ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೯೨
ಸತೀಹಿತೈಷಿಣೀ

 ವಿದ್ಯಾ:- (ಗಾಬರಿಯಿಂದೆದ್ದು) ಓಹೋ ! ಆಗಲೇ ಹೊತ್ತು ಮೀರುತ್ತಿದೆ. ಇಂದಿನ ವಿದ್ಯಮಾನವಿಶೇಷದಿಂದ ವಿಷಾದಗ್ರಸ್ತನಾಗಿದ್ದ ನನಗೆ ಹೊತ್ತೇ ತಿಳಿಯಲಿಲ್ಲ. ಇ೦ದು ಇಷ್ಟಕ್ಕೆ ಸಾಕಾಗಿರಲಿ; ಮುಂದೆ ನೋಡುವ, ಇನ್ನು ಎಲ್ಲರೂ ಶಾರದಾ ಉಪಾಸನೆಗೆ 5 ನಡೆಯಿರಿ.

(ಎಲ್ಲರೊಡನೆ ಹೊರಡುವರು).


10 |

ಶಾರದಾ. ಉಪಾಸನೆ.

ರಾಗ-
( ಶ್ರೀ ಸರ್ಣಾ೦ಬಿಕೆ)

ಶ್ರೀ ಸರಸ್ವತೀ - ಸುಮತೀ - ಭವತೀ ಭಾರತೀ – ||ಪ||
ವಾಣೀ-ವೀಣಾ ಪುಸ್ತಕಪಾಣಿ-ಪಂಕಜಯುಗೆ ಫಣಿವೇಣಿ- ಮಂಜುವಾಣೀ |
ಏಣಾಂಕವದನೆ ಶುಭಗುಣಶ್ರೇಣೀ | ಗೀರ್ವಾಣಿ-ಬ್ರಹ್ಮಾಣಿ- ಜನನೀ||೧||
ನೀರೇ-ನಿಗಮಾಗಮವಿಬಾರೇ । ಘೋರಭವಭಯದೂರ- ಶುಭಾಂಬರಧಾರೆ|
ಸುರಸಭವಹೃತ್ಸಾರಸವಿಹಾರೇ | ಧೀರೇ-ಚತುರೇ -ಕಂಪಲ್ಲವಚಿಕುರೇ-ಶ್ರೀ||೨|
ವರದೇ- ರಸನದಿ ನಿಂತವಸರದೇ-ಸರಸದಿನುಡಿ ನಿಜಗುಣದಿ- ಸೂನೃತವ್ರತದಿ |
ವರಶೇಷಾದ್ರಿನಿಕೇತನಂಘ್ರಯ.ಮರೆಯದೆ-ಭಜಿಸುವ-ತೆರದಿಂ ಕೊಡುವರವಂ || ೩|| {{center|- ಇಷ್ಟಕ್ಕೆ ತೃತೀಯಾ೦ಕವು -}}