ಪುಟ:ರಮಾನಂದ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸತೀಹಿತೈಷಿಣೀ ನಮಸ್ಕರಿಸು. ರವಿ:- ನನ್ನ ಅಭಿಮತವೂ ಅದೇ ಆಗಿರುವುದು. ' ( ಮುಂದೆ ಬಂದು ವಿದ್ಯಾವಾಗಿ ಶನಿಗೆ ತಲೆಬಾಗಿ ವಂದಿಸುತ್ತ ) -ಗುರುಸನ್ನಿಧಿಯಲ್ಲಿ ಪಿತೃ ವಾಕ್ಯದಿಂದ ಪ್ರೇರಿತನಾದ ನಾನು ವಂದಿಸುವೆನು.' 5 ವಿದ್ಯಾ:- ಭಗವಂತನು ಅನುಗ್ರಹಿಸಲಿ. ಶ್ರೀಮ೦ತ:- ಪೂಜ್ಯರೆ! ಸುಕುಮಾರರನ್ನು ತಮ್ಮ ವಶಕ್ಕೆ ಪ್ಪಿಸಿರುವೆನು. ಇನ್ನು ಮುಂದೆ ಇವರ ಶಿಕ್ಷಣವಿಚಾರವೆಲ್ಲವೂ ತಮ್ಮನ್ನೇ ಸೇರಿರುವುದು, ಹೆಚ್ಚು ಹೇಳಲಾರೆನು, ಇವರಲ್ಲಿ ದುರ್ಗುಣಗಳನ್ನು ಕಂಡಾಗ ಸಕ್ಕತೋರಿದ೦ತೆ ದಂಡಿಸುವುದಕ್ಕಾಗಲೀ, ಮತ್ತಾವ 10 ಪ್ರೋ ತ್ಸಾಹಕ್ಕಾಗಲೀ ತಾವು ಸಂಪೂರ್ಣ ಸ್ವತಂತ್ರ ರಾಗಿರುವಿರಿ, ಈ ಭಾಗದಲ್ಲಿ ಹಿಂದೆಗೆಯದೆ, ಸರ್ವವಿಧದಲ್ಲಿ ಯ ಇವರು ತಮ್ಮ ಪುತ್ರ ವಗಳ ಕೈ ಸೇರಿದವರೆಂದೇ ತಿಳಿದು, ಇವರನ್ನು ಪರಿಗ್ರಹಿಸಬೇಕೆ ಬುದೇ ನನ್ನ ಪ್ರಾರ್ಥನೆ - ವಿದ್ಯಾ:- ಅಯ್ಕ ! ನೀನು ನನಗೆ ಇಷ್ಟು ದೂರ ಹೊಗಳಿ ಹೇಳ 15 ಬೇಕಾಗಿಲ್ಲ, ನನ್ನ ಕೆಲಸವನ್ನು ನಾನು ಮನಃಪೂರ್ವಕವಾಗಿ ಮಾಡದೆ ಬಿಡುವೆನೆಂದು ಶಂಕಿಸಬೇಡ. ಇನ್ನು ಮು೦ದೆ ನೀನು ಪುತ್ರರ ವ್ಯಾಸಂ ಗವಿಚಾರದಲ್ಲಿ ಚಿಂತಿಸದೆ, ನಿರಾತಂಕದಿಂದ ನಿನ್ನ ದೇಶಸೇವೆಯಲ್ಲಿ ನಿರತನಾಗಿರಬಹುದು. ಶ್ರೀಮಂತ:- (ರವಿವರ್ಮ-ರಮಾನಂದರನ್ನು ಕುರಿತು) ' ಸುಕುಮಾ 20 ರರೆ! ನಿಮಗೆ ಹೆಚ್ಚು ಹೇಳಲಾರೆನು. ನಿಮಗೆ ಈ ಪುಣ್ಯ ಮೂರ್ತಿಯೇ ಪರಮ ಗುರು, ಮತ್ತು ತಂದೆ, ಈತನ ಪರಿವಾರವೇ ನಿಮ್ಮ ಬಂಧುವರ್ಗ: ಈತನ ಸೇವೆಯೇ-ಆಜ್ಞಾನುವರ್ತನವೇ ನಿಮ್ಮ ನಿತ್ಯ ನೈಮಿತ್ತಿಕವೃತ್ತಿ. ಇದನ್ನು ತಿಳಿದು ಮನಸ್ಸು, ವಾಕ್ಕು ಕರ್ಮಗಳಲ್ಲಿಯೂ ನಿಷ್ಟಾಪಟ್ಯ ದಿಂದಿದ್ದರೆ, ಭಗವಂತನೂ ನಿಮಗೆ ಸಹಾಯಕನಾಗುವನು. ಇನ್ನು 25 ಇವರೊಡನೆ ಹೊರಡಲನುವಾಗಿರಿ.