ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೫

 ಯೆಂಬುದು ಸಾಮಾನ್ಯ ವಿಷಯವಲ್ಲ; ಅದರ ಪ್ರಭಾವವು ಅದ್ಭುತವು!
ಹೇಗೆನ್ನು ವೆಯೋ
"ಮಾತೇವರಕ್ಷತಿ, ಪಿಶೇವ ಹಿನಿಯುಙ್ಕೆ |
ಕಾಂತೇವಜಾಭಿರಮಯತ್ಥ ಪನೀಯಖೇದಂ ||
ಕೀರ್ತಿಂಚ ದಿಕ್ಷು ವಿಮಲಾಂ ವಿತನೋತಿಲಕ್ಷ್ಮೀಂ |5
ಕಿಂ-ಕಿಂ-ನಸಾಧಯತಿ' ಕಲ್ಪಲತೇವ ವಿದ್ಯಾ ||"*
ಎಂದು ಸೂತ್ರವಿರುವುದರಿಂದ ಅಂತಹ ಕಲ್ಪಲತೆಯನ್ನು ಕೈವಶಪಡಿಸಿ
ಕೊಳ್ಳಲು ಸದ್ಗು ರುಸೇವೆಯನ್ನು ಮಾಡಬೇಕಾಗಿರುವುದು.
ರಮಾನಂದ:- ಶಿರಸಾವಹಿಸಿದೆನು.
ಶ್ರೀಮಂತ:- ಮಗುವೆ! 'ಗುರುದೈವಂ ವಿದ್ಯಾರ್ಥಿಗೆ' ಎಂದಿ 10
ರುವದರಿಂದ ಇನ್ನು ಮುಂದೆ ನಿನಗೆ ಪರದೈವಸ್ವರೂಪವಾಗಿರುವ ಗುರು
ವರರೇ- ಇಲ್ಲಿ ಮಂಡಿಸಿರುವರು. ಇವರಿಗೆ ಭಕ್ತಿಪೂರ್ವಕವಾಗಿ ವಂದಿಸು.
ರಮಾನಂದ:- (ವಿನಯದಿಂದ ಬಂದು ವಿದ್ಯಾವಾಗೀಶನಿಗೆ ಕೈಮುಗಿ
ಯುತ್ತ) ಪೂಜ್ಯರಿಗೆ ವಂದನೆ.15
ವಿದ್ಯಾ:- (ಕೈಹಿಡಿದೆತ್ತಿ) ವತ್ಸ ! ಯಶಸ್ವಿಯಾಗಿ ಬಾಳುವೆ.
ರಮಾನಂದ:- ಪೂಜ್ಯರೆ ! ಅನುಗ್ರಹಬುದ್ಧಿಯು ಬಾಲಕನ
ವಿಷಯದಲ್ಲಿ ಸ್ಥಿರವಾಗಿರಬೇಕು.
ವಿದ್ಯಾ :- ಭಲೆ! ಕುಮಾರ|ಮೇಲುಮಾತಾಡಿದೆ, ಅಹುದು!


* ಪೋಷಣೆಯಲ್ಲಿ ತಾಯಿ; ವಿವೇಕಬೋಧೆಯಲ್ಲಿ ತಂದೆ; ಕ್ಲೇಶನಿವಾರಣೆ
ಯಲ್ಲಿ ಅಭಿರಾಮ ( ಆಹ್ಲಾದ ) ಗುಣಾತ್ವಿಕೆಯಾದ ಕಾಂತೆ; ದಿಗಂತವ್ಯಾಪಕವಾದ
ಯಶಸ್ಸು; ನಿರ್ದುಷ್ಟವಾದ--ಶಾಶ್ವತವಾದ ಸಂಪತ್ತಿ; ಇಂತಿಷ್ಟು--ಇನ್ನೂ--ಅನೇಕ
ಗುಣಗಳಿಂದ-ಸುಖ--ಭೋಗ--ಸಂಸದ ಅಭ್ಯುದಯಗಳನ್ನು ಕೊಡುವ-ಸಾಕ್ಷಾತ್
ಕಲ್ಪಲತೆಯಾದ ವಿದ್ಯೆಯು ಮತ್ತಾವುದನ್ನು ತಾನೆ ಸಾಧಿಸಿಕೊಡಲಾರದು? ಎಂಬ
ಅಭಿಪ್ರಾಯ.