ಪುಟ:ರಘುಕುಲ ಚರಿತಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

y4, ಶಿಶಾ ರ ದಾ ಪತಿಯರಿಗೆ ತೊಂದರೆಯುಂಟಾದಾಗ, ತಪಸ್ಸಿನಿಯರು ಬಂದು, ಅಮ್ಮಾ ವೈದೇಹೀ ! ನಿನ್ನ ಪತಿಗೆ ಅರಿಕೆ ಮಾಡಿ ನನ್ನ ಸಂಕಟವನ್ನು ಪರಿಹರಿ ಸು,, ಎಂದು ನನ್ನನ್ನು ಮರೆಹೊಗುತಲಿದ್ದ ರು, ನಿನ್ನ ಅನುಗ್ರಹದಿಂದ ಹಾಗೆ ಇದ್ದ ಈ ನಾನು-ನೀನು ಮಹೋನ್ನತನಾಗಿರುವಲ್ಲಿ, ಈಗ ಬೇರೊ ಬ್ಬ ತಪಸ್ವಿಯಬಳಿಗೆ ಹೋಗಿ ಹೇಗೆ ಮರೆಹೊಗುವೆನು ? ಅಥವಾ-ನಿನ್ನ ಸಂದರ್ಶನವು ನನಗೆ ದೊರೆಯುವುದಿಲ್ಲವೆಂಬುದು ಸಿದ್ಧವಾಗಿರುವಲ್ಲಿ ಈನ ನ ಹಾಳು ಜೀವಿತದಲ್ಲಿ ಆಕೆಯನ್ನು ತೊರೆಯ ಬಲ್ಲೆನು ಆದರೆ-ನನ್ನ ಉದರದಲ್ಲಿ ಅವಶ್ಯಕವಾಗಿ ರಕ್ಷಿಸಬೇಕಾಗಿರುವ ನಿನ್ನ ಸಂತಾನವು ಬ ಲವಾದ ಅಡ್ಡಿಯಾಗಿದೆ. ಅದರಿಂದ ಯತ್ನವಿಲ್ಲದಿರುವುದು. ಆದಕಾರಣಪ್ರಸವಾನಂತರದಲ್ಲಿ ಮುಂದಿನ ಜನ್ಮದೊಳಗೆ ನೀನೇ ನನಗೆ ಪ್ರಾಣಪ್ರಿ ಯನಾಗಬೇಕು, ಮತ್ತು ಅಗಲಿಕೆಯುಂಟಾಗಬಾರದು, ಅಂತಹ ಫಲವನ್ನು ಕೊಡುವ ಹಾಗೆ, ರ್ಸೂನಲ್ಲಿ ದೃಷ್ಟಿಯನ್ನಿಟ್ಟು, ಈ ನಾ ನು ತೀವ್ರವಾದ ಪಂಚಾಗ್ನಿ ಮಧ್ಯದ ತಪಸ್ಸನ್ನು ಆಚರಿಸಲುಯತ್ನಿಸುವೆ ನು, ವರ್ಣಾಶ್ರಮಗಳಿಗೆ ಸಾಂಕವಿಲ್ಲದಂತೆ ಪಾಲಿಸೋಣವೇ ರಾಜ ಧರವೆಂದು ಮಹಾನುಭಾವನಾದ ಮನುವು ಉದಹರಿಸಿರುವನು. ಆದ ಕಾರಣದಿಂದಲೇ ನೀನು ನನ್ನನ್ನು ತಿರಸ್ಕರಿಸಿ ಹೊರಡಿಸಿದೆಯಲ್ಲವೆ ? ಹಾ ಗಾದರೂ ನನ್ನಲ್ಲಿ ಕಳತ್ರ ದೃಷ್ಟಿಯನ್ನಿ ಡದೆ, ನಿನ್ನ ಆಳ್ವಿಕೆಗೆ ಒಳಪಟ್ಟ ಅ ರದಲ್ಲಿ ವಾಸಮಾಡುತಲಿರುವ ತಪಸಿಗಳಲ್ಲಿ ಹೇಗೋ ಹಾಗೆಯೇ ನನ್ನ ಲ್ಲಿಯೂ ಪಾಲ್ಬದೃಶ್ಮಿಯನ್ನಿಟ್ಟಿರಬೇಕು, ಎಂಬದಾಗಿ ಬಿನ್ನವಿಸಿದಳಂ ದು ಅರಿಕೆ ಮಾಡು” ಎಂದಳು. ಆ ಬಳಿಕ ಲಕ್ಷಣನು-ಹಾಗೆಯೇ ಆಗಲೆಂದು ಹೇಳಿ, ಸೀತೆಗೆ ಅಭಿ ವಂದಿಸಿ ಹೊರಟನು, ದೃಷ್ಟಿ ಮಾರ್ಗವನ್ನು ಅತಿಕ್ರಮಿಸಿದನು. ವೈ ದೇಹಿಯು ವ್ಯಸನವನ್ನು ಸಹಿಸಲಾರದೆ ಹೋದಳು, ನಿಂಹವ್ಯಾಘಾದಿ ಕ್ರೂರ ಮೃಗಗಳಿಂದೊಡಗೂಡಿದ ಘೋರವಾದ ಮಹಾರಣ್ಣ ನೀನೇ ಎಂಬ ಬೇರೆದಿಕ್ಕಿಲ್ಲ. ಅಬಲೆ, ಗರ್ಭಿಣಿ, ಬಹಳವಾಗಿ ಹೆ' ರಿದಳು, ದು ಗುಡವು ಮಿತಿಮೀರಿತು, ಲಜ್ಜೆಯನ್ನು ತೊರೆದು, ಉಚ್ಚಸ್ವರದಿಂದ ಹೆಣ್ಣೆ ರಳಯಂತೆ ಗೊಳೋ ಎಂದು ಅಳತೊಡಗಿದಳು, ಆಗ-ಕುಣಿಯುತಿದ್ದ