ಪುಟ:ರಮಾನಂದ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧oL ಸಹಿತೈಷಿಣೀ ಯ್ಯುವವರಿಗೆ ಆತನ ಪರೋಕ್ಷದಲ್ಲಿ, ಬೇರೆ ಬೀಗದ ಕೈಗಳಿಂದ ಆತನ ಕಿರ ಮನೆಯಲ್ಲಿದ್ದ ಪೆಟ್ಟಿಗೆಗಳಲ್ಲಿ ಇವನ್ನು ಅಡಗಿಸಬಾರದೇಕೆ ? ಅಲ್ಲ ವೇ ಕಳಿಂಗ! ಕಳಿಂಗ:- ಹೇಗೆ ? ಅಷ್ಟು ಧೈರ್ಯ ಸಾಹಸಗಳು ಯಾರಿ 5 ಗುಂಟು? ಕ್ಷೇಮ:-ಮತ್ತಾರಿಗೂ ಇಲ್ಲ, ಹಿಂದೆಮುಂದೆ ನೋಡದೆ, ಅನ್ಯರ ಮೇಲೆ ಆರೋಪಿಸುವುದಕ್ಕೂ, ಅನ್ಯರ ಹೆಸರಿನಲ್ಲಿ ಅಲ್ಲದ, ಸಲ್ಲದ ಸುಳ್ಳು ಕಾಗದಗಳನ್ನು ಹುಟ್ಟಿಸುವುದಕ್ಕೂ, ಗುರುವಿಗೇ ನಾಮ ವಿಡುವುದಕ್ಕೆ ಯಾರು ಧೈರ್ಯ-- ಸಾಹಸಗಳನ್ನುಳ್ಳವರೋ, ಅವರೇ 10 ಇದಕ್ಕೂ ಶಕ್ತರು, ಉಪಾ:- ಇದೆಲ್ಲವನ್ನೂ ಹೇಗೆ ತಿಳಿದೆ? ಕ್ಷೇಮ:- ಹೇಗೆಂದರೆ--ತಿಳಿದೇ ಇದೆಯಷ್ಟೆ; (ಕಳ್ಳನ ಜಾಡ ಕಳ್ಳನಿಗರಿವ.' ಉಪಾ:- ಏನು ಏನು! ನೀನೇ ಪತ್ತೇದಾರನೇ? 15 ಕ್ಷೇಮ:-ದುರಹಂಕಾರಿಗಳಾದ ರವಿವರ್ಮಾದಿಗಳ ಗರ್ವ ಭಂಗಕ್ಕೆ ಮತ್ತಾರು ನಿಲ್ಲ ಬೇಕು ? ನನಗಲ್ಲದೆ ಮತ್ತಾರಿಗೆ, ಇವರ ಒಳಗುಟ್ಟು ತಿಳಿಯುವುದು? ಉಪಾ:-ಏನು? ಇವರ ಒಳಗುಟ್ಟು ಬೇರೆ ಇದರ ? ಕ್ಷೇಮ:- ಮತ್ತೆ ಹೇಗೆ ? ವೃಶ್ಚಿಕ ಸರ್ಪ ಗಳು ವಿಷವನ್ನು 20 ಒಂದೇ ಬಾರಿಗೆ ಹೊರಗೆ ಚಲ್ಲುವವೆ? ಅಂತರಂಗದಲ್ಲಿ ಅಡಗಿಸಿಕೊಂ ಡಿದ್ದೇ ಜನವನ್ನು ಕೊಲ್ಲು ವವಲ್ಲ ವೆ? ಉಪಶ:- ಹಾಗಾದರೆ ರಮಾನಂದನು ನಿರ್ದೋಷಿಯೆಂದು ಹೇಳಬಲ್ಲಿಯಾ? ಕ್ಷೇಮ:-ನಾನೇಕೆ ಹೇಳಲಿ ? ದ್ರೋಹಿಗಳ ಬಾಯಿಂದಲೇ 25 ಹೊರಡಿಸಿ, ಅವನನ್ನು ಜಗತ್ತೇ ಹೊಗಳುವಂತೆ ಮಾಡುವೆನು, ಅಷ್ಟೆ!