ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಶಿಶಿ ಯವರಿಗೂ ಅನುಕೂಲವಾದುದಾಗಿಯೂ, ಅನುಸರಿಸತಕ್ಕುದಾಗಿಯೂ ಇರುವುದೆಂದು ತೋ ರಿದ ನೀತಿಗಳನ್ನೇ ಇದರಲ್ಲಿ ಸೇರಿಸಿರುವೆನು. ಈ ಪದ್ಧತಿಯೇ ಪಾದರಿಗಳಿಗೆ ಅನಿಷ್ಟ ವನ್ನೂ ದ್ವೇಷವನ್ನೂ ಉಂಟುಮಾಡಲು ಕಾರಣವಾಯಿತು. ಈ ಪುಸ್ತಕದಮೇಲೆ ಗ್ರಂಥಕರ್ತನ ಹೆಸರು ಬರೆಯಲ್ಪಡದಿದ್ದರೂ ಆತನು ಯಾರೆಂಬುದನ್ನು ಎಲ್ಲರೂ ತಿಳಿದೇ ಇದ್ದರು, ಈ ಗ್ರಂಥವು ಪ್ರಚುರವಾದ ಕೆಲವು ದಿನಗಳಲ್ಲಿಯೇ ಶ್ರೀರಾಂಪುರದ ಪಾದರಿಗಳಿಂದ ನಡೆಸಲ್ಪಡುವ ಹಿಂದೂದೇಶದ ಮಿತ್ರನು (Friendl of India) ಎಂಬ ಆಂಗ್ಲಯ ನೃತ್ಯಾಂತಪತ್ರದಲ್ಲಿ ಈ ಗ್ರಂಥವನ್ನು ತಿರಸ್ಕರಿಸುವ ವ್ಯಾಸವೊಂದು ಸ್ಮಿತ್ ಎಂಬ ಪಾದರಿಯಿಂದ ಬರೆಯಲ್ಪಟ್ಟಿತು, ಆ ಪತ್ರಿಕೆಯ ಯಜಮಾನನಾದ ಮಾರ್ಷಮೆ್ರ ಎಂಬವನು ಇದರಲ್ಲಿ ತನ್ನ ಅಭಿಪ್ರಾಯಗ ಳನ್ನೂ ಬರೆದು, ಅಲ್ಲಲ್ಲಿ ರಾಮಮೋಹನನನ್ನು ಕುರಿತು (ಹೀರ್ದ ) ವಿಗ್ರಹಾರಾಧಕನೆಂದು ಸೂಚಿಸಿ ಆಕ್ಷೇಪಿಸಿದ್ದನು. ಕ್ರಿಸ್ತಿಯರಿಗೆ ಮೊದಲನೆಯ ವಿಜ್ಞಾಪನೆ (First Appcal to the Christian public) ಎಂಬ ಶೀರ್ಷಿಕೆಯಿಂದ ಆ ವಾರ್ತಾಪತ್ರದ ಆಕ್ಷೇಪಗಳಿಗೆ ಸತ್ಯಸ್ನೇಹಿತನು ಎಂಬ ಹೆಸರಿನಿಂದ ರಾಮಮೋಹನನು ಪ್ರತ್ಯುತ್ತರವನ್ನು ಪ್ರಕಟಿಸಿದ್ದನು. ಡಾಕ್ಟರ್ ಮಾರ್ಷಮೆ್ರ ಅದಕ್ಕೆ 1820ನೇ ಇಸವಿಯ ಮೇ ಮತ್ತು ಸೆಪ್ಟಂಬರು ತಿಂಗಳುಗಳ ಸಂಚಿಕೆಯಲ್ಲಿ ತಿರುಗಿ ಬದಲು ಆಕ್ಷೇಪಗಳನ್ನು ಬರೆದನು, ತರುವಾಯ ಗುಟ್ಟಾಗಿದ್ದ ತನ್ನ ಹೆಸರನ್ನು ಬಹಿರಂಗಪಡಿಸಿ ಕ್ರಿಸ್ತಿಯರಿಗೆ ಎರಡನೆಯ ವಿಜ್ಞಾಪನೆ (Second Appeal to the Christian public) ಎಂಬ ಪ್ರತ್ಯುತ್ತರವನ್ನು ಮುದ್ರಿಸಿದನು, 1821 ನೇ ಡಿಸೆಂ ಬರು ತಿಂಗಳ ಸಂಚಿಕೆಯಲ್ಲಿ ಡಾಕ್ಟರ್ ಮಾರ್ಷಮೆ್ರ ಇದಕ್ಕೆ ಸುದಾ ಮೊದಲಿಗಿಂತ ಚಮ ತ್ಕಾರವಾಗಿ ಉತ್ತರವನ್ನು ಬರೆದನು, ಈ ಆಕ್ಷೇಪಣೆಗಳಿಗೆ ರಾಮಮೋಹನನು 4: ಕ್ರಿಸ್ತಿಯ ರಿಗೆ ತುದಿಯ ವಿಜ್ಞಾಪನೆ' (Final Appeal to the Christian public) ಎಂಬ ಮೂರನೆಯ ಪ್ರತ್ಯುತ್ತರವನ್ನು ಬರೆದನು, ಆದರೆ ಮೊದಲು ಬರೆಯುತ್ತಿದ್ದ ಇಂಗ್ಲೀಷು ಗ್ರಂಥಗಳನ್ನೂ ವ್ಯಾಸಗಳನ್ನೂ ಬ್ಯಾಪ್ಟಿಸ್ಟೀವರ್ಷ ಮುದ್ರಾಕ್ಷರಶಾಲಾಧಿಕಾರಿಗಳು ಮುಂದೆ ತಮ್ಮ ಪ್ರೆಸ್ಸಿನಲ್ಲಿ ಇಂತಹ ಸ್ವಮತವಿರುದ್ದವಾದ ಗ್ರಂಥಗಳನ್ನು ಎಷ್ಟು ಹಣಕೊಟ್ಟರೂ ಮುದ್ರಿಸಲಾರೆವು ಎಂದು ನಿರ್ಣಯಮಾಡಿಕೊಂಡದ್ದರಿಂದ ಒಡನೆಯೇ ಮುದ್ರಿಸಲು ಅವಕಾ ಶವಿಲ್ಲದೆ ಸ್ವಲ್ಪ ಕಾಲಹರಣವಾದರೂ ಸ್ವಲ್ಪ ಕಾಲದಮೇಲೆ ಸ್ವಂತವಾಗಿ ಆಂಗ್ಲೆಯ ಮುದ್ರಾ ಕ್ಷರಗಳನ್ನೂ ಮುದ್ರಾಯಂತ್ರಗಳನ್ನೂ ಕೊಂಡು ತಂದು ಯೂನಿಟೇರಿರ್ಯ ಪ್ರೆಸ್) ಎಂದು ಹೆಸರಿಟ್ಟು ಅದರಲ್ಲಿಯೇ •ಈ ಮೂರನೆಯ ಪುಸ್ತಕವನ್ನು 1883 ರಲ್ಲಿ ಮುದ್ರಿಸಿ ಪ್ರಚುರಪಡಿಸಿದನು. ಈ ಪುಸ್ತಕದಲ್ಲಿಯ ಸಹೇತುಕಗಳಾದ ಖಂಡನಗಳನ್ನು ನೋಡಿದ ಜನರೆಲ್ಲರೂ ಪರ ಮಶ್ಚರೈಮಗ್ನರಾದರು, ಮಾರ್ಷಮೆ್ರರವರು ತಮ್ಮ ಖಂಡನಪತ್ರಗಳಲ್ಲಿ ಇಂಗ್ಲೀಷ್ ಬೈಬಿ ಲಿನ ಉದಾಹಣೆಗಳನ್ನು ಕೊಡುತ್ತಿದ್ದರು. ರಾಮಮೋಹನನು ಹೀಬ್ರೂ, ಗ್ರೀಕ್ ಭಾಷೆ 5
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೦
ಗೋಚರ