ಪುಟ:ರಮಾನಂದ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಸತೀಹಿತ್ಯ ಷಿಣಿ ವೆನು. ಇವರ ಕುಕಲ್ಪನೆಯ ನಿಜಸ್ವರೂಪವು ಹೇಗಾದರೂ ಸನ್ನಿಧಿ ನಕ್ಕೆ ವಿದಿತವಾಗದೆ ಇರುವುದಿಲ್ಲ. ಇವರು ಈಗ ಏನನ್ನು ಬೇಕ ದರ ಹೇಳಿಕೊಳ್ಳಲಿ; ತಡೆಯಿಲ್ಲ. ಕಳಿಂಗ:- ( ಕಂಡುದನ್ನು ಹೇಳಿದರೆ, ಕೆಂಡದಂತಾಗುವುದು 5 ಲೋಕಸ್ವಭಾವ.” ನಿನ್ನ ನಡೆತೆಯಲ್ಲಿ ಕಣ್ಣಾರೆ ಕಂಡುದನ್ನು ಹೇಳಿದೆ “ವಲ್ಲದೆ, ನಿನ್ನ ಮೇಲೆ ಇಲ್ಲದ ದೋಷವನ್ನು ಹೊರಿಸಬೇಕೆಂದು ಹೇಳಿದುದಲ್ಲ. - ವಿದ್ಯಾ:- ಸಾಕು, ನಿಲ್ಲಿ ಸಿರಿ | ಅಧಿಕ ಪ್ರಸಂಗಕ್ಕೆ ಇದು ಸ್ಥಳ ವಲ್ಲ, ಮುಂದೆ ಹೇಳಿರಿ. 10 ರವಿ:- ಹಿಂತಿರುಗುತ್ತಿದ್ದವನನ್ನು ನಾನು ತಡೆದು ವಿಚಾರವೇ ನೆಂದು ಕೇಳಿದೆನು. ಅದಕ್ಕಾತನು- ರಮಾನಂದನು ಈಗ ನಾಲ್ಕು ದಿನಗಳಿಂದಲೂ ಜೂಜಿನ ಚಾವಡಿಗೆ ಬರುತ್ತಿದ್ದನು, ನಿನ್ನೆ ರಾತ್ರಿ ಯಲ್ಲಿ ನಾವು ಬೇಡವೆಂದರೂ ಸಂಧಕ್ಕೆ ನಿಂತು, ಸೋತು, ಹಣ ವನ್ನು ಕೊಡದೆ ತಪ್ಪಿಸಿಕೊಂಡು ಓಡಿಹೋಗಿದ್ದು, ಈಗ ಇಲ್ಲಿ 15 ಸಿಕ್ಕಿದನು. ಈಗಲೂ ತಾನು ಹಣವನ್ನು ಕೊಡುತಕ್ಕುದಿಲ್ಲವೆಂದೂ, ತನ್ನನ್ನು ತಡೆದು ನಿಲ್ಲಿಸಿಕೊಂಡುದಕ್ಕೆ ಎಂದಾದರೂ ಪ್ರತೀಕಾರ ಮಾಡದಿರಲಾರೆನೆಂದೂ ಹೇಳಿ ಬಿಡಿಸಿಕೊಂಡು ಓಡಿದನು. ಅವನ ಕಕ್ಷದಿಂದ ಈ ಪುಸ್ತಕವ್ರ ಜಾರಿ ಬಿದ್ದುದರಿಂದ, ಇದೇ ನನ್ನ ಹಣಕ್ಕೆ ಪ್ರತಿಫಲವಾಗಿ ದಕ್ಕಿತೆಂದು ತಿಳಿದು, ಸುಮ್ಮನಾಗಿ ಬಂದೆನು.' ಎಂದು 20 ಹೇಳಿ, ಕೈಯಲ್ಲಿದ್ದ ವ್ಯಾಕರಣವನ್ನು ತೋರಿಸಿ ಹೊರಟುಹೋದನು. ನಾವು ಬರಿಯ ಕೈಯಲ್ಲಿ ಬಂದಿದ್ದುದರಿಂದ ಅದನ್ನು ಬಿಟ್ಟು ಬರಬೇಕಾ ಯಿತು, ಹಾಗೆಯೇ ಕೆಳಗೆ ಬಿದ್ದಿದ್ದ ಪತ್ರವಾವುದೆಂದು ತೆಗೆದುನೋಡು ವಲ್ಲಿ, ಈತನ ಕೈಬರೆಹವೆಂದೂ, ಶಾರದಾಸ್ತುತಿವಚನವಾಗಿದೆಯೆಂದೂ ತಿಳಿದು, ಇವನಿಗೆ ಮುಟ್ಟಿಸಲು ಅದನ್ನು ಕೈಕೊಂಡು ಬಂದೆವು. 25 ಇಷ್ಟೆ.