ವಿದ್ಯಾ :- ಸರಿಯಾಗಿರುವುದು, ಇನ್ನು ವಿಚಾರವು ಇಲ್ಲಿಗೆ ಸಾಕಾಗಿರಲಿ, ನಿಮ್ಮ
ಬರವಣಿಗೆಗಳನ್ನು ತಂದು ತೋರಿಸಿರಿ.
( ರವಿವರ್ಮಾದಿಗಳು ತಮ್ಮ ತಮ್ಮ ಬರವಣಿಗೆಗಳನ್ನು ತಂದು ಮುಂದಿಡುವರು. )
ವಿದ್ಯಾ :- (ನೋಡಿ, ತಲೆದೂಗಿ) ಹೂಂ, ನಿಮ್ಮವೆಲ್ಲಿ?
( ರಮಾನಂದಾದಿಗಳು ತಂದು ಮುಂದಿಟ್ಟು, ವಿನೀತರಾಗಿ ನಿಲ್ಲುವರು.)
ವಿದ್ಯಾ:- ( ರಮಾನಂದನ ಬರೆವಣಿಗೆಯನ್ನು ನೋಡುತ್ತ ಕೋಪದಿಂದ) ಏನಯ್ಯ, ರಮಾನಂದ ! ಇದೇನು-ಬರೆವಣಿಗೆಯ ಸೊಗಸು ? ಅಕ್ಷರಗಳೇ ಕಾಣದಂತೆ ಹೀಗೆ ಗೀಚಿರುವುದೇಕೆ ? ಇದರಲ್ಲಿ ಇಷ್ಟರ ಕೊಳೆಯಾಗಲು ಕಾರಣವೇನು ?
ರಮಾ:-(ಭಯ ಕೌತುಕಗಳಿಂದ) ಗುರುದೇವ! ಕೊಳೆಯಾಗಲು 10 ಕಾರಣವನ್ನು ತಿಳಿಯೆನು, ನಾನು ಬರೆದಾಗ ಚೆನ್ನಾಗಿಯೇ ಇದ್ದಿತು. ಈಗ ಆದು ಹೀಗಾದುದು ಹೇಗೆ ತಿಳಿಯೆನು.
ವಿದ್ಯಾ:- ನಿನಗೆ ತಿಳಿಯದೆ ನಿನ್ನ ಪುಸ್ತಕಕ್ಕೆ ಕೊಳೆಯೆಲ್ಲಿಂದ ಬರಬೇಕು ?
ರಮಾ: ನಾನು ಈಗಲೇ ಹೀಗೆಂದು ಹೇಳಲು ಶಕ್ತನಾಗಿಲ್ಲ.
15
ವಿದ್ಯಾ :-ಇ೦ದೇನೋ ಸಂದೇಹಾಸ್ಪದವಿಚಾರಗಳು ತೋರುತ್ತವೆ. ಇರಲಿ, ನೋಡುವ, ನಿನ್ನನ್ನು ಸಾಕಾರವಾದ ವಿದ್ಯಾ ಸ್ವರೂಪವನ್ನು ವರ್ಣಿಸಿ ಬರೆದು ತೋರೆ೦ದು ನಿಯಮಿಸಿದ್ದೆನಷ್ಟೆ; ಏನು ಮಾಡಿರುವೆ ?
ರಮಾ:- ಕೃತಕಾರ್ಯನಾಗಿರುವೆನು.
ವಿದ್ಯಾ:- ಎಲ್ಲಿ? ಇತ್ತ ತಂದಿರಿಸು.
ರಮಾ:- ಪುಸ್ತಕಗಳನ್ನು ತೆಗೆದುನೋಡಿ, ಭೀತನಾಗಿ ನಿಲ್ಲುವನು.
ವಿದ್ಯಾ:- ಮತ್ತೆ, ಇದೇನು ನಟನೆ ?
ರಮಾ:- (ವಿನಯದಿಂದ) ನಟನೆಯಲ್ಲ, ಗುರುದೇವ ! ನನ್ನಿ೦ದ 25
ಪುಟ:ರಮಾನಂದ.djvu/೮೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೬೩