ಪುಟ:ರಮಾನಂದ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಸತೀಹಿತೈಷಿಣೀ ರಚಿತವಾದ ಸರಸ್ವತೀ ಸ್ತುತಿವಚನ ಪತ್ರವೂ, ಅದನ್ನೊಳಕೊಂಡಿದ್ದ ಪುಸ್ತಕವೂ ಅದೃಶ್ಯವಾಗಿವೆ. ವಿದ್ಯಾ :- (ಖತಿಯಿಂದ) ರಮಾನಂದ ! ಶಿಷ್ಯರತ್ನ ವೆಂದೂ ನಿಜ ವಾದ ವಿದ್ಯಾರ್ಥಿಯಾಗುವವನಂದ ನಿರೀಕ್ಷಿಸಲ್ಪಟ್ಟಿದ್ದ ನೀನೇ, 5 ಇ೦ದು, ಹೀಗೆ ಸಂಶಯಾಸ್ಪದನಾಗುವೆಯೆಂದು ತಿಳಿದಿರಲಿಲ್ಲ. ಒಂದು ಅಲ್ಪವಿಷಯಕ್ಕಾಗಿಯೇ ಸುಳ್ಳಾಡುವವನು ಮತ್ತಾವ ವಿಚಾರದಲ್ಲಿ ಬಿಟ್ಟಾನು ? ನಿನ್ನಿ೦ದ ಅದು ಸಾಧ್ಯವಲ್ಲ ದುದಾಗಿದ್ದರೆ, ನಿಜವನ್ನ ಹೇಳಬಹುದಾಗಿದ್ದಿ ತು; ಅದರಿ೦ದ ಬಾಧಕವೇನೂ ಇರುತ್ತಿರಲಿಲ್ಲ. ರಮಾ:- ಪೂಜ್ಯ ವಾದರೆ | ನಾನು ನಿಜವನ್ನೇ ಆಡಿದೆನಲ್ಲದೆ, 10 ಸುಳ್ಳನ್ನು ಹೇಳಿರುವುದಾಗಲೀ, ಹೇಳುವುದಾಗಲೀ ಇಲ್ಲ.

  • ವಿದ್ಯಾ:- ಹಾಗಿದ್ದರೆ, ನಿನ್ನ ಆತ್ಮ ಕೃತಿಬದ್ಧ ವಾದ ಕವಿತಾ ಪತ್ರವೆಲ್ಲಿ ಹೋಯಿತು ?

- ಸುಮುಖ:- ಆರ್ಯರೇ ! ರಮಾನಂದನ ಬಳಿಯಲ್ಲಿದ್ದ ಪತ್ರ ವನ್ನು ನಾನೂ ನೋಡಿದ್ದೆನು. 15 ವಿದ್ಯಾ:- ಈಗ ಏನಾಯಿತು ? ಎಲ್ಲಿ ಹೋಯಿತು ? ಕದ್ದ ವರಾರು ? ಸುಮುಖ:-- ಕುಮಾರನ ಏಳಿಗೆಯನ್ನು ನೋಡಲಾರದ ಕೇಡಿ ಗರಿಂದಲೇ ಕದ್ದೊಯ್ಯಲ್ಪಟ್ಟಿರಬೇಕು. ವಿದ್ಯಾ :- ಜಿಃ ! ಚಿ !! ನನ್ನ ಮುಂದೆಯೇ ಹೀಗೆ ದೋಷಾ 20 ರೋಪಣೆಯೇ ? ಎಲೈ ರಮಾನಂದ | ನಿನ್ನಿ೦ದ ಕಲ್ಪಿತವಾದ ಸ್ತುತಿ ವಚನವನ್ನು ಕಂಠಪಾಠ ಮಾಡಿಕೊಂಡಿರುವೆಯೋ ? ರಮಾ:- ಭವದಾಶೀರ್ವಾದದಿಂದ ಕಂಠಪಾಠವಾಗಿರುವುದು. ವಿದ್ಯಾ :- ಹಾಗಾದರೆ ಹೇಳು. ರಮಾ:-( ವಿನೀತನಾಗಿ ನಿಂತು ಮೇಲೆ ನೋಡುತ್ತ ಹೀಗೆ ಹೇಳುವನು) 25 ಹೇ, ದೇವಿ, ವಾಗ್ಲೆವಿ, ವಿದ್ಯಾಭಿಮಾನಿನೀ ದೇವಿ! ಅನುಗ್ರಹಿಸು.