ಪುಟ:ರಮಾನಂದ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೀ. ಅಷ್ಟರ ಪ್ರಾಶಸ್ತ್ರ? - ರಮಾನಂದ:- ವಿನಯವೇ ವಿದ್ಯಾರ್ಥಿಯು ಅರ್ಥ ಸಿದ್ಧಿಗೆ ಮುಖ್ಯ ಸಾಧನವು, ಅದಿಲ್ಲದಿದ್ದರೆ, ವಿದ್ಯಾ ಲಾಭವಾಗುವುದಿಲ್ಲ. ಏಕೆಂದರೆ,- 1••••••••• ವಿನಯಹೀನನ ವಿದ್ಯೆಯುಂ, ನಂದನನ 5 ಪಡೆಯದ ನರನಸಿರಿಯುಂ ಜಗದಿ ನಿಷ್ಪಲಿ - ಎಂದು ಬಲ್ಲವರಿಂದ ಹೇಳಲ್ಪಟ್ಟಂತೆ, ಪುತ್ರ ಪ್ರಾಪ್ತಿಯಿಲ್ಲ ದವನ ಸಂಪತ್ತಿಯು ಹೇಗೆ ಊರ್ಜಿತ ಸ್ಥಿತಿಯನ್ನು ಹೊಂದುವುದಿಲ್ಲ ವೋ ಹಾಗೆಯೇ ವಿನಯವಿಲ್ಲದೆ ವನ ವಿದ್ಯಾಭ್ಯಾಸವೂ ನಿರಂತರಾಯವಾಗಿ ನಡೆಯಲಾರದೆ ಹೋಗು ವುದು. ಆದುದರಿಂದಲೇ ನಾವು ವಿನೀತರಾಗಿರಬೇಕು. 10 ಯುವಾನ;- ವಿನಯವೆಂದರೆ ಯಾವುದು? ಹೇಗಿದ್ದರೆ ವಿನೀ ತನೆನ್ನಿ ಸಬಹುದು? ರಮಾನಂದ:- ಯಾರಲ್ಲಿಯೇ ಆಗಲಿ, ಮಲೆತು ಮರ್ಯಾದೆ ಯನ್ನು ಮೀರಿ ನಡೆಯುವ ಕೆಟ್ಟ ನಡತೆಯನ್ನು ಬಿಟ್ಟು, ವಿಧೇಯನಾಗಿ ಎಂದರೆ ವಿಶ್ವಾಸಪೂರ್ವಕವಾದ ಗೌರವಬುದ್ದಿಯಿಂದ ನಡೆಯುತ್ತ 15 ತನ್ನ ಅನುವರ್ತನ ಗುಣದಿಂದ ಇತರರ ಮನಸ್ಸನ್ನು ಪ್ರಸನ್ನ ವಾಗು ವಂತೆ ಮಾಡಿಕೊಳ್ಳು ವುದೇ, ವಿನಯದ ಗುಣವಾಗಿರುವುದು, ಇದನ್ನು ಹೊಂದಿರುವವನೆ ವಿನಯಶೀಲ ಅಥವಾ ಸುವಿನೀತನೆಂದು ಕರೆಯ ಲ್ಪಡುವನು. ಇಂಥವನೇ ವಿದ್ಯಾ ಲಾಭವನ್ನು ಹೊಂದಲು ಅರ್ಹನಾ ದವನು. 20 ಸೌಮ್ಯ:- (ಕಿರುನಗೆಯಿ೦ದ) ಹಾಗಾದರೆ, ವಾಲ್ಮಾತ್ರದಲ್ಲಿ ಮಾಧುರ್ಯವನ್ನು ತೋರಿಸುತ್ತ ಕಾರ್ಯ ಸಾಧನೆಯಾಗಲು ತಳ್ಳಿಬಳ್ಳಿ ನಡೆದರೆ ಸಾಕಲ್ಲ ವೆ? - ರಮಾ:- (ತಲೆದೂಗಿ ನಕ್ಕು) ಚೆನ್ನಾಗಿ ಕೇಳಿದೆ, ಸೌಮ್ಯನೆ! ಆ ಬಗೆಯ ಅಂತರಂಗದಲ್ಲಿ ತಮ್ಮ ಕಾಪಟ್ಯವನ್ನು ಅಡಗಿಸಿಕೊಂಡು, 25 ಮೇಲೆ ವಿನಯಶೀಲರಂತೆ ತೋರಿಸುವ ನಟನೆಯು ಧೂರ್ತರಿಗೆ ಮಾ.