ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ મટ

wwwmv ಎಬ್ಬಿಸಿದುದು ಬಹಳ ಅನ್ಯಾಯ, ಮತ್ತು ವ್ಯರ್ಥ ೨” ಎಂದು ಕನಿಕರದಿಂ ರಲೆ ಎಂಬಂತೆ ರಾಮಬಾಣಗಳು-ಅವನನ್ನು ಮರಳಿ ಯಾರಿಂದಲೂ ಎಚ್ಚರಗೊಳಿಸಲಾಗದ ದೀರ್ಘನಿದ್ರೆಯಲ್ಲಿ ಮಲಗಿಸಿದುವು. ಆಗ - ನಾನರಕೋಟಿಯಲ್ಲಿ ಬಂದು ಬೀಳುತಲಿ ರುವ ರಕ್ಕಸರ ದಳಕ್ಕೆ, ರಾಕ್ಷಸ ರಕ್ತಪ್ರವಾಹದಲ್ಲಿ ಬಂದು ಬೀಳುತಲಿರುವ ಸೇನಾಧೂಳಿಯ ಪಾಡುಂ ಬಾಯಿತು. ಬಲವೆಲ್ಲ ಬರಿದಾಯಿತು, ಬವರಕ್ಕೆ ತಕ್ಕವರಿಲ್ಲವಾದರು, ಸೌಲ 5ನೇ ಮರಳಿ ಮನೆಯಿಂದ ಕಾಳಗಕ್ಕೆ ತಂದನು. ಈಗಲೀ ಜಗತ್ತು ಅರಾವಣವಾಗಬೇಕು, ಅಥವಾ ಅರಾಮವಾಗಬೇಕು ಎಂಬುದೇ ಅವನ ದೃಢಸಂಕಲ್ಪವಾಗಿದ್ದಿತು. ಸಮರಾಂಗಣದಲ್ಲಿ ರಾಮನು ಪದಾತಿಯಾ ಗಿಯೂ, ರಾವಣನು ರಥಿಕನಾಗಿಯೂ ನಿಂತರು, ಹರಿಹಯನಿಗೆ ಸೈರಿಸ ಲಿಲ್ಲ. ಕೂಡಲೆ ಹರಿದಶ್ವಯುಗ್ನದಿಂದೊಡಗೂಡಿದ ತನ್ನ ರಥವನ್ನು ರಾಘ ವನಿಗೆ ಕಳುಹಿಸಿಕೊಟ್ಟನು. ವೋಮಗಂಗೆಯಮೇಲಣ ಗಾಳಿಯಿಂದ ದಜಪಟವು ಅಲುಗುತಲಿದ್ದಿತು, ರಥವು ರಣಭೂಮಿಗಿಳಿಯಿತು, ರಾಘ ವನು - ಇಂದ್ರಸಾರಥಿಯ ತೋಳನ್ನವಲಂಬಿಸಿ, ಜಯವನ್ನು ಸೂಚಿಸು ತಲಿರುವ ಆಸ್ಕಂದನವನ್ನೇರಿದನು, ಅಸುರಾಸ್ತ್ರ ಪಾಶವು - ಎಲ್ಲಿ ಕನ್ನ ದಿ ಲೆಯ ಹೂವಿನ ರೇಕಿನಂತೆ ಭಂಗವನ್ನು ಪಡೆಯುತ್ತದೆಯೋ, ಅಂತಹ ಮಹೇಂದ್ರನ ವಜ್ರಕವಚವನ್ನು ಮಾತಲಿಯು ರಾಮನಿಗೆ ತೊಡಿಸಿದನು. ಆ ಬಹುಕಾಲಕ್ಕೆ ಒಬ್ಬರನ್ನೊಬ್ಬರು ಇದಿರ್ಗೊಂಡು, ತಂತಮ್ಮ ಪರಾಕ್ರಮವನ್ನು ತೋರುವ ಅವಸರವು ಒದಗಿತು. ಇದರಿಂದ ರಾಮ ರಾವಣ ಯುದ್ಧ ವು ಸಫಲತೆಯನ್ನು ಪಡೆಯುವಂತಿದ್ದಿ ತು, ದಶಗಳನಿಗೆ ಅದುವರೆಗೆ ಮಂದಿಯೆಲ್ಲ ಸಂದುಹೋಗಿದ್ದಿ ತು, ಏಕಾಂಗಿಯಾಗಿಯೇ ನಿಂ ತಿದ್ದನು, ಆದರೂ-ತಲೆಗಳೂ, ತೋಳುಗಳೊ, ಕಾಲುಗಳ ಹೇರಳ ವಾಗಿದ್ದು ದರಿಂದ ತನ್ನ ತಾಯಿಯ ಮನೆಯಲ್ಲಿ ಬಂಧುಬಳಗಗಳಿಂದ ಕೂಡಿ ಗುವವನಂತಿದ್ದನು. ರಾವಣನು ಸಾಧಾರಣನಲ್ಲ, ಲೋಕಪಾಲರನ್ನೆಲ್ಲ ಗೆದ್ದವನು, ತನ್ನ ಶಿರಗಳಿಂದ ಶಂಕರನನ್ನು ಆರಾಧಿಸಿದವನು, ಕೈಲಾಸ ವನ್ನೂ ಕೈಗಳಿಂದಲ್ಲಾಡಿಸಿ, ಕೌದಿಂದ ಮೆರೆದವನು, ಇಂಥವನನ್ನು