಾರದ ತೀರದಲ್ಲಿ ನೆಲನಿ ಏವ ಸರ್ವಲೋಕ ಶರಣ್ಣನಾದ ರನಂ ದನನನ್ನು ಅಭಯಾರ್ಥಿಯಾಗಿ ಮರೆಹೊಕ್ಕನು. ಶರಣಾಗತವತ್ಸಲನಾದ ರಾಘವನು - ರಾಕ್ಷಸ ಸಾಮ್ರಾಜ್ಞವನ್ನು ಆಗಲೇ ಅಲ್ಲಿಯೇ ವಿಭೀಷಣನಿಗೊಪ್ಪಿಸಿದನು. ಸಕಾಲದಲ್ಲಿ ವಿನಿಯೋ ಗಿಸಿದ ಸುನೀತಿಯೇ ಸರಸವಾಗಿ ಸಫಲವಾಗುವುದು. ಬಳಿಕ ರಾಮು ಚಂದ್ರನು - ಲವಣೋದಧಿಯಲ್ಲಿ ಕಪಿಗಳಿಂದ ಸೇತುವೆಯನ್ನು ಕಟ್ಟಿಸಿ ದನು, ನಾರಾಯಣನು ಪವಳಿಸಲೆಂದು ರಸಾತಲದಿಂದ ಆದಿಶೇಪನ. ಮೇಲಕ್ಕೆ ತೇಲಿಬಂದಿರುವನೆಂಬಂತೆ ಕಂಗೊಳಿಸುತಲಿದ್ದಿ ತು. ತರುವಾಯ- ಆ ಸೇತುವೆಯ ಹಾದಿಯಿಂದಲೇ ಕವಿಗಳ ಪಡೆಯೋ ಡನೆ ಜಲನಿಧಿಯನ್ನು ದಾಟಿದನು, ಹರಿಸೇನೆಯು - ರಾಮಾಚ್ಛೆಯಿಂದ ತತ್‌ಕ್ಷಣದಲ್ಲಿಯೇ ಲಂಕೆಯನ್ನು ಮತ್ತಿತು, ರಾವಣ ರಾಜಧಾನಿಗೆ ಬೇರೊಂದು ಚಿನ್ನದ ಕೋಟೆಯನ್ನು ಕಟ್ಟಿ -ವಂತೆ ಕಾಣಿಸಿತು, ಕವಿ ರಾಕ್ಷಸರಿಗೆ ಘೋರವಾದ ರಣವು ಆರಂಭವಾಯಿತು, ಸೇನಾ ಕಲಕಲವುಒಂದುಕಡೆ ರಾಘವನಿಗೆ ಜಯವಾಗಲೆಂದೂ, ಮತ್ತೊಂದು ಕಡೆ ರಾವಣ ನಿಗೆ ಜಯವಾಗಲೆಂದೂ ನಾಲ್ಕು ದಿಕ್ಕಿನಲ್ಲಿಯೂ ಘನ್ನಿಸುತಲಿದ್ದಿತು. ಆ ಮಹಾಯುದ್ಧದಲ್ಲಿ - ಮರಗಳ ಸೆಟ್ಟನಿಂದ ಪರಿಘಾಯಧಗಳು ತುಂಡು ತುಂಡಾಗುತಲಿದ್ದುವು, ಬಂಡೆಗಳ ಪೆಟ್ಟಿನಿಂದ ಮುದ್ಧರಗಳ, ಪುಡಿಪುಡಿ ಯಾಗಿ ಬೀಳುತಲಿದ್ದುವು, ಕಪಿಗಳಗುನ ಗಾಯಗಳು ಶಸ್ತ್ರಪಾತಗ ಳನ್ನು ಮಾರಿದ್ದುವು, ಬೆಟ್ಟಗಳ ಹೊಡೆತದಿಂದ ಆನೆಗಳು ಉರುಳುತ ಲಿದ್ದುವು.

  • ಇಂತಹ ಮಹಾಘೋರ ಸಮರವು ನಡೆಯುತಲಿ ರುವಾಗ ವಿದ್ಯು ಜೈ ಹೃನೆಂಬ ಕ್ರೂರರಾಕ್ಷಸನು - ಕತ್ತರಿಸಿ ತುಂಡಾಗಿರುವ ರಾಮನ ಶಿರವನ್ನು ಕೊಂಡುಹೋಗಿ ಸೀತೆಯನುಂದಿಟ್ಟು ಹೊರಟುಹೋದನು, ಜಾನಕಿಯ ಜೀವಿತವು ತತ್ ಕ್ಷಣವೇ ಹಾರಿಹೋದಂತಾಯಿತು, ಕಣ್ಣು ಗಳು ಮುಚ್ಚಿಹೋದುವು, ಹಾ ! ರಾಮಾ ಎಂದು ಎರಡು ಕೈಗಳನ್ನ.