ಪುಟ:ರಘುಕುಲ ಚರಿತಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ • " " ಭರತಾಗ್ಯ ಜನಲ್ಲಿ ನನಗೆ ಖಂಡಿತವಾಗಿ ಆಗ್ರಹವುಂಟು. ಅಮ್ಮಾ ! ಸೀತೆ ! ಉದಾರ ಕೀರಿಸಂಪನ್ನನಾದ ನಿನ್ನ ಮಾವನು ನನ್ನ ಸಖನು. ನಿಮ್ಮ ತಂದೆಯಾದ ಜನಕನಾದರೆ ವಿದ್ಯಾವಂತರಿಗೂ ಜ್ಞಾನೋಪದೇಶವ ನ್ನು ಮಾಡಿ, ಸಂಸಾರ ದುಃಖವನ್ನು ಪರಿಹರಿಸತಕ್ಕವನು ನೀನೆ ಪತಿವ್ರತೆಯರೊಳಗೆ ಅಗ್ರಗಣ್ಯಳು ಆದಕಾರಣ ಸರ್ವಪ್ರಕಾರದಿಂದ ಲೂ ನೀನು ನನ್ನ ಗಯೆಗೆ ಪಾತ್ರಳೆನಿಸಿ ಇದ್ದಿಯ ತಪಸ್ಸಿಗಳ ಸಹವಾ ಸದಿಂದ ಸಹಜವಾದ ವೈರವನ್ನು ತೊರೆದಿರುವ ಶಾಂತಮ್ಮಗಗಳಿಂದೊಡ ಗೂಡಿದ ಈ ತ ಪೋವನದಲ್ಲಿ ಯಾವುದೊಂದು ಭಯ ರೂ ಇಲ್ಲದೆ ಸುಖವಾ ಗಿ ವಾಸಮಾಡುತಲಿರು, ಇಲ್ಲಿಯೇ ನಿನ್ನ ಸುಖಪ್ರಸವವು ಬೆಳೆಯಲಿ, ನಿ « ಮಂಗಳಸಂತಾನಕ್ಕೆ ಜಾತಕರವೇ ಮೋ ಲಾದ ಸಂಸ್ಕಾರವು ವಿಧಿ ಪ್ರಕಾರ ನಡೆಯುವುದು, ನೀನು ಯೋಚಿಸಬೇಕಾದುದಿಲ್ಲ, ಮುನಿಗಳ ಎಲೆವನೆಗಳೆಲ್ಲ ಈ ತಮಸಾನದಿಯ ತೀರದಲ್ಲಿಯೇ ಸಾಲಾಗಿ ನೆಲೆಗೊಂ ಡಿವೆ. ಈ ಪರ್ಣಶಾಲೆ ಯಲ್ಲಿರುತ್ಯಾ, ಪಾಪಪರಿಹಾರಕವ ದ ತಮಸಾನ ದಿಯಲ್ಲಿ ಮಿಂದು, ಹತ್ತಿ - ದಲ್ಲಿ ರುವ ರಮ್ಯವಾದ ಮರಳು ನೆಲದಲ್ಲಿ ಕು ೪ತು, ನಿನ್ನ ಇಮ್ಮದೇವತೆಯ ೩ ಭಕ್ತಿಯಿಂದ ಪೂಜಿಸುತಲಿದ್ದರೆ ನಿನ್ನ ಮನಸ್ಸಿಗೆ ವಿಶೇಷವಾದ ಪ್ರಸನ್ನತೆಯುಂಟಾಗುವುದು, ನಿನ್ನ ಪೂ ಚೆಪುರಸ್ಕಾರಗಳಿಗೆ ಬೇಕಾಗುವ ಕಾಲದಲ್ಲಿ ಸಿದ್ಧವಾದ ಹೂವು ಹಣ ಗ ಳನ್ನೂ, ಉತ್ತು ಬಿತ್ತದೆಯೇ ಬೆಳೆದ ಕಾಳಕಣ್ಣಗಳನ್ನೂ ಒದಗಿಸಿಕೊ ಡುತ್ತಾ, ಮುನಿಕುಮಾರಿಯರು-ನಿನ್ನೊಡನೆ ಮೃದುಮಧುರವಾದ ಮಾ ತುಗಳನ್ನಾಡಿಕೊಂಡು, ನಿನಗೆ ನೂತನವಾಗಿ ಉಂಟ:ಗಿರುವ ಮನೋವೈ ಥೆಯನ್ನು ಪರಿಹರಿಸುತ್ತಿರುವರು. ನಿನ್ನ ಕೈಯಿಂದ ಎತ್ತಲಿಕ್ಕೆ ಆಗುವಂ ತಹ ಪಾತ್ರೆಗಳಿಂದ ನೀರು ತಂದು, ಆಶ್ರನದಲ್ಲಿನ ಹೂವಿನ ಗಿಡಗಳಿಗೆರೆ ದು, ಬೆಳೆಯಿಸುತ್ತಾ, ಅವುಗಳಲ್ಲಿ ಎಳೆಯ ಹಸುಳೆಗಳೆಳಗೆ ಹೇಗೋ ಹಾಗೆ ಮಮತೆಯನ್ನಿಟ್ಟುಕೊಂಡು, ಸು' ಪ್ರಸವದವರೆಗೆ ವಿನೋದದಿಂದ ಕಾಲವನ್ನು ಕಳೆಯುತಲಿರು, ತರುವಾಯು ನಿನ್ನ ಮನೋವಿನೋದವು ಸುಲಭವಾಗಿರುವುದು ಎಂದು ಹೇಳಿ, ದಯಾಳುವಾದ ವಾಲ್ಮೀಕಿವು ನಿಯು ತನ್ನ ಅನುಗ್ರಹದಿಂದ ಸಂತುಷ್ಕೃಳಾದ ಸೀತೆಯನ್ನು ಕರೆದು,