ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೮೩ ದುಕೊಂಡನು, ಆದರೆ ಡಫ್ ದೊರೆ ತಿರುಗಿ ಬಾರದೆಹೋದುದರಿಂದ ರಾಮಮೋಹನನ ಹತ್ತಿರದಲ್ಲಿಯೇ ಆ ಬಾಲಕನಿದ್ದು ಬಿಟ್ಟನು. ಕ್ರಮಕ್ರಮವಾಗಿ ರಾಮಮೋಹನನಿಗೆ ಈ ಬಾಲಕನಮೇಲೆ ಪುತ್ರವಾತ್ಸಲ್ಯವುಂಟಾಯಿತು. ಒಂದೊಂದುವೇಳೆ ಮಲಗಿದ್ದಾಗ ಇವನ ಮೆಲೆ ಬಿದ್ದು ಧುಮುಕುತ್ತಿದ್ದರೂ ಸ್ವಲವೂ ಕೋಪಿಸದೆ, ಯಾವಾಗಲೂ ರಾಜಾ ರಾಜಾ ಎಂದು ಕರೆಯುತ್ತಾ, ಅವನನ್ನೆತ್ತಿಕೊಂಡು ತಿರುಗುತ್ತಿದ್ದನು. ಒಂದುಸಾರಿ ಧರ್ಮ ಸಭೆ ಯವರು ಎರೋಧಭಾವದಿಂದ ಈ ಹುಡುಗನು ಮೈಚ್ಛನೆಂಬ ವರ್ತಮಾನವನ್ನು ಹುಟ್ಟಿಸಿ, ಈ ಕಾರಣದಿಂದ ರಾಮಮೋಹನನು ಪಂಬಾಹ್ಯನೆಂದು ನಿಷೇಧಿಸಿದರು, ನಮ್ಮ ಕಥಾ ನಾಯಕನು ಈ ಮೂವರನ್ನೂ ಸಂಗಡ ಕರೆದುಕೊಂಡು 1830 ನೆಯ ನವಂಬರು 19 ರಲ್ಲಿ ಹೂಗ್ಲಿಯ ಬಳಿ ಹೊಗೆಯ ಹಡಗನ್ನು ಹತ್ತಿದನು, ಈತನು ಹೊರಡುವುದಕ್ಕೆ ಮುಂಚೆ ತನ್ನ ಪ್ರಾಣಾಪ್ತನಾದ ದ್ವಾರಕಾನಾಥರಾಕರನ ಮನೆಗೆ ಹೋದನು, ಆಗಿನ ಸ್ಥಿತಿಯನ್ನು ಕುರಿತು ಮಹರ್ಷಿಯಾದ ದೇವೇಂದ್ರನಾಥ ಠಾಕೂರರವರು ಹೀಗೆ ಬರೆದಿರುವರು : ಆ ವೇಳೆ ಯಲ್ಲಿ ರಾಮಮೋಹನನನ್ನು ನೋಡಲಿಕ್ಕಾಗಿ ಬಂದ ಜನರ ಸಂಖ್ಯೆ ಯನ್ನು ಸುಲಭವಾಗಿ ಲೆ ಮಾಡಲು ಸಾಧ್ಯವಾಗಿರಲಿಲ್ಲ, ವಿಶಾಲವಾದ ದ್ವಾರಕಾನಾಥನ ಮನೆಯ ಅಂಗ. ಇವೂ ಸೋಪಾನಗಳೂ ಜನರಿಂದ ತುಂಬಿದ್ದವು, ಕೆಲವರು ಸ್ಥಳವಿಲ್ಲದುದರಿಂದ ಬೀದಿಯಲ್ಲಿ ಕಿಕ್ಕಿರಿದು ನಿಂತಿದ್ದರು, " ತನ್ನ ಯ ಲಾಭವನೆಳಸದೆ | ಸನ್ನು ತಮತಿಯಾಗಿ ಲೋಕಹಿತಮೊಡರಿಸುತುಂ || ಮನ್ನಣೆಯನಾಂತ ಸದ್ಗುಣಿ | ಗಿನ್ನೆಣೆಯಾರ್ಜಗದೆ ಸುಗುಣಸಾಗರ ನಾತಂ || 11 ಐದನೆಯ ಪ್ರಕರಣ ಯೂರೋಪ್ ಖಂಡದಲ್ಲಿ ರಾಜಾ ರಾಮಮೋಹನರಾಯರ ಪ್ರಸಿದ್ದಿ ಯು ಆತನು ಇಂಗ್ಲೆಂಡಿಗೆ ಹೊರಡಬೇಕೆಂಬ ಕೋರಿಕೆ ಹುಟ್ಟುವುದಕ್ಕೆ ಮುಂಗೆಯೇ ವ್ಯಾಪಿಸಿತ್ತು. ಮೊತ್ತ ಮೊದಲು ಈತನ ಹೆಸರನ್ನು ಅಲ್ಲಿ ಪ್ರಸಿದ್ಧಿಗೆ ತಂದವರು ಮತಬೋಧಕರು, ರಾಮಮೋಹ ನನು ಸಹಗಮನವನ್ನು ನಿಲ್ಲಿಸಲಿಕ್ಕೆ ಮಾಡಿದ ಪ್ರಯತ್ನಗಳನ್ನು ನೋಡಿ, ಆತನಿಂದ ಬರಯ ಲ್ಪಟ್ಟ ಗ್ರಂಥಗಳನ್ನೋದಿ, ಆತನನ್ನು ಬಹಳವಾಗಿ ಹೊಗಳಿ, ಅವರ ಪ್ರಶಂಸೆಯನ್ನು ಸೀಮೆಗೆ ಬರೆದು ಕಳುಹುತ್ತ ಬಂದರು, ಅಲ್ಲಿನವರು ಆ ವರ್ಣನೆಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕ ಟಿಸುತ್ತಾ ಬಂದರು. ತರುವಾಯ ಕ್ರಮಕ್ರಮವಾಗಿ ಕ್ರಿಸ್ತಮತದಲ್ಲಿ ಗಮನವಿತ್ತು,