ಲಕ್ಷಣವು, ಬುದ್ದಿಹೀನರಿಗೆ ಅದು ಸರಿತೋರುವುದು ಹೇಗೆ ?
ಸೌಮ್ಯ: ಅಯ್ಯ! ಯುವಾನನ ವಿವೇಕಶೂನ್ಯರಿಗೆ, ಕಿಡು ಕರ ಕುಹಕಿಗಳು ಕಿವಿಗಿಂಪಾಗಿ ತೋರುವಂತೆ, ಹಿತೈಷಿಗಳ ಹಿತಬೋಧೆಯು `ರುಚಿಸುವುದಿಲ್ಲ.
ಸುಮುಖ:- ಸಹಜವಾಗಿಯೇ ಇದೆ, ನೆಳಲಂತ ತನ್ನ ನೈ 5 ನೆರೆನಂಬಿ ಸೇವಿಸುತ್ತಿರುವ ಸಾದ್ವಿಮಣಿಯಾದ ಪತ್ನಿಯನ್ನು ನಿರಾಕ ಡಿಸಿ, ವಾನ, ಧನ, ಕೀರ್ತಿ, ಭೋಗ್ಯ ಸಂಪದಗಳೆ೦ಬ ಸರ್ವಸ್ವವನ್ನೂ ಸೂರೆಗೊಳ್ಳುವ ವಾರವನಿತೆಯರಲ್ಲಿ ಮರುಳಾಗುವುದು, ದುರ್ಜನರ ಸ್ವಭಾವವೇ ಸರಿಯಷ್ಟೆ. ಇದಕ್ಕೆ ಮತ್ತೊಂದು ನೀತಿಯೂ ಉ೦ಟು,
ಕಂದ|| ಧರೆಯೊಳ್ ಸುಕಳತ್ರಂ |
10. ತನಗಿರೆಯುಂ ಪರದಾರಸಕ್ತ ನಪ್ಪಂ ನೀಚಂ | ಸರದೊಳ್ ವರಜಲಮಿರೆಯುಂ |
ಕರಟಿಂ ಕೂಳೆನೀರನೆಳೆಪುದಕ್ಕೆ ಸುಬುದ್ಧಿ' || (ಸ, ಶ.)
ಸೌಮ್ಯ: -'ಕಿಡುವವಗೆ ಹಿತರಿಲ್ಲ ; ಸಾಯುವವಗೆ ಮದ್ದಿಲ್ಲ ಎಂಬ ಗಾದೆಯು, ಅದೇನು, ಸುಮ್ಮನೆ ಹುಟ್ಟಿತೆ?
ಸುಮುಖ:- (ವಿನಾಶಕಾಲೇ ವಿಪರೀತ ಬುದ್ಧಿ: ' ಎಂಬಂತ ಆತನ ಮತ್ತು ಆತನ ಸಹಚರರ ಈ ದುರಾಚಾರವು ಅವರ ವಿನಾಶಕ್ಕೆ ಕಾರಣವೇ ಆಗಿದೆ.
ರಮಾ:- (ನಿಟ್ಟುಸಿರಿಟ್ಟು) ಸನ್ಮಿತ್ರರೇ ! ಭಗವತ್ಸ ಹಾಯವಿದ್ದರೆ, ಅವರನ್ನು ಸನ್ಮಾರ್ಗಕ್ಕೆ ತಿರುಗಿಸದೆ ಬಿಡಲಾರೆನೆಂದು ಸಂಕಲ್ಪಿಸಿರು 20 ತ್ತೇನೆ.
ಸೌಮ್ಯ:- ಆ ವಿವೇಕಶೂನ್ಯರಾದ ಗೋಮುಖವ್ಯಾಘ್ರರು, ನಿನ್ನ ಉಪದೇಶಕ್ಕೆ ಕಿವಿಗೊಡುವರೆಂದೆಣಿಸಿದೆಯೋ? ಎಂದಿಗೂ ಅದು ಸಾಗದ ಮಾತು, ಸುಮ್ಮನೇಕೆ ಬಳಲಬೇಕು?
ರಮಾ :-(ನಕ್ಕು) ಪ್ರಯತ್ನ ಪಡದೆಯೇ, ಅದು ನಮಗೆ ಅಸಾಧ್ಯ 25
15