ಪುಟ:ರಘುಕುಲ ಚರಿತಂ ಭಾಗ ೧.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬ ಶ್ರೀ ಶಾ ರ ದ .

  • * *v

vvvvv ವಯಸ್ಸಿನವನಾದನು, ಕವಪ್ರಕಾರ ಮುಂಜೆಯಾಯಿತು, ವಿದ್ಯಾ ವಂತರಾದ ಗುರುಗಳು - ತಮಗೆ ಬಹು ಆತ್ಮನಾಗಿರುವ ಆ ಅರಸು ಮಗನಿಗೆ ವಿದ್ಯಾಬುದ್ದಿ ಗಳನ್ನು ಕಲಿಸುವಾಗ – ಅವರ ಉದ್ಯೋಗವು ವ್ಯರ್ಥವಾಗಲಿಲ್ಲ, ಸತ್ಪಾತ್ರದಲ್ಲಿ ವಿನಿಯೋಗಿಸಿದ ಶಿಕ್ಷೆಯು ವಿಫಲವಾ ಗುವುದುಂಟೆ ? ರವಿಯು - ಪವನನಿಗಿನ್ನಡಿಯಾಗಿ ನಡೆವ ವಾಜಿಗಳಿಂದ ದೆಸೆಗಳನ್ನು ದಾಂಟುವಹಾಗೆ, ಉತ್ತಮ ಬುದ್ಧಿಯುಳ್ಳ ರಘುವು ಬುದ್ದಿಯ * ಪೂರ್ಣ ಗುಣಗಳಂದ ನಾಲ್ಕು ಕಡಲುಗಳಿಗೆಣೆಯೆನಿಸಿದ * ನಾಲ್ಕು ವಿದ್ಯೆಗಳನ್ನೂ ದಾಟದನು, ಆಮೇಲೆ - ರುರುಗದ ಪಾವನವಾದ ಚರ ವನ್ನು ಹೊದೆದು, ಅಸ್ತ ವಿದ್ಯೆಯನ್ನೆಲ್ಲ ಮಂತ್ರಸಹಿತವಾಗಿ ತನ್ನ ತಂದೆಯಿಂದಲೇ ಕಲಿತನು. ಆದರೆ-ದಿಲೀಪನು ಇದಿರಾಳಿಲ್ಲದೆ ದೊರೆಯು ಮಾತ್ರವೇ ಆಗಿರಲಿಲ್ಲ ; ನೆಲದಲ್ಲಿ ಎಣೆಯಿಲ್ಲದ ಬಿಲ್ಕಾಳೂ ಆಗಿ ದ್ದನು. ಎಳೆಗರುವು - ದೊಡ್ಡ ಗೂಳಿಯಾಗುವಹಾಗೂ, ಆನೆಯ ಮರಿಯು-ಹಿರಿಯಾನೆಯೆನಿಸಿದ ಸಲಗನಾಗುವಹಾಗೂ, ಕಾಲಕ್ರಮದಲ್ಲಿ ಹರಯದಿಂದ ಹುಡುಗತನವನ್ನು ದಾಟಿ, ದೊಡ್ಡತನದಿಂದ ಅಂದವಾದ ಒಡಲಿನ ಹೊರವನ್ನು ಪಡೆದನು. ಹೀಗೆ ಬೌನಗುಣಗಳೊಡನೆ ಬೆಳೆಯುತಲಿರುವ ರಘುವಿಗೆ ಇಪ್ಪ ತೊಂದು ವರ್ಷಗಳು ಕಳೆದುವು, ಬಳಿಕ- ತಂದೆಯು ಈತನಿಗೆ-ಗೋ ದಾನ ವಿಧಿಯನ್ನು ನೆರವೇರಿಸಿ, ವಿಧಿಪ್ರಕಾರ ವಿವಾಹ ಮಹೋತ್ಸವ ವನ್ನೂ ನೆರವೇರಿಸಿದನು. ದಕ್ಷಪುತ್ರಿಯರು - ಕತ್ತಲನ್ನು ಕತ್ತರಿಸುವ ಸತ್ಪತಿಯನ್ನು ಪಡೆದು ಸಂತೋಷಿಸುವಹಾಗೆ, ರಾಜಕನೈಯರೂ - ಉತ್ತ ಮನೆನಿಸಿರುವ ಸತ್ಪತಿಯಾದ ರಘುವನ್ನು ವರಿಸಿ ಸಂತೋಪಿಸುತಿದ್ದರು. ತರುಣನಾದ ರಘುವಿಗೆ ಪ್ರಾಯದ ಹೊಮ್ಮಿನಿಂದ ತೋಳುಗಳು ನೊಗ ದಂತೆ ಬಲು ನೀಳವಾಗಿಯೂ, ತೋರವಾಗಿಯೂ, ದುಂಡಾಗಿಯೂ ಇದ್ದುವು. ಕದದಂತೆ ಎದೆಯು ಬಲು ಅಗಲವಾಗಿದ್ದಿತು. ಹೆಗ್ಗತ್ತು ಬಲಿತು ದುಂಡಗೆ ಬಹು ಅಂದವಾಯಿತು. ಹೀಗೆ ಒಡಲಿನ ಬೆಡಗಿನಿಂದ ತಂದೆಯನ್ನು ಗೆದ್ದನು, ಆದರೆ ವಿನಯದಲ್ಲಿ ಮಾತ್ರ ಬಲು ತಗ್ಗಿ ದವನಾ ಗಿಯೇ ಇದ್ದನು.