ಪುಟ:ರಘುಕುಲ ಚರಿತಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ಶ್ರೀ ಶಾ ರ ಡಾ . ದಿಂದ ಹೊರಡಿಸಲ್ಪಟ್ಟಿದ್ದಳಲ್ಲದೆ ಮನಸ್ಸಿನಿಂದ ಹೊರಡಿಸಲ್ಪಟ್ಟಿರಲಿಲ್ಲ. ರಾಮನು ಮಹಾಧೀಮಂತನೇ ಅಲ್ಲವೇ ? ತನ್ನ ವಿವೇಕ ಶಕ್ತಿಯಿಂ ದಲ ಶೋಕವನ್ನು ಅಡಗಿಸಿಕೊಂಡು, ಎಚ್ಚರದಪ್ಪದೆ, ಪ್ರಜೆಗಳ ಯೋಗಕ್ಷೇಮವನ್ನೇ ಚೆನ್ನಾಗಿ ವಿಚಾರಿಸುತ್ತಾ, ಸೋದರರೊಡನೆ ಶರೀರ ಸ್ಥಿತಿಗೆ ತಕ್ಕಷ್ಟು ಸುಖವನ್ನು ಅನುಭವಿಸಿಕೊಂಡು, ಮತ್ತ ನಾಗದೆ ಸಮೃದ್ಧವಾದ ರಾಜ್ಯವನ್ನಾಳುತಲಿದ್ದನು. ರಾಮನು - ಒಬ್ಬಳ ಹೆಂಡತಿಯಾಗಿದ್ದ ರೂ, ಸತೀ ಶಿರೋಮಣಿಯೆನಿಸಿದ್ದರೂ ಲೋಕವಾರೆ ಯಿಂದ ಹೆದರಿ, ಆಕೆಯನ್ನು ಕಾಡಿಗಟ್ಟಿದನಷ್ಮೆ ? ಆತನ ವಕ್ಷಸ್ಥಲ ಮಾಸಿನಿಯಾದ ರಾಜ್ಯ ಲಕ್ಷ್ಮಿಯು - ಸವತಿಯ ಕಾಟವನ್ನು ತಪ್ಪಿಸಿ ಕೊಂಡವಳಂತೆ ವಿರಾಜಿಸುತಲಿದ್ದಳು. ರಾವಣಾರಿಯು - ಇಂತು ಸೀತೆಯನ್ನು ತೊರೆದರೂ, ಬೇರೊಂದು ಹೆಣ್ಣನ್ನು ಮದಿವೆ ಮಾಡಿ ಕೊಳ್ಳಲೇ ಇಲ್ಲ. ಸುವರ್ಣಮಯವಾಗಿರುವ ಸೀತೆಯ ಪ್ರತಿಮೆಯನ್ನು ಮಾಡಿಟ್ಟುಕೊಂಡೇ ಯಾಗಗಳನ್ನೂ ಆಚರಿ ಸುತ್ತಿದ್ದನು, ವಾಲ್ಮೀಕಿಮುನಿವನವಾಸಿನಿಯಾದ ಸೀತೆಯು - ಆ ವಿಧ ವಾದ ರಾಮನ ವೃತ್ತಾಂತವನ್ನು ಕರ್ಣಾಕರ್ಣಿಕೆಯಿಂದ ಕೇಳುತ್ತಾ, ತಾಳಲಾರದಿದ್ದ ತನ್ನ ಪರಿತ್ಯಾಗದಿಂದುಂಟಾದ ಶೋಕವನ್ನು ಬಹು ಕಷ್ಟದಿಂದ ಸಹಿಸುತ್ತಿದ್ದಳು. - ಇಂತು ನೀತಾಪರಿತ್ಯಾಗವೆಂಬ ಹದಿನಾಲ್ಕನೆಯ ಅಧ್ಯಾಯಂ - ಶ್ರೀ ರಾಮಚಂದ್ರಾಯನಮಃ. ಹದಿನೈದನೆಯ ಅಧ್ಯಾಯ. ಸೂಚನೆ | ಲವಣನ ಮನಂಬೂಕನ | ಮನರಜನಿಂ ರಿವು ನಿರಿದುಬಳಿಕಂ ಸವದೊಳ ಅವನಿಜೆಯಡಗಲ'ಭೂಮಿಯೊ | ಇವರಜರಿಂ ಪಜಿಗಳಿಂದೆ ಸರ್ದಂ ದಿವಂ ! ರಘುಕುಲಲಲಾಮನಾದ ರಾಮನು - ಸತಿಯಾದ ಸೀತೆಯನ್ನು ಕಾಡಿಗೆ ಕಳುಹಿದನ ? ಆಮೇಲೆ-ಮಹಿಷೆಯಿಲ್ಲದೆ ರತ್ನಾಕರ ಮೇಖಲೆ