96 ರಜ ಯಾರಿಗೂ ಹೇಳುತ್ತಿರಲಿಲ್ಲ. ಆದರೆ ಕಳವಳದಲ್ಲಿ ಏನಾದರೂ ಹೇಳುತ್ತಿದ್ದೆನೋ ಅದು ಈಗ ಜ್ಞಾಪಕವಿಲ್ಲ. ಯಾವಾಗ ಕಳವಳವೇ ಇರುವುದು, ಹಾಸಿಗೆಯನ್ನು ಬಿಡುತ್ತಲೇ ಇರಲಿಲ್ಲ, ಮಲಗಿ ಮಲಗಿ ಏನೇನು ನೋಡುತ ಲಿದ್ದೆನೋ ಅದನ್ನು ಹೇಳಲಾರೆನು, ಒಂದೊಂದುಸಲ ಯುದ್ದ ಕ್ಷೇತ್ರದಲ್ಲಿ ಯವನರು ಸೋತುಹೋದಹಾಗೆ ಕಾಣುತ್ತಲಿತ್ತು. ರಕ್ತದ ನದಿಯು ಪ್ರವಹಿಸುವುದು, ಸುವರ್ಣದ ಪಾಂತರದಲ್ಲಿ ವಜ್ರಖಚಿತವಾದ ವೃಕ್ಷಗಳಲ್ಲಿ ಗೊಂಚಲುಗೊಂಚಲಾಗಿ ನಕ್ಷತ್ರಗಳು ಬಿಟ್ಟಿರುವಹಾಗೆ ಕಾಣುತಲಿತ್ತು, ಒಂದೊಂದುಸಲ ಆಕಾಶಮಾರ್ಗದಲ್ಲಿ ಅಷ್ಟ ಶಶಿ ಸಮನ್ವಿತವಾದ (With eight moons) ಶನಿಗ್ರಹವು ಚತುಶ್ಚ೦ದ್ರವಾಹಿನಿಯಾದ (With fout' noons) ಬೃಹಸ್ಪತಿಯಮೇಲೆ ಮಹಾ ವೇಗದಿಂದ ಬಿದ್ದು ಗ್ರಹ ಗಳ ಉಪಗ್ರಹಗಳೂ ಸಹ ಖಂಡಖಂಡವಾಗಿ ಒಡದು ಪರಸ್ಪರ ಆಘಾತದಿಂದುಂ ಟಾದ ಬೆಂಕಿಯಿಂದ ಅವೆಲ್ಲ ಉರಿಯುತಿದ್ದ ಹಾಗೆ ಅತಿ ವೇಗದಿಂದ ಭೂಮಂಡಲದ ಸುತ್ತಲೂ ಬಂದು ಬೀಳುವಹಾಗೆ ಕಾಣಿಸುವುದು. ಒಂದೊಂದುಸಲ ಈ ಜಗತ್ತೆಲ್ಲ ಜ್ಯೋತಿರ್ಮಯರಾದ ಕಾಂತಿಯುಳ್ಳ ರೂಪಧಾರಿಗಳಾದ ದೇವತೆಗಳಿಂದ ಪರಿಪೂರ್ಣ ವಾಗಿ ಅವರು ಆಕಾಶಮಾರ್ಗದಲ್ಲಿ ಸಂಚಾರ ಮಾಡುತ್ತ, ಅವರ ದೇಹದ ಸುಗಂಧವು ನನ್ನ ಮಗಿನಲ್ಲಿ ಕು ಬುವುದು ; ಆದರೆ ಅವರಲ್ಲಿ ಯಾರೂ ನನ್ನ ಕಣ್ಣಿಗೆ ಕಾಣಿಸದೆ ಅವರ ಮಧ್ಯದಲ್ಲಿ ರಜನಿಯು ಮಾತ್ರ ಕಣ್ಣಿಗೆ ಬೀಳುವಳು. ಹಾ ! ರಜನಿ ! ಕಲ್ಲಿನಲ್ಲಿ ಇಷ್ಟು ಬೆಂಕಿಯುಂಟೆ ? ಮೆಲ್ಲಗೆ, ರಜನಿ, ವೆಲ್ಲಗೆ ! ಮೆಲ್ಲ ಮೆಲ್ಲಗೆ ಈ ಅ ಧನಯನಗಳನ್ನು ವಿಕಸಿತ ಮಾಡು, ನೋಡು, ನನ್ನನ್ನು ನೋಡು, ನಾನು ನಿನ್ನನ್ನು ನೋಡುತ್ತೇನೆ ! ಇಗೋ, ನೋತತ್ತೇನೆ. ನಿನ್ನ ನಯನವು ಕ್ರಮವಾಗಿ ಅರಳುವಹಾಗಿದೆ, ಮೆಲ್ಲ ಮೆಲ್ಲಗೆ ಕ್ರಮಕ್ರಮವಾಗಿ ನಯನ ರಾಜೀವವು ಅರಳುವಹಾಗೆ ಕಾಣುತ್ತದೆ ! ಈ ಪ್ರಪಂಚದಲ್ಲಿ ಯಾರಿಗೆ ತಾನೇ ಕಣ್ಣಿಲ್ಲ, ದನ, ಮೇಕೆ, ನಾಯಿ, ಬೆಕ್ಕು ಎಲ್ಲದಕ್ಕೂ ಕಣ್ಣುಂಟು ನಿನಗೆ ಇಲ್ಲವೆ ? ಇಲ್ಲ. ಇಲ್ಲ. ಹಾಗಾದರೆ ನನಗೂ ಇಲ್ಲ. ನಾನೂ ಇನ್ನು ಕಣ್ಣುಗಳನ್ನ ವೀಕ್ಷಿಸುವುದಿಲ್ಲ, mi+
- w