ಪುಟ:ರಮಾನಂದ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ಓ೬ ರವು. ವಿದ್ಯಾ :- ಅದೇನೆಂಬುದನ್ನು ಬಾಯ್ದೆರೆದು ಹೇಳಬಾರದೇ? ರವಿ:- ಮತ್ತೇನೂ ಇಲ್ಲ. ರಮಾನಂದನು ಶಾಲೆಗೆ ಬರು ವಾಗ ಚಾವಡಿಯ ಮುಂದೆ ಬರುತ್ತಿದ್ದನು. ರವಾ:- (ಕೌತುಕವಿಸ್ಮಯಗಳಿಂದ ನೋಡುವನು). ವಿದ್ಯಾ- ಆ ಮೇಲೆ ? ರವಿ:- ಹಾಗೆ ಬರುತ್ತಿದ್ದವನ ಹಿಂದೆಯೇ ಮತ್ತೂಬ್ಬ ಜೂಜು ಗಾರನು ಓಡಿಬಂದು, ಇವನನ್ನು ಹಿಡಿದು ನಿಲ್ಲಿಸಿಕೊಂಡನು. ಹಿಂದೆ ದೂರದಲ್ಲಿ ಬರುತ್ತಿದ್ದ ನಾವು ಇದನ್ನು ನೋಡಿ, ಸಂಗತಿಯನ್ನು ತಿಳಿ ಯಲು ಅಲ್ಲಿಯೇ ನಿಂತೆವ. ವಿದ್ಯಾ:- (ಶಂಕಿತನಾಗಿ) ಆ ಮು೦ದೆ ? ರವಿ:- ಹಾಗೆ ಆತನು ಹಿಡಿದು ನಿಲ್ಲಿಸಿಕೊಂಡ ಒಂದೆರಡು ನಿಮಿಷದಲ್ಲಿಯೇ ಈತನು ತಪ್ಪಿಸಿ ಕಂಡು ಓಡಿಹೋದನು. ವಿದ್ಯಾ:-- ಇದೇನೋ ವಿಚಿತ್ರವಾಗಿದೆ, ಮುಂದೆ ಹೇಳಿರಿ. ರವಿ:- ಇವನು ಓಡಿದ ವೇಗದಿ೦ದ ಕ೦ಕುಳಲ್ಲಿ ಅಡಗಿದ್ದ 15 ಪುಸ್ತಕವು ಕಳೆದು ಕೆಳಗೆ ಬಿದ್ದು ಹೋಯಿತು. ಆತುರದಲ್ಲಿದ್ದ ಇವ ನಿಗೆ ಅದು ಗೊತ್ತಾಗಲಿಲ್ಲ ವೇನೋ ತಿಳಿಯವು, ಹೇಗೂ ಅದನ್ನು ಆತನು ಕೈಕೊಂಡು ತೆರೆದು ನೋಡುತ್ತ ಅದರಲ್ಲಿದ್ದ ಪತ್ರವನ್ನು ತೆಗೆದು, ಕೆಳಗೆ ಬಿಸುಟು, ಬಂದದಾರಿಯಲ್ಲಿ ಹಿಂದಿರುಗಿದನು. ರಮಾ:- ( ತಲೆದೂಗಿ ) ಅಣ್ಯ 1 ವಾರ್ತಾ ತರಂಗಗಳು ಬಹು 20 ಪ್ರಯಾಸದಿಂದ ಕಂಠಪಾಠಮಾಡಲ್ಪಟ್ಟು ಹೊರಹೊರಡುವುದೆಂದು ತೋರುತ್ತಿರುವುವು. ವಿದ್ಯಾ:- ( ದರ್ಪಿತನಾಗಿ ) ಸಂಗತಿಯನ್ನು ವಿಸ್ತರಿಸುವುದಕ್ಕೆ ಮೊದಲೇ ನೀನೇಕೆ ತಡೆಯುತ್ತಿರುವೆ ? ರಮಾ:- ಗುರುದೇವ | ಸತ್ಯಕ್ಕೆ ಸಾವಿಲ್ಲ ವೆಂದು ನಂಬಿರು 25