ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ. ಮಹಾಮುನಿಯು ಹೇಳಿರುವಂತೆ ಕಲಿಯುಗದಲ್ಲಿ ವರ್ಣಸಂಕರಕ್ಕೆ ಆರಂಭವಾಗಿದೆ ಎಂತಲ ಹಲವು ವಿಧವಾಗಿ ಹೇಳಿಕೊಳ್ಳುತ್ತಿದ್ದರು. ಯಾರ ಬಾಯಲ್ಲಿ ನೋಡಿದರೂ ರಾಮಮೋ ಹನನು ವಿಲಾಯಿತಿಗೆ ಹೋಗುತ್ತಾನಂತೆ ! ಎಂಬ ಮಾತುಗಳೇ ಕೇಳಬರುತ್ತಿದ್ದುವು. ಮನೆಯಲ್ಲಿದ್ದವರೆಲ್ಲರೂ ಆತನು ಪ್ರಯಾಣವನ್ನು ನಿಲ್ಲಿಸಿಬಿಡಬೇಕೆಂತಲೂ ಇಲ್ಲದಿದ್ದರೆ ಮತ ವನ್ನೂ ಪಿತ್ರಾರ್ಜಿತ ಸ್ವತ್ತಿನಲ್ಲಿ ಅಧಿಕಾರವನ್ನೂ ಕಳೆದುಕೊಳ್ಳಬೇಕಾಗುವುದೆಂತಲೂ ಪಟ್ಟು ಹಿಡಿದರು, ಕೆಲವರು ವೃದ್ಧರಾದ ಸ್ನೇಹಿತರು ತಮ್ಮ ! ಇಂತಹ ಕೆಲಸಗಳನ್ನು ಮಾ ಡಬೇಡ' ಎಂದು ಬೋಧಿಸಿದರು, ಆದರೆ ಬಾಲ್ಯದಿಂದಲೂ ಬಹಳ ಕಷ್ಟಗಳನ್ನು ಸಹಿ ಸುವ ಅಭ್ಯಾಸಗೊಂಡು ಬ್ರಹ್ಮಪ್ರಚಾರವು ಆರಂಭಿಸಿದಮೇಲೆ ಪ್ರತಿಪಕ್ಷದವರಿಂದ ಮಾಡ ಲ್ಪಡುವ ದುರಾಗಗಳನ್ನೆಲ್ಲಾ ಸೈರಿಸಿ ತನ್ನ ಅಂತರಾತ್ಮನು ನ್ಯಾಯವೆಂದು ಗ್ರಹಿಸಿದ ವಿಷ ಯದಲ್ಲಿ ಮುಖ್ಯ ದೀಕ್ಷೆಯನ್ನು ವಹಿಸಿರುವ ಸ್ವಭಾವವನ್ನುಳ್ಳ ರಾಮಮೋಹನನಿಗೆ ಯಾವ ಆಸ್ತಿಯಲ್ಲಿಯಾದರೂ ತನಗೆ ಇರುವ ಹಕ್ಕು ತಪ್ಪುವುದೆಂಬ ಭಯವಾಗಲಿ, ಮತಭ್ರಷ್ಟನಾ ಗುವೆನೆಂಬ ವಿಚಾರವಾಗು, ಮನೆಯವರ ಗೋಳಾಟವಾಗಲಿ ಹೇಗೆ ಪ್ರತಿಬಂಧಕಗಳಾದಾ ವ ? ಆತನು ಇವುಗಳೊಂದನ್ನೂ ಲೆಕ್ಕಿಸದೆ ಹಿಂದೂದೇಶದ ಅದೃಷ್ಟ, ನಾಗರಿಕತೆ, ಸ್ವಾ ತಂತ್ರ್ಯ ಮುಂತಾದುವು ಗಾರ ದೇಶದವರ ದಯೆಯಿಂದ ಅಭಿವೃದ್ಧಿ ಹೊಂದಬೇಕಾಗಿ ವೆಯೋ ಯಾವ ದೇಶದ ಪ್ರಸಿದ್ಧಿಯನ್ನು ನ್ಯೂರ್ಟ, ಬೇರ್ಕ, ಷೇಕ್ಸ್‌ಪಿಯರ್, ಮಿರ್ಲ್ಟ ಎಂಬ ಲೋಕವಿಖ್ಯಾತರಾದ ಕವಿವಯ್ಯರು ಪ್ರಪಂಚದ ಎಲ್ಲಾ ಭಾಗಗಳಲ್ಲಿಯ ವ್ಯಾಪನೆ ಗೊಳಿಸಿದರೋ, ಯಾವುದು ಸುಸ್ಥಿತ್‌ನ್ನತ್ವವನ್ನು ಕಣ್ಣಾರ ನೋಡಬೇಕೆಂದು ತಾನು ಬಹುಕಾಲದಿಂದ ಆತುರಗೊಂಡನೋ ಆ ದೇಶವನ್ನು ನೋಡುವುದಕ್ಕೆ ಸಿದ್ಧನಾದನು. ರಾಮಮೋಹನನು ಪ್ರಯಾಣಪ್ರಯತ್ನಗಳನ್ನೆಲ್ಲಾ ಜತೆಗೊಳಿಸಿಕೊಂಡು, 'ಅಲೈರ್ ' ಎಂಬ ಹೊಗೆಯ ಹಡಗನ್ನೇರಿ ಹೊರಡುವದಕ್ಕೆ ಏರ್ಪಡಿಸಿಕೊಂಡನು. ಈ ಪ್ರಯಾಣ ದಲ್ಲಿ ತನ್ನ ಜತೆಯಲ್ಲಿ ಮೂವರನ್ನು ಕರೆದುಕೊಂಡನು. ಅವರಲ್ಲಿ ರಾಮರತ್ತ ಮುಖರ್ಜಿ, ರಾಮಹರಿಮುಖರ್ಜಿ ಎಂಬವರಿಬ್ಬರು ಪರಿಚಾರಕರು, ಮೂರನೆಯವನು ರಾಮಮೋಹನನು ಬಾಲ್ಯದಿಂದಲೂ ಸಾಕುತ್ತಿದ್ದ ರಾಜಾರಾಂ ಎಂಬ ಹುಡುಗನು, ಇವನು ಹರಿದ್ವಾರದಲ್ಲಿ ಎದೆ ಹಾಲನ್ನು ಕುಡಿಯುವ ವಯಸ್ಸಿನಲ್ಲಿಯೇ ತಾಯಿತಂದೆಗಳನ್ನು ಕಳೆದುಕೊಂಡು ದಿಕ್ಕಿಲ್ಲದವ ನಾಗಿದ್ದುದನ್ನು ಡಫ್ ಎಂಬ ಇಂಗ್ಲಿಷನು ನೋಡಿ ಬಹಳ ಕರುಣಾಳುವಾಗಿದ್ದುದರಿಂದ ಆ ಮಗುವಿನ ಅವಸ್ಥೆಗಾಗಿ ಚಿಂತಿಸಿ ಅವನನ್ನು ಕಲ್ಕತ್ತೆಗೆ ಕರೆದುತಂದು ತನ್ನ ಬಳಿಯಲ್ಲಿಟ್ಟು ಕೊಂ ಡು ಸಲಹುತಿದ್ದನು, ಕೆಲವು ದಿನಗಳಲ್ಲಿಯೇ ಈತನು ಇಂಗ್ಲೆಂಡಿಗೆ ಹೊರಡಬೇಕಾಗಿ ಬಂದು ದರಿಂದ ಈತನು ರಾಮಮೋಹನನ ಬಳಿಗೆ ಬಂದು, ಸ್ನೇಹಸ್ವಾತಂತ್ರ ದಿಂದ ಈ ಮಗುವನ್ನು ನಿನ್ನ ವಶದಲ್ಲಿಟ್ಟು ಕೊಂಡು ಪೋಷಿಸು, ಎಂದು ಹೇಳಿ ಒಪ್ಪಿಸಿದನು. ದಿಕ್ಕಿಲ್ಲದ ಬಾಲರಲ್ಲಿ ವಿದೇಶೀಯರಿಗೇನೆ ಇಷ್ಟು ದಾಕ್ಷಿಣ್ಯವಿರುವಲ್ಲಿ ಸ್ವದೇಶಸ್ಥರಾದ ನಾವು ಅಷ್ಟು ಮಟ್ಟಿಗೆ ದಯೆ ತೋರದೆ ಇರುವೆವೇ ? ಎಂದು ಹೇಳಿ ರಾಮಮೋಹನನು ಅವನನ್ನು ತನ್ನ ವಶಕ್ಕೆ ತೆಗೆ E