ರಮಾ:- ನಾನು ಮಂದಿರದಿಂದ ಶಾಲೆಗೆ ಸೌಮ್ಯ, ಸುಮುಖ, ಯುವಾನರ ಒಳಗೊ೦ಡೇ ಬಂದೆನಲ್ಲದೆ ಒ೦ಟೆಯಾಗಿಯಾಗಲೀ, ಚಾವಡಿಯ ಮು೦ದೆಯಾಗಲೀ ಬಂದುದಿಲ್ಲ, ಅಲ್ಲದೆ ನಾವು ಬರುತ್ತಾ ಬಾಲೋದ್ಯಾನದ ಮಧ್ಯೆ ಕುಳಿತು, ಕೆಲವು ಹೊತ್ತು ವಿದ್ಯಾ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೆವು. ಆಗ ಇದು ನನ್ನ ಬಳಿಯಲ್ಲಿಯೇ
ಇದ್ದಿತು.
ವಿದ್ಯಾ: ಮತ್ತೆ ನೀನು ಅದನ್ನು ನೋಡಿದುದೆಲ್ಲಿ ? ಯಾವಾಗ?
ರಮಾ:- ಇದಕ್ಕೆ 'ಮೊದಲು ನೋಡಬೇಕಾದ ಅಗತ್ಯವಿರಲಿಲ್ಲ, ಇಲ್ಲಿಯೇ ಈಗಲೇ ನೋಡಿದುದು 10
ವಿದ್ಯಾ:- ಇದನ್ನು ಎಲ್ಲಿರಿಸಿದ್ದೆ ?
ರಮಾನಂದ:- - ರವಿವರ್ಮನು ಹೇಳಿದಂತೆ ವ್ಯಾಕರಣವುಸ್ತಕದಲ್ಲಿಯೇ ಇದ್ದಿತು.
ವಿದ್ಯಾ:- ಹಾಗಿದ್ದರೆ, ಅವನು ಹೇಳಿದುದೇ ನಿಜವಾಗಿರ ಬೇಕಷ್ಟೆ?
ರಮಾ:- ಪೂಜ್ಯರ |ನ್ಯಾಯಾನ್ಯಾಯವನ್ನು ವಿಚಾರಿಸಿ, ನಿರ್ಧರಿಸುವುದು ಗುರುಜನರನ್ನೆ ಸೇರಿದೆ. ನಾನು ಈ ವಿಚಾರದಲ್ಲಿ ಮತ್ತೇನನ್ನೂ ಹೇಳಲು ಶಕ್ತನಲ್ಲ. ಚಿತ್ತಕ್ಕೆ ಸರಿದೊರಿದಂತೆ ಮಾಡ ಬಹುದಲ್ಲದೆ, ಸನ್ನಿಧಾನದಿಂದ ಕೊಡಲ್ಪಡುವ ಯಾವ ಶಿಕ್ಷೆಗಾಗಲೀ
ಬದ್ದನಾಗಿರುವೆನೆಂದೂ ನಿವೇದಿಸಿರುವೆನು, 20
ವಿದ್ಯಾ:- (ಮಿತಿಯಿಂದ ನಿಟ್ಟುಸಿರಿಟ್ಟು) ರಮಾನಂದ ವಿದ್ಯಾರ್ಥಿ
ಯಾದವನಿಗೆ ಅನೃತ, ಅಸೂಯೆ, ವಂಚನೆ, ದ್ಯೂತ, ಕಾಮುಕತ್ವ ಇವ್ರಗಳೆಲ್ಲ ವೂ ಶತ್ರು ಸ್ವರೂಪವಾಗಿ, ಸರ್ವನಾಶಮಾಡತಕ್ಕವುಗಳಾಗಿರುವುವು, ಮತ್ತು ವಿದ್ಯಾರ್ಥಿಯು ದಂಭ, ಅಲಂಕಾರ, ಸುಗಂಧ
ಸುಲೇಪನ, ವಿಡಂಬನ, ನರ್ತನಾದಿ ವಿಲಾಸಗಳಲ್ಲಿ ಆಸಕ್ತನಾಗುವುದೂ ಅನಿಷ್ಟ ಹೇತುವು ಇದನ್ನು ಖಂಡಿತವಾಗಿ ತಿಳಿದು, ಮನಸ್ಸನ್ನು
ಪುಟ:ರಮಾನಂದ.djvu/೮೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಸತೀಹಿತೈಷಿಣೀ