ರವಿ:-ಇಲ್ಲ, ಹಾಗೆ ನನ್ನೊಡನೆ ಕದನಕ್ಕೆ ಬಂದಿದ್ದರೆ, ಆತನಿಗೆ ಆಗಲೇ ಸರಿಯಾದ ಪ್ರಾಯಶ್ಚಿತ್ತವನ್ನು ತೋರಿಸುತ್ತಿದ್ದೆ, ಅದನ್ನು ಅವನೇನೂ ತಿಳಿಯದವನಲ್ಲ.
ನಳ:-ಹಾಗಾದರೆ ಮತ್ತೇನು ಮಾಡಿದನು?
ರವಿ:- ತನ್ನ ಪ್ರೌಢಿಮೆಯನ್ನು ಕುರಿತು ಹೊಗಳಿಕೊಳ್ಳುತ್ರ, ನನ್ನನ್ನು ವಾಕ್ಶಲ್ಯದಿಂದ ಬಲವಾಗಿ ನೋಯಿಸಿದನು.
ನಳ:-(ಕುತೂಹಲದಿಂದ) ಏನೆಂದು ಹೇಳಿದನು? ಬಿಚ್ಚಿ ಹೇಳ ಬಹುದಷ್ಟೆ?
ರವಿ:- ಕಳ್ಳನಾಗಬೇಡ; ಸುಳ್ಳುಗಾರರೊಡನೆ ಸೇರಬೇಡ; ಮೈಗಳ್ಳರೊಡನಾಡಿ, ಮೇಲಾದ ವಿದ್ಯೆಯನ್ನು ತೊರೆಯಬೇಡ;
ತಾಯ್ತಂದೆಗಳ ಶೋಕಕ್ಕೆ ನೀನೆಂದಿಗೂ ಕಾರಣನಾಗಬೇಡ.” ಹೀಗೆ ಹೇಳಿ ನನ್ನನ್ನು ನಿರ್ಲಕ್ಷ್ಯವಾಗಿ ಕಂಡು ಅಗೌರವಪಡಿಸಿದನು.
ಕಳಿಂಗ:-ಆಹಾ! ಹೀಗೂ ಹೆಮ್ಮೆಯುಂಟೋ? ಇರಲಿ, ಈ ಹೆಮ್ಮೆಯು ಎಲ್ಲಿಯವರೆಗೆ ನಿಂತಿರುವುದೆಂಬುದನ್ನು ನಾನೂ ನೋಡದೆ ಹೋಗುವುದಿಲ್ಲ!
ನಳ:- ಅಯ್ಯ! ಆತನು ನಿನಗೇನೂ ಅಹಿತವನ್ನು ಹೇಳಿಲ್ಲ ಅದನ್ನು ಹೇಳಿರುವುದು ನಿನ್ನ ಸಂಗಡಿಗರಾದ ನಮ್ಮನ್ನು ಕುರಿತು ಹೇಳಿದ ಮಾತಾಗಿದೆ. ಇದಕ್ಕೆಕೆ ನಿನಗೆ ಚಿಂತೆ?
ರವಿ:-(ನಿಟ್ಟುಸಿರಿಟ್ಟು) ಅಯ್ಯ, ಮಿತ್ರನೆ! ಕೈ, ಕಾಲು, ಕಣ್ಣು. ಕಿವಿಗಳಲ್ಲಿ ಯಾವುದಕ್ಕೆ ಏಟುಬಿದ್ದರೂ, ಆತ್ಮನು ಕ್ಲೇಶಪಡುವನಲ್ಲವೆ? ಏಕದೇಹ ನ್ಯಾಯದಿಂದ ವರ್ತಿಸುತ್ತಿರುವ ನಮ್ಮಲಿ ಯಾವ ಒಬ್ಬನನ್ನು ಹಳಿದರೂ, ನಮಗೆಲ್ಲರಿಗೂ ಅದು ಸೇರಿದಂತಲ್ಲವೇ? ಇದರಿಂದ ನಮ್ಮ ಚಿತ್ತವು ಅಪಮಾನಾಗ್ನಿಗೆ ತುತ್ತಾಗಿ ತಪಿಸುವುದೂ ಸ್ವಭಾವವಲ್ಲವೇ?
ಕಳಿಂಗ:-ಓಹೋ! ಸಂದೇಹವೇ ಇರುವುದಿಲ್ಲ. ಇದು
ಪುಟ:ರಮಾನಂದ.djvu/೫೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಸತೀಹಿತೈಷಿಣೀ