ಶ್ರೀ
||
!!ಶ್ರೀ ಲಕ್ಷ್ಮೀ ಪ್ರಸನ್ನ !!
ತು ರೀ ಯಾಂ ಕೆ
( ಪ್ರಾರ್ಥನೆ. )
ಪಾಲಿಸೆನ್ನನು ಜಾನಕಿ-ಅರವಿಂದನಾಯಕಿ - ಪಾಲಿಸೆನ್ನನು ಜಾನಕೀ ||ಪ||
ಫಾಲಲೋಚನನುತೆ-ತ್ರೈಲೋಕ್ಯವಿಖ್ಯಾತ ಬಾಲಾರ್ಕದ್ಯುತಿ ಭಾಸುರಾನನೆ -
ನೀಲಾಭಕ ನಿತ್ಯ ನಿರ್ಮಲೆ || ಪಾಲಿಸೆನ್ನನು ||ಅನು||
ಜನನಿಯಲ್ಲವೆ ನೀನು- ತನು ಭವರೋಳು-ಇನಿತು ನಿರ್ದಯವೇನು? |
ಮನಕೆತಾರಲು ನೀನು -ಕ್ಷಣದೊಳು ದೀನನಂ-ಅನಘಸಂಪದದಿಂದ ಮೆರೆಯಿಪ
ಘನತೆಯಾಂತವಳಲ್ಲವೇನು? -||ಪಾಲಿಸೆನ್ನನು||||೧||
ಬಾಗುತಶಿರವಿಳಿಗೆ ಬೇಡುವಬಗೆ- ಕೂಗುಬೀಳದೆ ಕಿವಿಗೆ |
ಭಾಗವಶಾರ್ಚಿತ--ಭಾರ್ಗವೀನಾಮಖ್ಯಾತೆ - ಬೇಗೆಯೆಲ್ಲವ ಪರಿದುಯನ್ನನು-
ರಾಗದಿಂದಲಿ ನೋಡು ಭರದಲಿ || ಪಾಲಿಸೆನ್ನನು||೨|
ನೀನಲ್ಲದನ್ಯರ - ಕಾಣೆನುಹಿತರ-ಮಾನಿತಗುಣಯುತರ |
ಆನತರಾಗುವ- ಸೂನೃತವ್ರತಿಗಳಿ ಗಾನಂದವಿತ್ತು ಸಲಹುವ-ರಾಜೇಂದ್ರ
ನಾಥನ ರಾಣಿ ಶ್ರೀಮಣಿ || ಪಾಲಿಸೆನ್ನನು ||೩||
ಸ್ನಾನ ೧:- ಬಾಲೋದ್ಯಾನದ ಮುಂಗಡಯ ದಾರಿ.
(ವ್ಯಸ್ತಚಿತ್ತನಾದ ರಮಾನಂದನ ಸಹಾಧ್ಯಾಯಿ ಸೌಮ್ಯನ ಪ್ರವೇಶ.)
ಸೌಮ್ಯ:- (ಮೇಲೆ ನೋಡಿ ನಿಟ್ಟುಸಿರಿಟ್ಟು) ( ನಮ್ಮ ಆಯುಷ್ಮಂತನಾದ ರಮಾನಂದ ಕುಮಾರನು ಎಲ್ಲಿ ಹೋದನೋ, ಏನಾದನೋ ಏನು ಮಾಡುತ್ತಿರುವನೋ ಗೊತ್ತಾಗಲಿಲ್ಲ, ನಾನು ವಿದ್ಯಾರ್ಥಿಮಂದಿರ, ವಿದ್ಯಾಶಾಲೆ ಮೊದಲಾದೆಡೆಗಳಲ್ಲೆಲ್ಲಾ ಹುಡುಕಿ ಸಾಕಾಗಿ