ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೬
ಸತೀಹಿತೈಷಿಣೀ

ಆತುರವೇನು??

ಸುಮುಖ:- ಇದೊ ಕುಮಾರನು ಸನ್ನಿಧಾನಕ್ಕೆ ಈ ವಿಜ್ಞಾ ಪನಪತ್ರಿಕೆಯನ್ನು ಸಮರ್ಪಿಸಿರುವನು (ಎಂದು ಪತ್ರಿಕೆಯನ್ನು ಕೈಯಲ್ಲಿ ಕೊಡಹೋಗುವನು)

ಉಪಾ: ~ ಏನೆಂದು ಬರೆದಿರುವನು? ಓದಿಹೇಳು.

ಸುಮುಖಃ- ಅಪ್ಪಣೆ' (ಹೀಗೆ ಓದುವನು)

" ಪರಮ ಪೂಜ್ಯರಾದ ಗುರುದೇವರ ಚರಣಾರವಿಂದಗಳಲ್ಲಿ, ವಿಧೇಯನಾದ ಬಾಲಕನ ವಂದನೆ, ನಿವೇದನಗಳು, ನಮ್ಮ ಹಿತೈಷಿಯೂ, ಪೂಜ್ಯನೂ, ಬಾಲ್ಯಶಿಕ್ಷಕನೂ ಆದ ಕ್ಷೇಮದರ್ಶಿ-ಸಚಿವಾಗ್ರಣಿಯ ಮುಖದಿಂದ ನಿರೂಪಿಸಿದ ವಿಚಾರಗಳನ್ನು ತಿಳಿದೆನು, ನನ್ನ ವಿಷಯದಲ್ಲುಂಟಾದ ಅನುಗ್ರಹಕ್ಕಾಗಿ ಸಂತೋಷ ಪಡುತ್ತಿರುವೆನಾದರೂ ನನ್ನ ಅಗ್ರಜನೂ, ಪ್ರೀತಿಪಾತ್ರನೂ ಕುಲೋದ್ದಾರಕನೂ ಆಗ ಬೇಕಾಗಿರುವ ರವಿವರ್ಮನಲ್ಲಿಯೂ ಆತನ ಸಂಗಡಿಗರಲ್ಲಿಯೂ ತೋರಿಸಿದ ಕಾರಣಕ್ಕಾಗಿ ನಾನು ಅತ್ಯಂತ ವಿಷಾದ ಪಡುತ್ತಿರುವೆನು. ಅವರು ನನಗೆ ಕೆಡುಕನ್ನು ಮಾಡಬೇಕೆಂದು ಪ್ರಯತ್ನ ಪಟ್ಟರಾದರೂ, ನನಗೆ ಯಾವ ಕೆಡುಕೂ ಉಂಟಾಗಲಿಲ್ಲ. ಅವರಿಂದ ನನಗೆ ಮತ್ತೂ ಅನುಕೂಲವೇ ಉಂಟಾಗಿರುವುದು, ಮತ್ತು ಯಾವುದೇ ಒಂದು ಬಹುಮಾನಕ್ಕಾಗಲೀ ಯಾರು ಅಗ್ರಸ್ಥಾನವನ್ನು ವಹಿಸಬೇಕಾಗಿರುವದೋ ಅ೦ತಹ ನನಗೆ ಸನ್ಮಾನನೀಯನಾದ ರವಿವರ್ಮನನ್ನು ಆತನ ಸಹಚರರೊಡನೆ ನಿರ್ಬ೦ಧದಲ್ಲಿಡುವಾಗ ನಾನು ಉತ್ಸವದಲ್ಲಿ ಹೇಗೆ ಮೆರೆಯಬಲ್ಲೆನು? ಇಷ್ಟು ಕಠಿಣವಾದ ಶಿಕ್ಷೆಗೆ ನಾನು ಅರ್ಹನಾಗಿಲ್ಲವಾದುದರಿಂದ, ಅವರನ್ನು ಮುಂದಿಟ್ಟು ಮಾಡುವ ಉತ್ಸವಕಾರ್ಯಕ್ಕಲ್ಲದೆ, ಮತ್ತೆ ನನ್ನನ್ನು ಮಾತ್ರವೇ ಬೇರೆಯಾಗಿ ಮೆರೆಯಿಸಬಾರದೆಂದೂ, ಆ ನನ್ನ ಅಗ್ರಜನಿಗೆ ಯಾವ ಶಿಕ್ಷೆಯು ವಿಧಿಸಲ್ಪಟ್ಟಿರುವುದೋ, ಅದೇ ಶಿಕ್ಷೆಯಲ್ಲಿ ನನ್ನನ್ನೂ ಭಾಗಿಯಾಗಿರುವಂತೆ ಮಾಡಬೇಕೆಂದೂ