ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ರಾಜಾರಾಮಮೋಹನರಾಯರ ಜೀವಿತ ಚರಿತ್ರೆ, ರಾಮಾಯಣವೂ, ಭಾರತವೂ ಮಹಮ್ಮದೀಯರು ಹಿಂದೂಸ್ಥಾನಕ್ಕೆ ಬಂದಮೇಲೆ ಬರೆಯ ಲ್ಪಟ್ಟುವುಗಳೆಂತಲ, ಹಿಂದುಗಳು ಅವತಾರವೆಂಬ ಶಬ್ದವನ್ನು ಬೈಬಲಿನಿಂದಲೇ ಕಲಿತುಕೊಂ ಡರೆಂತಲೂ ಚರಿತ್ರಜ್ಞಾನವಿಲ್ಲದ ಅಸಂಬಂಧವಾಕ್ಯಗಳಿ೦ದ ಬರೆದು ರಾಮಮೋಹನನಿಗೆ ಪ್ರ ತ್ಯುತ್ತರವಾಗಿ ಪ್ರಕಟಿಸಿದನು, ಅದರಮೇಲೆ ರಾಮಮೋಹನನು ಡಾಕ್ಟರ್ ಆಫ್ ಮೆಡಿರ್ಸ' ಎಂಬ M. D, ಪ್ರಶಸ್ತಿಯನ್ನು ತಾವು ಯಾವ ಕಲಾಶಾಲೆಯಿಂದ ಪಡೆದಿರಿ ? ಅಲ್ಲಿ ವಿದ್ಯಾ ಪರಿಶ್ರಮವುಳ್ಳವರಿಗೆ ಆ ಪ್ರಶಸ್ತಿಯನ್ನು ಕೊಡುವುದು ಅರ್ಕವಾಗಿದೆಯೇ ? ಎಂದು ಲಿಖಿತ ಪೂರ್ವಕ ಕೇಳಿದನು. ಅದಕ್ಕೆ ಟೈಲರ್ ದೊರೆಗಳು 11 ಮೌನಮೇವ ವಿಭೂಷಣಂ ಎಂಬ ನೀತಿಯನ್ನನುಸರಿಸಿ ಸುಮ್ಮನೆ ಆದರು. 1823 ನೇ ಮೇ 3 ನೇ ತಾರೀಖಿನಲ್ಲಿ ಪ್ರಾರಂಭಿಸಿದ ಈ ಚರ್ಚೆಯು ಮೇ 23 ನೇ ವರೆಗೂ ನಡೆಯುತ್ತಲೇ ಇದ್ದಿತು, ಜೂ೯ 30 ನೇ ತಾರೀ ಬಿಗೆ ರಾಮಮೋಹನನು ಈ ಉತ್ತರಪ್ರತ್ಯುತ್ತರಗಳನ್ನೆಲ್ಲಾ ಪುಸ್ತಕರೂಪವಾಗಿ ಪ್ರಕಟಿಸಿ ದನು, ಗ್ರಂಥವು ಪ್ರಚುಸಲ್ಪಟ್ಟ ಮೇಲೆ ಟೈಲರು ರೋಪಾವಿಷ್ಟನಾಗಿ ಮರಳಿ ವಾದಿಸಲಿಕ್ಕೆ ಪ್ರಾರಂಭಿಸಿದನು, ಆದರೆ ಪ್ರತ್ಯುತ್ತರ ಕೊಡುವುದರೊಳಗಾಗಿ ಈತನು ಈ ದೇಶವನ್ನು ಬಿಟ್ಟು ಹೊರಟುಹೋಗಬೇಕಾಗಿ ಬಂದುದರಿಂದ ಹೊರಟುಹೋದನು, ಟೈಲರ್‌ರವರಿಗೆ ರಾಮಮೋಹನನಿಂದ ಬರೆದು ಕಳುಹಿಸಲ್ಪಟ್ಟ ಪ್ರಹಸನದಲ್ಲಿ ಕೆಲವು ವಾಕ್ಯಗಳನ್ನು ವಾಹಕ ರಿಗೆ ಸಂತೋಷಕರವಾಗಿರಲೆಂದು ಇದರಡಿ ಬರೆದಿರುವೆವು. ಪಾದಿರಿಯವರಿಗೂ, ಅವರ ಮೂವರು ಶಿಷ್ಯರಿಗೂ ನಡೆದ ಸಂಭಾಷಣೆ:- ಫಾದಿರಿ-(ಮೂವರು ಶಿಷ್ಯರೊಂದಿಗೆ) ಪ್ರಿಯಮಿತ್ರರೇ ! ದೇವರು ಎಷ್ಟು ರೂಪಗಳ ನ್ನು ಳ್ಳವನು ? ಮೊದಲನೆಯ ಶಿಷ್ಯ-ಮೂರು, ದ್ವಿತೀಯನು-ಎರಡು, ತೃತೀಯನು ಯಾವ ರೂಪವೂ ಇಲ್ಲದವನು. ಫಾದಿರಿ-ಏನಿದು ! ನೀನು ಸೈತಾನನ ಪದ್ಧತಿಯಲ್ಲಿ ಸೇರಿದ್ದೀಯೆ ? ಶಿಷ್ಯರು-ತಾವು ಯಾರಲ್ಲಿ ಕಲ್ಲಿರೋ ನಮಗೆ ತಿಳಿಯದು, ನಮಗೆ ಮಾತ್ರ ತಾವೇ ಬೋಧಕರಲ್ಲವೆ ? ಫಾದಿರಿ--(ಮೊದಲನೆಯವನ ಕಡೆಗೆ ತಿರುಗಿ) ಸರಿಸರಿ, ಮೂರುರೂಪಗಳೂ ಹೇಗೆ ಆದವು ? ತಿಳಿಸು. ಮೊದಲನೆ-ತಂದೆ (ದೇವರು) ಮಗನು (ದೇವರಮಗನು) ಆತ್ಮ, ಮೂವರು. ಫಾದರಿ-ಚೆನ್ನಾಗಿದೆ: ಆಗಲಿ, ಈ ಮೂವರು ಒಂದೇ ಎಂದು ತಿಳಿದುಕೊ. ಮೊದಲನ-ಅಪ್ಪಣೆ ಫಾದರಿ-(ಎರಡನೆಯವನನ್ನು ನೋಡಿ) ನೀನು ಎರಡೆಂದು ಹೇಗೆ ತಿಳಿದೆ? ದ್ವಿತೀಯ-ನಾನು ಇದುವರೆಗೂ ಮೂವರೆ ಎಂದು ತಿಳಿದಿದ್ದೆನು, ಆ ಮೂವರಲ್ಲಿ