ಪುಟ:ರಮಾನಂದ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೫r ಖದಲ್ಲಿ ಯು ನಿನ್ನ ಶೇಷೋಕಿಯೆ ? - ವಿದ್ಯಾ:- (ಕೃತಕಕೋಪದಿಂದ) :ಚನ್ನಾಗಿದೆ, ಯೋಗ್ಯತೆಗೆತಕ್ಕೆ ಮಾತೇ ಹೊರಡುತ್ತದೆ. ಗುರುಸಮ್ಮುಖದಲ್ಲಿ ಮಾತ್ರ ಸಹಜಭಾವ ವನ್ನು ತೋರಿಸುವುದು, ಉಳಿದೆಡೆಗಳಲ್ಲಿ ವಕ್ರತೆಯನ್ನು ಹೊರಗೆಡ ಹುವುದೂ ನೀತಿಯಲ್ಲ ವೇ ? ಇದನ್ನಲ್ಲ ವೇ ನೀವು ಕಳೆದ ಆರುತಿಂಗ 5 ೪೦ದಲೂ ಅಭ್ಯಾಸಮಾಡಿರುವುದು ? ( ರಮಾನಂದಾದ್ಯರು ತಲೆವಾಗಿ ನಿಲ್ಲುವರು, ರವಿವರ್ಮಾದಿಗಳು - ಹರ್ಷಿತರಾಗಿ ನೋಡುವರು ) ಸೌಮ್ಯ:~ ಹಾಗೂ ಆಗಲಿ; ನೀವೂ ಇವನಂತೆಯೇ ಗುರು ಗಳ ಅಭಿಮಾನಕ್ಕೆ ಪಾತ್ರರಾಗಲು ಪ್ರಯತ್ನ ಮಾಡಬಾರದೇಕೆ ? 10 ಕಳಿಂಗ:- ಅದೆಲ್ಲ ವೂ ಲಭ್ಯಾನುಸಾರ ನಡೆಯತಕ್ಕುದು. ನಮ್ಮ ಪ್ರಯತ್ನ ಮಾತ್ರದಿಂದಲೇ ಅದು ದೊರೆಯುವದೆಂಬ ಮಾತು ಅಸಂಗತ ಮತ್ತು ವೃಧಾ ಪ್ರಯಾಸ ! ರಮಾ:- ಹಾಗಲ್ಲ ವಯ್ಯಾ ! ವೃಥಾಶ್ರಮವೆಂದು ಸುಮ್ಮನೆ ಕುಳಿತಿರುವುದು ಸರಿಯಲ್ಲ, ಪ್ರಯತ್ನ ವೂ, ತಕ್ಕಷ್ಟು ಶ್ರಮಸಹಿಷ್ಕು 15 ತೆಯ ಇಲ್ಲ ದಿದ್ದರೆ, ಯಾವ ಕೆಲಸವೂ ತೃಪ್ತಿಕರವಾಗಿ ನೆರವೇರುವು ದಿಲ್ಲ, ಪುರುಷ ಪ್ರಯತ್ನವು ನಿಜರೂ ಪದಿಂದ ನಡೆಯಿಸಲ್ಪಟ್ಟ ಮೇಲೆ ದೈವಯತ್ನ ವೂ ಅದಕ್ಕೆ ಸಹಕಾರಿಯಾಗಿ ಫಲವನ್ನು ಕೊಡುವುದು. ಇದಕ್ಕೆ ದೃಷ್ಟಾಂತವಾಗಿ ಬಲ್ಲವರು ಹೇಳುವುದನ್ನು ಕೇಳು~ ಕ೦ದ || ಎಳಸಿದೊಡನಾವ ಕಜ್ಜಂ || ಫಳಿಪುದು, ಪುರುಷಪ್ರಯತ್ನ ಮಣಮಿಲ್ಲದೆಯಾ 11 ಗುಳಿಸುತ ಮಲಗಿರೆ ಹರಿಮುಖ | ದೊಳಗಾಮಿಗವಿಂಡು ಪುಗುವುದೇಂ ಸದ್ಭುದ್ಧಿ 11 ( ಸದ್ಭುಶತಕ ) ರವಿ:- (ಮಂದಹಾಸದಿಂದ) ಸರಿಸರಿ; ಈಗ ತಿಳಿದನು | ನಾವು 25 20