ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಸತೀಹಿತೈಷಿಣೀ

ಗುಣದೊಡನೆ, ಪೂಗಡ ವಿಶೇಷಗುಣವಾದ ಸವಿಯನ್ನೂ ಹೊ೦ದಿ, ತನ್ನನ್ನು ಸೇವಿಸುವವರಿಗೆ, ಮತ್ತು ನೋಡುವವರಿಗೆ ಎಷ್ಟೋ ಸುಖ ವನ್ನುoಟು ಮಾಡುವುದು, ಅದೇ ಜಾತಿಯ ಬಳ್ಳಿಯು ಪಾರಿವಾಳವ ಸ್ನಾಶ್ರಯಿಸಿದರೆ, ತನ್ನ ಸ್ವಭಾವಸಹಜಗುಣವನ್ನು ಬಿಟ್ಟು, ಪಾರಿವಾ 5 ಳದ ಮರದ ಗುಣವಾದ ಕಹಿಯನ್ನೆ ತಾನೂ ಹೊಂದಿ, ನೋಡುವು ದಕ್ಕೆ ಅಂದವೂ ಇಲ್ಲದೆ ಕೆಟ್ಟು ಹೋಗುವದು, ಮತ್ತೊಂದು ದೃಷ್ಟಾಂತ.

ಕಂದ|| ಆರಯೆ ತೊರೆಗಳ ಸೀ ಪಿನ |
ನೀರುಂ ವಾರಿಧಿಯ ನೀರಪೊರ್ದುಗೆಯಿಂದಂ || 10
ಸಾರಂಗೆಟ್ಟು ಸ್ಪಷ್ಟವೊ |
ಲಾರುಂ ದುರ್ಜನರ ಸಂಗದಿಂದಮೆ ಕಿಡುವರ್‌||

ಎ೦ಬ ಸೂತ್ರವೇ ನಾಕಾಗಿದೆಯಲ್ಲ ವೆ ?

ಸುಮುಖ:- (ರಮಾನಂದನ ಬೆನ್ನು ತಟ್ಟಿ) ಭಲೆ, ರಮಾನಂದ! ಭಲೆ ಭಲೆ!! ನೀನೇ ನಮ್ಮೆಲ್ಲರಿಗೂ ಆಶ್ರಯನಾದ ಪೂಗರಾಜನು, ನಾವು 15 ನಿನ್ನ ಆಶ್ರಯದಿಂದ, ನಿನ್ನ ವಿಶೇಷಗುಣವಾದ ಲೋಕಹಿತೇಚ್ಛೆಯಿಂದ ಪರಿಶೋಭಿಸಬೇಕೆಂದಿರುವ ನಾಗವಲ್ಲಿಯ ಲತೆಗಳು,
ಸೌಮ್ಯ:- ನಿಜ! ಹಾಗೆಯೇ ಸರಿ, ಆದರೆ ಮರ್ಖನಾದ ರವಿವರ್ಮ ಕುಮಾರನು, ಇಂತಹ ಲೋಕೊರಗುಣಸಂಪನ್ನ ನಾದ ಸೋದರನ ಸನ್ನಿತ್ರನೂ ಹಿತೈಷಿಯ ವಿವೇಕಿಯ ಆದ ರಮ 20 ನಂದನಲ್ಲಿ ಸಹೃದಯಭಾವದಿಂದಿರದೆ, ದ್ವೇಷಸಾಧನೆಯಲ್ಲಿ ದಾಯಾದ ಮಾತ್ಸರ್ಯವನ್ನು ಕಾರುತ್ತಿರುವುದು ಅವನ ದೌರ್ಭಾಗ್ಯವೇ ಅಲ್ಲದೆ ಬೇರಿಲ್ಲ.
ಯುವಾನ:- ಅದಕ್ಕೂ ಅದೃಷ್ಟವಿರಬೇಡವೆ?- 'ಯುಕ್ತಿಯು ಕ್ರವಚೊಗ್ರಾಹ್ಯಂ ಬಾಲಾದಪಿ, ಶುಕಾದಪಿ' ಎಂಬ ಸೂಕ್ತಿಯಂತೆ, 25 ನೀತಿಯನ್ನು ಸರ್ವವಿಧದಲ್ಲಿಯ ಸಂಗ್ರಹಿಸುವುದು ಬುದ್ಧಿವಂತರ