ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸತೀಹಿತೈಷಿಣೀ
೪೦

ಖಗನಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಿಂದೂಪರೇ |
ಪಗೆಯ೦ ಬಾಲಕನೆಂಬರೇ ........................(ಪ. ಸಾ.)
ಎಂದೀಬಗೆಯಿಂದ ದೇಶಕಾಲಸ್ಕೃತಿಗಳನ್ನು ಬಲ್ಲ ಕವಿವರನೇ ಹೇಳಿಲ್ಲವೇ?
ನಳ:-ರಮಾನಂದನನ್ನು ಹಾಗೆಯೇ ಬಿಡಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಆದರೆ, ಕಬ್ಬಿಣ ಕಾದಾಗ ಬಡಿಯಬೇಕಲ್ಲದೆ ದುಡುಕಿದರೆ ಕೆಡುವುದಷ್ಟೆ?
ಕಳಿಂಗ:-ನಿಜ.'ಸಮಯಸಿಕ್ಕಿದಾಗಲೇ ಶತ್ರುನಿಗ್ರಹ ಮಾಡು.' ಎಂಬ ನೀತಿಯುಂಟು.
10 ರವಿ:-ಅಹುದು, ನಿಮ್ಮ ಹಿತಸೂಚನೆಯು ,ಸರಿಯಾಗಿಯೇ ಇರುವುದು, ಆದರೂ, ಸಮಯವೆಂಬುದು ನಮ್ಮ ಪ್ರಯತ್ನವಿಲ್ಲದೆ. ದೊರೆಯಲಾರದಷ್ಟೆ?
ನಳ:-ಹಾಗಾದರೆ, ನಮ್ಮ ಪ್ರಯತ್ನ ವ ಯಾವ ಬಗೆಯದಾಗಿರ ಬೇಕು? ಪ್ರಯತ್ನ ದಿಂದ ಸಮಯವು ಹೇಗೆ ದೊರೆವುದು?
15ರವಿ: ಹೇಗಿರಬೇಕು, ಹೇಗೆ ದೊರೆಯುವುದು-ಎಂದರೆ, ಕಾಲ-ಕರಣಗಳನ್ನು ನೋಡಿ, ಕಾರ್ಯ ಸಾಧನೆಗೆ ತಕ್ಕಂತೆ ಸಾಧನ. ಗಳನ್ನು ಹವಣಿಸಿಕೊಳ್ಳುವುದೇ ನಮ್ಮ ಪ್ರಯತ್ನವಾಗಿರುವುದು. ಅಂಥದರಿಂದ ವೈರಿಯ ಪ್ರತಿಷ್ಠಾಭಂಗಮಾಡುವುದೇ ನಮಗೆ ದೊರೆ ಯತಕ್ಕ ಸಮಯವಾಗಿರುವುದು, ಹಾಗೆ ಮಾಡದೆ, ಸಮಯವನ್ನು 20 ನಿರೀಕ್ಷಿಸುತ್ತ ಕುಳಿತರೆ ಉದ್ದೇಶಭಂಗವಾಗುವುದಲ್ಲದೆ ಮತ್ತಾವ ಪ್ರಯೋಜನವೂ ಆಗುವುದಿಲ್ಲ.
ನಳ:- ಆಗಲಿ; ಯಾವರೀತಿಯಿಂದ ಕಾರ್ಯ ಸಾಧನೆ ಮಾಡಬೇ ಕೆಂದು ಯೋಚಿಸುತ್ತಿರುವೆ?
ರವಿ:- ಮತ್ತೇನು ? ಆತನ ಹೆಮ್ಮೆಯಡುಗುವಂತೆಯೂ ಸಹ 25 ವಾ ಸಬಲದಿಂದ ಪ್ರತ್ಯೇಕಿಸಲ್ಪಡುವಂತೆಯೂ, ಗುರುಸಮ್ಮುಖದಲ್ಲಿ