ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೬
ಸತೀಹಿತೈಷಿಣೀ

ನಾನೃತಂ ' ' ಧರ್ಮೊವರ್ಧತಿ, ವರ್ಧತಿ' ಎಂಬೀ ಸೂತ್ರಗಳನ್ನು ಮುಂದಿಟ್ಟು ಕೊಂಡು, ಪಾರಮಾರ್ಥಿಕಬುದ್ಧಿಯಿಂದ ಸ್ವಲ್ಪ ಕರ್ತವ್ಯದಲ್ಲಿ ಹಾಗೂ ದೇಶಸೇವೆ, ಲೋಕಹಿತಕಾರ್ಯಗಳಲ್ಲಿ ಯೇ ನಿರತನಾಗಿ ತನಗೆ ಅಹಿತವನ್ನುಂಟುಮಾಡುವವರಲ್ಲಿ ಕೂಡ ಕೋಪಿಸದೆ ಶಾಂತನಾಗಿ, ಅವರ ಅಭ್ಯುದಯವನ್ನು ಕೋರುತ್ತಿರುವನು. ಇಂತಹ ಲೋಕೋತ್ತರಗುಣಸಂಪನ್ನ ನಾದ ಕುಮಾರನ ವಿಚಾರದಲ್ಲಿ ಮೂರ್ತ ನಾದ ರವಿವರ್ಮನೂ ಅವನ ಸಂಗಡಿಗರೂ ನಡೆಯಿಸಿರುವ ದೌಷ್ಟ್ಯ ವನ್ನು ನೋಡಿದರೆ ಏನನ್ನಬಹುದು ? ಆಹಾ! ಒಡಹುಟ್ಟಿದ ಪ್ರೀತಿಯು ಸ್ವಲ್ಪವಾದರೂ ಬೇಡವೆ ? ಹೋಗಲಿ: ತಮ್ಮ ಅಧರ್ಮಪ್ರವರ್ತನೆಗೆ ಫಲವೇನೆಂದಾದರೂ ಯೋಚಿಸಬೇಡವೆ ? ಹೀಗೂ ವಂಚನೆಯೇ ? ಹೀಗೂ ದ್ರೋಹವೇ ? ಇಷ್ಟರ ಅತ್ಯಾಚಾರವೇ ? ಸುಡು-ಸುಡು ! ದುರಾಚಾರಿಗಳ ದುರ್ಜೀವನವನ್ನು ಸುಡುಸುಡು |! ಅವರ ಕಪಟ, ಕುಟಿಲ, ವೇಷಭಾಷೆಗಳಿಗೆ ಧಿಕ್ಕಾರವಿರಲಿ, ಆಗಲಿ; ಮಾಡಲಿ, ಇದ ರಿಂದ ಸತ್ಯ ಪರಾಕ್ರಮಿಯಾದ ನಮ್ಮ ರಮಾನಂದ ಕುಮಾರನಿಗೇನೂ ಅಪಘಾತವಾಗುವಂತಿಲ್ಲ. ರಮಾನಂದನು ಸನ್ಮಿತ್ರರ ಪ್ರಬಲಸಹಾಯ ಸಂ ಪತ್ತಿಯಿಂದ ಸುಕ್ಷೇಮಿಯಾಗಿಯೇ ಇರುವನು. ಹಾಗೆ ಆತನಿಗೆ ಸಹಾಯಸಂಪತ್ತಿಯಿಲ್ಲದಿದ್ದರೆ, ಈ ಮೂರ್ಖರ ದ್ರೋಹಗಳಿಂದ ಆತನು ವಿಧ್ಯಾ ಪವಾದಕ್ಕೆ ತುತ್ತಾಗುತ್ತಿದ್ದುದು ಮಾತ್ರವಲ್ಲ ದೆ, ಅಪ ಮೃತ್ಯುವಿಗೂ ಬಲಿಯಾಗುತ್ತಿದ್ದನು. ಆದರೆ, ಈಗ ಇನ್ನಷ್ಟು ದಿನಗಳು ಹೀಗಿದ್ದು ತೀರುವುದು ಇದಕ್ಕೆ ಪ್ರತೀಕಾರ ಮಾಡಲೇ ಬೇಕಲ್ಲವೆ? ಚಿಃ 1 ಚಿಃ !! ಹೆತ್ತೊಡಲನ್ನು ಹಿಡಿದು ಕಟ್ಟುವುದು ಬಲುಕಷ್ಟ. ಮೊದಲೇ ರವಿವರ್ಮನ ದುರ್ನಡತೆ, ಅವಿಧೇಯತೆಗಳನ್ನು ಕುರಿತು ಚಿಂತಿಸುತ್ತಿದ್ದವರಿಗೆ, ರಮಾನಂದನ ಈಗಿನ ಸಂದಿಗ್ಧ ವಿಷಯವೂ, ಆತನ ಮೇಲೆ ಹೊರಿಸಲ್ಪಟ್ಟಿರುವ ಮಿಥ್ಯಾಪವಾದವೂ ಮತ್ತಷ್ಟು ಯಾತನೆಯನ್ನೇ ಉಂಟು ಮಾಡಿರುವುದರಲ್ಲಿ ಆಶ್ಚರ್ಯವೇನು ?