ಪುಟ:ರಘುಕುಲ ಚರಿತಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ರಘುಕುಲಚರಿತಂ, f೧ ಯಾದ ಮಹಿಯನ್ನು ಮಾತ್ರವೆ ಅನುಭವಿಸುತಲಿದ್ದನು. ದಿಕ್ಕಿಲ್ಲದವರಿಗೆ ಯಾರುದಿಕ್ಕು ? ರಾಮನೇ ಅಲ್ಲವೇ ? ಅದರಿಂದಲೇ ಯಮುನಾತೀರ ವಾಸಿಗಳಾದ ಮುನಿಗಳು – ಯಾಗಗಳನ್ನು ಮಾಡತೊಡಗಿ, ತಾಮಸ ನಾಗಿದ್ದ ಲವಣನೆಂಬ ಅಸುರನು ತೊಂದರೆಗೊಳಿಸಲು, ಬೇರ ರಕ್ಷಕರ ನರಿಯದೆ, ರಾಮನನ್ನೇ ಬಂದು ಮರೆ ಹೊಕ್ಕರು. ಆದರೆ ಆ ತಪಸ್ವಿ ಗಳು - ತಮಗೆ ರಾಮನು ರಕ್ಷಕನಾಗಿರುವನೆಂದು ತಿಳಿದೇ ತಮ್ಮ ತೇಜ ಸ್ಪಿನಿಂದ ಆ ನಿಶಾಚರರನ್ನು ಸುಡಲಿಲ್ಲ. ತಾಪಸರು - ತಮಗೆ ಅಭಯ ದಾನವನ್ನು ಮಾಡತಕ್ಕವರಾರೂ ಇಲ್ಲದಿದ್ದಾಗ ಮಾತ್ರವೇ ಅಪರಾಧಿಗ ಇಲ್ಲಿ ಕಾಪಾಸ್ತ್ರವನ್ನು ಪ್ರಯೋಗಿಸಿ ತಮ್ಮ ತಪೋಧನವನ್ನು ವೆಚ್ಚ ಮಾಡಿಕೊಂಬರು, ರಾಮನು - ಆ ಮುನಿಗಳಿಗೆ ಲವಣಾಸುರನನ್ನು ವಧಿಸುವೆನೆಂದು ಮಾತು ಕೊಟ್ಟನು. ಅವನು ಹಾಗೆ ಪ್ರತಿಜ್ಞೆ ಮಾಡಿ ಡಿದುದು ನ್ಯಾಯವಾಗಿದೆ, ಏಕೆಂದರೆ - ಚಕ್ರಪಾಣಿಯು - ಭೂಮಿ ಯಲ್ಲಿ ರಾವುರೂಪದಿಂದವತರಿಸಿದುದು - ಧರ ಸಂರಕ್ಷಣೆಗೋಸ್ಕರವೇ ಅಲ್ಲವೇ ? ಆಗ ಲಾವನಕಸರು - ರಾಮನನ್ನು ಕುರಿತು ಎಲೈ ದಾಶರ ಧಿಯೇ ! ಲವಣನು ಹರನವರದಿಂದ ಒಂದು ಕೂಲಾಯುಧವನ್ನು ಸರದಿ ರುವನು. ಆದಕಾರಣ - ಅದು ಅವನ ಕಯ್ಯಲ್ಲಿಲ್ಲದ ವೇಳೆಯಲ್ಲಿಯೇ (ಇದಿರಿಸಿ ಅರಿಯ ಬೇಕು ಎಂದರು. ಆ ಬಳಿಕ ರಾಘವನು - ಅರಿಕುನ್ನಿರಿವುದರಿಂದ ಅನುಜನ ಹೆಸರನ್ನು ಸಾರ್ಥಕಗೊಳಿಸಬೇಕೆಂದುನೆನೆದನೊಎಂಬಂತೆ (ಮುನಿಗಳಿಗೆ ಕ್ಷೇಮವನ್ನು ಕಲ್ಪಿಸು,, ಎಂದು ಶತ್ರುಘ್ನನಿಗೆ ಆಜ್ಞಾಪಿಸಿದನು. ಲೋಕದಲ್ಲಿ ವಿಶೇಷ ವಿಧಿಯು ಸಾಮಾನ್ಯ ವಿಧಿಯನ್ನು ಬಾಧಿಸುವ ಹಾಗೆ, ರಘುಕುಲದ ರಸ ರಲ್ಲಿ ಯಾವನಾದರೊಬ್ಬನು ಹಗೆಯನ್ನಡಗಿಸಿದರೆ ಸರಿ, ಅದರಿಂದಲೇ ಸಪತ್ನ ಸಂಹಾರಕ್ಕೆ ರಾಮನೇ ಹೋಗಬೇಕೆಂಬ ನಿಯಮವೇನೂ ಇಲ್ಲ ಆದಕಾರಣ ಶತ್ರುಘ್ರನನ್ನು ಕಳುಹಿಸಲೆಳಸಿದನು, ಅನುಜನಾಗಲೆ ಅಗ್ರಜನ ಆಶೀರ್ವಾದವನ್ನಾಂತು, ನಿರ್ಭಯವಾಗಿ ರಥವನ್ನೇರಿ, ಫುಸ್ಸಸಿ ಗನು ಗಮಿಸುತಲಿರುವ ವನಸ್ಥಲಿಗಳನ್ನು ನೋಡಿ ಸಂತೋಷಿಸುತ್ತಾ ಹೋ ರಟು ಬಂದನು.