ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬
ಸತೀಹಿತೈಷಿಣೀ

ಯಿಂದ ಕಟಾಕ್ಷಿಸಿ, ಕೈಹಿಡಿದು ಕೃತಾರ್ಧನೆನ್ನಿಸು” ಎಂದು ಹೇಳಿ ಸುಮ್ಮನಾಗಿ ನಿಲ್ಲುವನು.


ರಾಗ - ಜಂಗಲ್. (ಅರಳಿದ ಮಲ್ಲಿಗೆ ಪರಿಮಳ)

ಸರಸಿಜ ಭವಸತಿ – ಕರುಣಿಸು ಸನ್ಮತಿ – ಹರಿಸ್ಮರಣಾಭಿರತಿ || ...||ಪ||
ಪರಮಕೃಪಾಕರೆ - ವರದಾಭಯಕರೆ- ನೀನಹುದೈಸುಕರೇ ....|| ಅನು ||
ಸತ್ಯವೇ ನಿನಗಿದು, ಉತ್ತಮಾಂಗವು, ಭಕ್ತಿಯೇ ಫಾಲಸ್ಥಲವೂ |
ಉತ್ತಮೋತ್ತಮವೆನಿಸುವ ವಿನಯವು- ನಾಶಿಕವದು ನಿಜವು ....||೧||
ಜ್ಞಾನವಿವೇಕ ಸುಲೋಚನವಾಗಿರೆ- ಆನನವಿದರೋಳ್ |
ತಾನಾಗಿರೆ ವೇದವೆ ವದನವು - ಮಾನಸಕತಿಸುಖವು .......||೨||
ಬಗೆಗೊಳ್ಳುವ ನಿನ್ನೀ ಬಗೆಬಗೆರೂಪವ ಬಗೆಬಗೆದಾನೆರವೇ |
ಸೊಗಸಿತೆ ನಿನ್ನೀ ಬಗೆ ಸೇವೆಗೆ ನಿ- ನ್ನಣುಗರ ವರಿಸೆನುವೇ ...|| ೩ ||
ದೇಶಸೇವೆಯೊಳಾಶಿಸುತಿರುವೆವು - ಗಾಶ್ರಯತರು ನೀನೇ |
ಭಾಷಾಮಾನಿನಿ, ಬಲಗೊಂಬೆವು ನಿನ್ನನು - ಶೇಷಗಿರಿವರನಾಣೆ ||.. | ೪ |

ವಿದ್ಯಾ :- (ಸುತ್ತಲೂ ನೋಡುವನು.)

(ರವಿವರ್ಮಾದಿಗಳು ಪರಸ್ಪರ ಮುಖಗಳನ್ನು ನೋಡಿಕೊಳ್ಳುವರು.)

ವಿದ್ಯಾ :- ಏನಯ್ಯ? ಹೀಗೆ ಒಬ್ಬರನ್ನೊಬ್ಬರು ನೋಡುತ್ತಿರುವಿರಿ ? ವಿಚಾರವೇನು ?

ರವಿ:- ಕ್ಷಮಿಸಬೇಕು ಗುರುದೇವ! ನಿಜಾಂಶವನ್ನು ಸನ್ನಿಧಾನದಲ್ಲಿ ನಿವೇದಿಸಿದೆವಾದರೆ, ರಮಾನಂದನಿಗೆ ಆಪ್ರಿಯರಾಗುವೆವೆಂದು ಚಿಂತಿಸುತ್ತಿರುವೆವು.

ವಿದ್ಯಾ :- (ಕೌತುಕದಿಂದ) ಅದೇನದು ? ರಮಾನಂದನಿಂದ ಅಲ್ಲದ-ಸಲ್ಲದುದೇನಾದರೂ ಮಾಡಲ್ಪಟ್ಟಿತೇನು ? ಹಾಗಾಗಿದ್ದರೂ ಹೇಳದೆ ಇರುವುದು ನ್ಯಾಯವಲ್ಲ, ಉಚಿತಾನುಚಿತಗಳನ್ನು ತಿಳಿಸಿ, ಎಚ್ಚರಿಸುವುದೇ ಆಪ್ತರ ಲಕ್ಷಣವು.

ರವಿ:- ಉಚಿತವೊ, ಅನುಚಿತವೊ, ನಾವು ಅದನ್ನು ಹೇಳಲಾ