ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೬೬
ಸತೀಹಿತೈಷಿಣಿ


ಸೌಮ್ಯ:- ಅದಕ್ಕೆಂದೇ ನಾವೂ ಹಲವು ಬಗೆಯಿಂದ ಮ ರ್ಖರ ಸಂಗತಿಗೆ ಹೋಗಬೇಡವೆಂದು ತಡೆದೆವ, ಆದರೂ ಕುಮಾ ರನು ಕೇಳದೆ ಈ ಅಪವಾಧಾನಲಕ್ಕೆ ಗುರಿಯಾದನು.
ಸತ್ಯ:- ಅಯ್ಯ { ಕುಮಾರನು ಈ ಅಪವಾದದಿಂದ ಬಿಡು ೩ ಗಡೆಯಾಗುವ ಬಗೆ ಹೇಗೆ?
ಸೌಮ್ಯ:- ಅಯ್ಯ! ಅಪವಾದವು ಹಾಗಿರಲಿ: ಅಫತ್ತಿಗೆ ಗುರಿ ಯಾಗದಿದ್ದರೆ ಸಾಕು.
ಸತ್ಯ:- (ಕುತೂಹಲದಿಂದ) ಅದೇನು ಅಪವಾದವೂ ಉಂಟೊ !
ಸೌಮ್ಯ:- ವೃಷಿಕ ಸರ್ಪಗಳನ್ನು ರಕ್ಷಿಸಬೇಕೆಂದು ಪ್ರಯತ್ನಿ 10 ಸುವವನಿಗೆ ಯಾವ ಪ್ರತಿಫಲವುಂಟೊ , ಅದೇ ಫಲವೇ ನಮ್ಮ ರಮ ನಂದನಿಗೂ ಆದೀತೆಂಬ ಶಂಕೆ ! ಏಕೆಂದರೆ, ಆ ದುರ್ಮಾರ್ಗಿಗಳ ಸ್ವಭಾವವೇ ಹಾಗೆ ಹೇಳುತ್ತಿದೆ.

ವೃತ್ರ ಕಾರುಣ್ಯಾಭಾವಂ ಪರಸತಿಯರ ಮೇಲಾಸೆ |
ಪಾರುಷ್ಯಂ ನಿತ್ಯಂ ಸ್ವಜನ ಸುಜನರೊಳ್ ವೈರಂ 11, 35
ಕ್ರೂರ ವ್ಯಾಪಾರಂಗಳ ಜಗಳಗಳ ನಿಮಿತ್ತಂಗಳ್ |
ಸೇರಿರ್ಕುಂ ಮೈಯೊಳ್ ಜನನದೊಳೆ ದುರಾತ್ಮರ್ಗೆ || (ಛಂದ:ಸಾರ)


ಸತ್ಯ:- ಅಯ್ಯ ! ಹೊತ್ತು ಮೀರುತ್ತಿದೆ, ನಾನು ಈಗಲೇ ಶ್ರೀಮಂತರ ಬಳಿಗೆ ಹೋಗಲು ಗುರುಪ್ರೇರಿತನಾಗಿ ಬಂದಿದ್ದೇನೆ.
ಸೌಮ್ಯ :- ಅದಾವ ಕೆಲಸಕ್ಕಾಗಿ ? ಸತ್ಯ:- ನಾಳೆಯೇ ನಡೆಯಬೇಕಾಗಿದ್ದ ಪರೀಕ್ಷಾ ಕೂಟವು ನಿಲ್ಲಿ ಸಲ್ಪಟ್ಟಿತೆಂದು ತಿಳಿಸಬೇಕ೦ತೆ.
ಸೌಮ್ಯ:- ಏನನ್ನಾದರೂ ಮಾಡು, ಆದರೆ ಒಂದುಮಾತು. ನೀನು ಬರುವಾಗ ರಮಾನಂದನನ್ನು ನೋಡಿದ್ದೆಯಾ ?
ಸತ್ಯ':- ನಿಜ, ಮರತಿದ್ದೆನು, ಬಾಲೋದ್ಯಾನದ ಮಾವಿನ 25 ಮರದಡಿಯಲ್ಲಿ ನಿಂತಿದ್ದುದನ್ನು ಕಂಡುಬಂದೆನು.