ಪುಟ:ರಮಾನಂದ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೪೭ ಸುಮುಖ:- ಏನು ಮಾಡುವನೆ೦ದರೆ, ತಿಳಿದೇ ಇಲ್ಲ ವೇ-ಖಲ ರನಡತೆಗಳನ್ನು : ಹಿತವನ್ನು ಹೇಳುವವರನ್ನು ಅತಿಯಾಗಿ ದ್ವೇಷಿಸಿ ಹಲವು ಗಂಡಾಂತರಗಳನ್ನೊಡ್ಡುವುದರಿಂದ ಅವರನ್ನು ಬಳಲಿಸಿ ನಲಿ ದಾಡುವುದು, ರಮಾ:-- (ನಕ್ಕು) * ಒಂದುವೇಳೆ ಆತನು ಹಾಗೆ ನನ್ನ ಮೇಲೆ 5 ಮುರಿದು ಬೀಳುವುದಾದರೂ, ನನ್ನ ಪರಿಶುದ್ಧಾಂತ:ಕರಣದ ಬಲವು ನನ್ನನ್ನು ಯಾವ ಅಘಾತಕ್ಕೂ ಗುರಿಮಾಡುವುದಿಲ್ಲವೆಂದೂ ತಿಳಿ ಗೇಡಿಯಾಗಿ ನಡೆದರೆ. ಅದರ ಫಲವು ಅವನಿಗೆ ಬಿಡುವಂತಹದಲ್ಲ ವೆಂದೂ ಚನ್ನಾಗಿ ತಿಳಿದಿರಿ. ಇದಕ್ಕೇಕೆ ಚಿಂತೆ ? - ಸೌಮ್ಯ:- ( ಕುತೂಹಲದಿಂದ) ಆಶ್ಚರ್ಯ! ಏಕಬೀಜೋತ್ಪನ್ನ 10 ವಾದ ಬೆಳೆಗಳಲ್ಲಿ ಯ ಭಿನ್ನ ಗುಣಗಳುಂಟಾಗಲು ಕಾರಣವೇನು? ರಮಾ:- ಮಿತ್ರರೆ! ಈ ನಿಮ್ಮ ಪ್ರಶ್ನೆಯು ಬಹು ಕಠಿಣಸನ ಸೈಯಾಗಿರುವುದು, ಇದಕ್ಕೆ ಸಕಾರಣವಾದ ಸಮಾಧಾನವನ್ನು ಕೊ. ಡಬೇಕಾದರೆ, ಪೂರ್ಣ ಪಾಂಡಿತ್ಯವಿರಬೇಕು, ಆದರೂ ನನ್ನ ಅಲ್ಪ ಬುದ್ದಿಗೆ ತಕ್ಕಂತೆ ಉತ್ತರವನ್ನು ಕೊಡದಿರುವುದು ಸರಿಯಲ್ಲವಷ್ಟೆ, 15

  • ಸುಮುಖ:- ನಿಜ, ತಿಳಿದುದನ್ನು ಮುಚ್ಚಿಡದೆ, ಬಿಚ್ಚಿ ಹೇಳು ಇದೇ ಗುಣವಂತರ ಶೀಲವ, ಹಾಗೂ ನಿನಗೆ ತಿಳಿದುದನ್ನೇ ಹೇಳ ಬೇಕೆಂದವಲ್ಲದೆ, ತಿಳಿಯದುದನ್ನು ಕೇಳಲಿಲ್ಲ,

- ರಮಾ:- ಹಾಗಿದ್ದರೆ ಕೇಳಿರಿ, ಯಾವ ವಸ್ತುವೇ ಆಗಲಿ, ಮತ್ತೊಂದರ ಸಹವಾಸ, ಸಂಸರ್ಗಗಳಿಂದ ತನ್ನ ಸ್ವಭಾವಸಹಜವಾದ 20 ಗುಣವನ್ನಲ್ಲದೆ, (ಒಂದುವೇಳೆ ಅದನ್ನೂ ಬಿಟ್ಟು) ತಾನು ಕಲೆತ ವಸ್ತುವಿನ ಗುಣವನ್ನು ಅನುಕರಣ ಮಾಡುವುದೆಂಬುದನ್ನು ನೀವೂ ಬಲ್ಲಿ ರಷ್ಯ? ಹೇಗೆಂದರೆ- ಈಗನೆಡಿರಿ, ನಾಗವಲ್ಲಿ (ವಿಳ್ಳೆಯದೆಲೆಯ ಬಳ್ಳಿಯು ಒಂದೇ ಪಾತಿಯಲ್ಲಿ ಹುಟ್ಟಿ ಬೆಳೆದು, ಒಂದೇಜಾತಿಯ ಬಳ್ಳಿಗಳಾಗಿ | ದ್ದರೂ, ಪೂಗ (ಅಡಕೆ) ವೃಕ್ಷವನ್ನಾಶ್ರಯಿಸಿದುದು, ತನ್ನ ಜನ್ಮ ಸಹಜ 25