ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಮಾನಂದ

೬೧

ನ್ನಾಡಿ ಕೋಪಗೊಳ್ಳುವೆ?
ಸುಮು:- ರಮಾನಂದ-' ಉಳ್ಳಿ ತಿಂದವನಿಗೆ ಅಳುಕಿತು' ಎಂಬ ಅಜ್ಜಮ್ಮನ ಮಾತಿಲ್ಲವೆ ?
ರಮಾ:- ಅದು ಹೇಗಾದರೂ ಇರಲಿ, ನಾನು ಎಂದಾದರೂ ನಿಮ್ಮನ್ನು ನಿಂದಿಸಿರುವೆನೇ?
ರವಿ:- ನಿಂದಿಸಿದೆಯೊ ಇಲ್ಲವೊ ನಿನಗೇ ಗೊತ್ತು. ಈಗದರ ಪ್ರಸ್ತಾಪವೇನೂ ಬೇಕಾಗಿಲ್ಲ !

ತೆರೆಯಲ್ಲಿ - (ಘಂಟಾನಾದವಾಗುವುದು.)

ರಮಾ:- (ತೆರೆಯ ಕಡೆ ನೋಡಿ) ಓಹೋ! ಪೂಜ್ಯರಾದ ಗುರು | ಗಳು ಬಂದರು,
10 (ಎಲ್ಲರೂ ಎದ್ದು ಕೈಕಟ್ಟಿ ನಿಲ್ಲು ವರು. ಶುಭ್ರವಸ್ತ್ರಧರನಾದ ವಿದ್ಯಾ ವಾಗೀಶನು ದಂಡಪಾಣಿಯಾಗಿ ಪ್ರವೇಶಿಸುವನು.)
ಎಲ್ಲರೂ:- ( ಭಕ್ತಿಯಿಂದ ಕೈಮುಗಿದು ) "ಪರಬ್ರಹ್ಮಸ್ವರೂಪ ರಾದ ಗುರುದೇವರಿಗೆ ನಮಸ್ಕಾರವು, ವಿಜ್ಞಾನ ಪ್ರದರಾದ ಪೂಜ್ಯರಿಗೆ ವಂದನೆಗಳು. ”
ವಿದ್ಯಾ:- ( ರವಿವರ್ಮಾ ದಿಗಳನ್ನು ಕುರಿತು ) " ಏನಯ್ಯಾ, ರವಿ ವರ್ಮ! ಎಂದಿನಂತೆಯೇ ಬಂದಿರುವಿರೋ? ಪಠ್ಯ ಪುಸ್ತಕಗಳನ್ನೆನಾದರೂ ತಂದಿರುವಿರೋ?
ರವಿ:- ಗುರುದೇವ | ಮೋಡವು ಯಾವಾಗಲೂ ಕವಿದೇ ಇರುವುದೇ ?
ರಮಾ:- (ನಕ್ಕು) ಬಿರುಗಾಳಿಯ ಹೊಡೆತಕ್ಕೆ ಸಿಕ್ಕುವವರೆಗೂ ಕವಿದೇ ಇರುವುದು. ಕಳಿಂಗ:-- ಗಾಳಿಯು ಬಂದು ನೋಡವನ್ನು ಚದರಿಸಿತೆಂದೇ ಹೇಳಿದೆವು.
ವಿದ್ಯಾ :- ಹಾಗಾದರೆ, ಆಕಾಶವು ಶುಭ್ರವರ್ಣವಾಗಿದೆಯಷ್ಟೆ ? 25 20