ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ರಾಜಾ ರಾಮಮೋಹನರಾಯರ ಜೀವಿತಚರಿತ್ರ ಬೇಕಾದರೆ ಒಂದಾನೊಂದುವೇಳೆ ಅವನ ಬುದ್ದಿಗೆ ಫ್ರಾಂತಿಯುಂಟಾಗಬಹುದು, ಆದುದ ರಿಂದನ್ಯಾಯಾಧಿಪತಿಗೆ ಸಹಾಯಕರಾಗಿ ಕೆಲವರು ಆಲೋಚನೆ ಹೇಳತಕ್ಕವರು ಅಗತ್ಯ. ಮುಖ್ಯವಾಗಿ ದೊಡ್ಡ ದೊಡ್ಡ ನ್ಯಾಯಸ್ಥಾನಗಳಲ್ಲಿ ಇಂತಹ ಪದ್ಧತಿಯನ್ನವಲಂಬಿಸುವುದು ಅತ್ಯಾವಶ್ಯಕವಾದುದು, 12 ಒಂದು ಕಾನೂನು ಸರಕಾರದವರಿಂದ ಮಂಜೂರಾಗಿ ಪ್ರಕಟಿಸಲ್ಪಡಲಿಕ್ಕೆ ಮುಂಚೆ ಅದರ ಚಿತ್ತು ಪ್ರತಿ (ಡ್ರಾಫ್ಟ್) ಯನ್ನು ಪ್ರಜೆಗಳು ತಮಗೆ ಇರುವ ಅಭ್ಯಂತರಗ ಳನ್ನು ತಿಳಿಸಿಕೊಳ್ಳುವುದಕ್ಕಾಗಿ ಅವರಿಗೆ ಸ್ವಲ್ಪ ಅವಧಿಯನ್ನು ಕೊಟ್ಟು ಪ್ರಚುರಪಡಿಸಬೇಕು. ತರುವಾಯ ಆ ಶಾಸನದ ವಿಷಯಗಳಿಗೆ ಸಂಬಂಧಿಸಿದ ಪ್ರಜೆಗಳಲ್ಲಿ ಮುಖ್ಯರಾದವರ ಅಭಿ ಪ್ರಾಯಗಳನ್ನು ಅಗತ್ಯವಾಗಿ ತೆಗೆದುಕೊಂಡು, ಸಾಧ್ಯವಾದಮಟ್ಟಿಗೂ ಅವರ ಯೋಗಕ್ಷೇ ಮಗಳನ್ನು ಆಲೋಚಿಸತಕ್ಕದ್ದು, ಹೀಗೆ ಏರ್ಪಾಡಾದರೆ ಪ್ರತಿ ಒಂದು ಪಂಗಡದವರಿಗೂ ಸತ್ಕಾರದವರ ವಿಷಯದಲ್ಲಿ ತುಂಬ ಪ್ರೀತಿ ಹುಟ್ಟುವುದು, 13 ಸಣ್ಣ ವಯಸ್ಸಿನವರು ಸಿವಿಲ ಸಲ್ವಿಸ್ ಅಧಿಕಾರಗಳನ್ನು ವಹಿಸುತ್ತಿರುವುದ ರಿಂದ ಅವರಿಗೆ ದೇಶಭಾಷೆಯು ಸ್ವಲ್ಪವೂ ತಿಳಿಯದೆ ಇರುವುದು. ಆದುದರಿಂದ ಹಿಂದೂ ದೇಶದಲ್ಲಿ ಸ್ವಲ್ಪ ಕಾಲವಿದ್ದು ಅಲ್ಲಿನ ಭಾಷಾಜ್ಞಾನವನ್ನು ಪಡೆದು ದೇಶಾಚಾರಗಳನ್ನು ಅನು ಭವದಿಂದ ತಿಳಿದುಕೊಂಡವರಿಗೆ ಮಾತ್ರವೇ ಈ ಅಧಿಕಾರಗಳನ್ನು ಕೊಡುತ್ತ ಬರಬೇಕು, 11 ಹಿಂದೂದೇಶೀಯರಿಗೆ ಮಾತ್ರವೇ ಈ ಅಧಿಕಾರಗಳನ್ನು ಕೊಡುತ್ತ ಬರತಕ್ಕ ದ್ದು, ಈ ಕೆಲಸಗಳಿಗೆ ಈಗ ಕೊಡಲ್ಪಡುತ್ತಿರುವಷ್ಟು ವೇತನ ಕೊಡಬೇಕಾಗಿಲ್ಲವು. ನ್ಯಾಯಾಧಿಪತಿಗಳಲ್ಲಿ ಯೂರೋಪಿಯನರಿಬ್ಬರೂ ಕೆಲವರು ಹಿಂದೂಗಳೂ ಇರುವುದು ಧರ ವು, ಮತ್ತು ಉನ್ನತಸ್ಥಾನಗಳಲ್ಲಿ ಒಬ್ಬರಿಗಿಂತ ಹೆಚ್ಚಾಗಿ ಅಧಿಕಾರಿಗಳಿರಬೇಕಾದರೆ ಅಲ್ಲಿ ಯುರೋಪಿಯನರೊಂದಿಗೆ ಸಮಸಂಖ್ಯೆಯ ಹಿಂದೂ ಅಧಿಕಾರಿಗಳೂ ಇರತಕ್ಕದ್ದು, ಹಿಂ ದೂಜನರಿಗೆ ದೊಡ್ಡ ಅಧಿಕಾರಗಳನ್ನು ಕೊಡುವುದು ನಷ್ಟ ಕರವೆಂಬ ತಪ್ಪು ತಿಳಿವಳಿಕೆಯು ಸರಕಾರದವರಿಗೆ ಇರಕೂಡದು, ಅವರನ್ನು ದೂರದಲ್ಲಿ ಇರಿಸುವುದರಿಂದ ಉಂಟಾಗುವ ವ್ಯತಿರೇಕಭಾವಕ್ಕಿಂತಲೂ ಹತ್ತಿರಕ್ಕೆ ತೆಗೆದುಕೊಂಡು, ಸಮಾನವಾದ ಗೌರವವನ್ನಿತ್ತು, ಅವರನ್ನು ಅಭಿವೃದ್ಧಿಗೊಳಿಸುವುದರಿಂದ ಉಂಟಾಗುವ ಸುಹೃದ್ರಾವವು ತುಂಬ ಶ್ರೇಯಸ್ಕರ ವಾದದ್ದು. ಈ ಅಭಿಪ್ರಾಯಗಳೆಲ್ಲವೂ ನಿಶ್ಚಯವಾಗಿ ನನ್ನ ಅಂತರಾತ್ಮ ನಿಂದ ಪ್ರೇರೇಪಿಸಲ್ಪಟ್ಟವು ಗಳು, ಇದರಿಂದ ಪ್ರಭುಗಳಿಗೂ ಪ್ರಜೆಗಳಿಗೂ ಕೂಡ ಲಾಭವುಂಟಾಗುವುದು, ಈ ವಿಧ ದಿಂದ ಹಿಂದೂದೇಶಕ್ಕೆ ಮೇಲುಂಟಾಗುವುದೆಂದು ತೋರಿದ ಪ್ರತಿಯೊಂದು ವಿಷಯದಲ್ಲಿ ಯೂ ತನ್ನ ಅಸದೃಶವಾದ ಬುದ್ದಿ ಯನ್ನು ಪ್ರಕಟಿಸಿ, ಶಾ ಸಸನಿರಾಣಸಭಿಕರೆಲ್ಲರೂ ಆಶ್ಚ ಗ್ಯ ಪಡುವಂತೆ ಮಾಡಿ, ತನ್ನ ಸಾಕ್ಷ್ಯಗಳನ್ನೆಲ್ಲಾ ಸಂಗ್ರಹಿಸಿ, ಅವುಗಳೊಂದಿಗೆ ಮತ್ತೆ ಕೆಲವು ಅಂಶಗಳನ್ನು ಸೇರಿಸಿ ಗ್ರಂಥರೂಪವಾಗಿ ಪ್ರಕಟಿಸಿದನು, ಅದಕ್ಕೆ ಮುಂಚೆ ಕೆಲವರು ಆ