ಪುಟ:ರಮಾನಂದ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೬೩ ವಿದ್ಯಾ :- ಸರಿಯಾಗಿರುವುದು, ಇನ್ನು ವಿಚಾರವು ಇಲ್ಲಿಗೆ ಸಾಕಾಗಿರಲಿ, ನಿಮ್ಮ ಬರವಣಿಗೆಗಳನ್ನು ತಂದು ತೋರಿಸಿರಿ. ( ರವಿವರ್ಮಾದಿಗಳು ತಮ್ಮ ತಮ್ಮ ಬರವಣಿಗೆಗಳನ್ನು ತಂದು ಮುಂದಿಡುವರು. ) ವಿದ್ಯಾ :- (ನೋಡಿ, ತಲೆದೂಗಿ) ಹೂಂ, ನಿಮ್ಮ ವೆಲ್ಲಿ? ( ರಮಾನಂದಾದಿಗಳು ತಂದು ಮುಂದಿಟ್ಟು, ವಿನೀತರಾಗಿ ನಿಲ್ಲುವರು.) | ವಿದ್ಯಾ:- ( ರಮಾನಂದನ ಬರೆವಣಿಗೆಯನ್ನು ನೋಡುತ್ತ ಕೋಪದಿಂದ) ಏನಯ್ಯ, ರಮಾನಂದ ! ಇದೇನು-ಬರೆವಣಿಗೆಯ ಸೊಗಸು ? ಅಕ್ಷರ ಗಳೇ ಕಾಣದಂತೆ ಹೀಗೆ ಗೀಚಿರುವುದೇಕೆ ? ಇದರಲ್ಲಿ ಇಷ್ಟರ ಕೊಳೆ ಯಾಗಲು ಕಾರಣವೇನು ? ರಮಾ:-(ಭಯ ಕೌತುಕಗಳಿಂದ) ಗುರುದೇವ! ಕೊಳೆಯಾಗಲು 10 ಕಾರಣವನ್ನು ತಿಳಿಯೆನು, ನಾನು ಬರೆದಾಗ ಚನ್ನಾಗಿಯೇ ಇದ್ದಿತು. ಈಗ ಆದು ಹೀಗಾದುದು ಹೇಗೆ ತಿಳಿಯೆನು. ವಿದ್ಯಾ:- ನಿನಗೆ ತಿಳಿಯದೆ ನಿನ್ನ ಪುಸ್ತಕಕ್ಕೆ ಕೊಳೆಯೆಲ್ಲಿಂದ ಬರಬೇಕು ? ರಮಾ: ~ ನಾನು ಈಗಲೇ ಹೀಗೆಂದು ಹೇಳಲು ಶಕ್ತನಾಗಿಲ್ಲ. 15 ವಿದ್ಯಾ :-ಇ೦ದೇನೋ ಸಂದೇಹಾಸ್ಪದವಿಚಾರಗಳು ತೋರು ತವೆ. ಇರಲಿ, ನೋಡುವ, ನಿನ್ನನ್ನು ಸಾಕಾರವಾದ ವಿದ್ಯಾ ಸ್ವರೂಪ ವನ್ನು ವರ್ಣಿಸಿ ಬರೆದು ತೋರೆ೦ದು ನಿಯಮಿಸಿದ್ದೆನಷ್ಟೆ; ಏನು ಮಾಡಿ ರುವೆ ? ರಮ:- ಕೃತಕಾರ್ಯನಾಗಿರುವೆನು. ವಿದ್ಯಾ:- ಎಲ್ಲಿ? ಇತ್ತ ತಂದಿರಿಸು. ರಮಾ:- ಪುಸ್ತಕಗಳನ್ನು ತೆಗೆದುನೋಡಿ, ಭೀತನಾಗಿ ನಿಲ್ಲು ವನು. ವಿದ್ಯಾ:- ಮತ್ತೆ, ಇದೇನು ನಟನೆ ? ರಮಾ:- (ವಿನಯದಿಂದ) ನಟನೆಯಲ್ಲ, ಗುರುದೇವ ! ನನ್ನಿ೦ದ 25