ಪುಟ:ರಮಾನಂದ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ 1೬ ಬೃನೇ ವಿದ್ಯಾವಂತನೆಂಬ ಹೆಚ್ಚುಗೆಯಿಂದಲೂ ಯಾವದಾದರೂ ಒಂದು ನವದಿಂದ ಪ್ರತಿದಿನವೂ ನಮ್ಮನ್ನು ಹಂಗಿಸಿ, ಭಂಗಿಸುತ್ತಿರು ವುದನ್ನು ಕೂಡ ನೀವು ಬಲ್ಲಿ ರಲ್ಲವೆ? ಕಳಿಂಗ:-ಬಲ್ಲೆ ವ, ಬಲ್ಲೆವು. ರವಿ:-ಹೆಮ್ಮೆಗಾರನಾದ ಆತನು, ಅಣ್ಣನೆಂದು ಒಂದಿಷ್ಟಾ 5 ದರೂ ನನ್ನಲ್ಲಿ ಗೌರವಬುದ್ದಿಯನ್ನಿಡದೆ, ಹಾಗೆ ನನ್ನ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುತ್ತಿರುವನೆಂಬ ವಿಚಾರವು ನನ್ನ ಪರಮಾಪ್ತ ರಾದ ನಿಮಗೆ ವಿಷಾದವನ್ನು ೦ಟು ಮಾಡುವುದೂ ನಿಜವಷ್ಟೆ? ಕಳಿಂಗ:-ಸಂದೇಹವೇನು? ನ್ಯಾಯವಾಗಿ ಯಾರಿಗೆ ಪ್ರಥಮ ಸನ್ಮಾನವು ಸಲ್ಲ ಬೇಕೋ, ಅದು ಅವರಿಗೆ ದೊರೆಯದೆಯೇ ಹೋಗಿ 10 ಬೇರೊಬ್ಬನ ಕೈ ಸೇರುವುದೆಂದರೆ, ಎಂತಹ ನಾಚಿಗೆಗೇಡಿನ ಸಂಗತಿ? ನಿನಗೆ ದೊರೆಯಬೇಕಾದ ಮರ್ಯಾದೆಯು ಅವನ ಪಾಲಾದರೆ ವ್ಯಸ ನವಲ್ಲ ವೇನು? - ರವಿ:- ಅಯ್ಯ! ಬರಿಯ ಮರ್ಯಾದೆಯ ಮಾತು ಹಾಗಿರಲಿ. ಆತನು ನಮ್ಮ ವಿಚಾರವಾಗಿ ಉದಾಸೀನದಿಂದಾದರೂ ಇದ್ದರೆ 15 ಸಾಕೆಂದರೆ ಅದೂ ಇಲ್ಲ, ಅದರಲ್ಲಿಯ ಅವನು ನಿನ್ನೆ ಮಾಡಿದ ಅಪಮಾನವು ನನಗೆ ಎಂತಹ ಸಂಕಟವನ್ನುಂಟು ಮಾಡುತ್ತಿದೆಯೋ ಹೇಳಲಾದೀತೇ? ಕಳಿಂಗ:- (ಕುತೂಹಲದಿಂದ) ಆದೇನು? ಏನು ಮಾಡಿದನು? ರವಿ:- ನಿಟ್ಟುಸಿರಿಟ್ಟು) ಆಯ್ಯ! ಏನು ಹೇಳಲಿ? ನಿನ್ನೆ, ನಾನು 20 ಶಾಲೆಯ ಬಾಲೋದ್ಯಾನದ ಬಳಿಗೆ ಹೋದೆನು. ಅಲ್ಲಿ ತನ್ನ ಸಂಗಡಿ | ಗರೊಡನೆ ಚಲ್ಲಾಟವಾಡುತ್ತಿದ್ದ ಆತನು ನನ್ನನ್ನು ಕಂಡೊಡನೆಯೇ ಅಟ್ಟಹಾಸದಿಂದ ಮೆರೆದನು. ಕಳಿಂಗ:- ಹೇಗೆ ಮೊರೆದನು? ಏನು ಮಾಡಿದನು? ನಿನ್ನಲ್ಲಿ ಕದನಕ್ಕೇನಾದರೂ ಬಂದನೇನು? 25