ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೬ ರಾಜಾರಾಮಮೋಹನರಾಯರ ಜೀವಿತ ಚರಿತ್ರ. ಹೀಗೆ ಬರೆದಿರುವನು : (ಹೊಗೆ ಹಡಗಿನಲ್ಲಿ ನಾವು ಇದ್ದ ಕೊಠಡಿಯ ಪಕ್ಕದಲ್ಲಿ ರಾಮ ಮೋಹನರಾಯನೆಂಬ ಹಿಂದೂ ಬ್ರಾಹ್ಮಣನೊಬ್ಬನಿದ್ದನು. ಆತನ ಅಡಿಗೆಗೆ ಬೇರೆ ಒಲೆ ಸಿಕ್ಕುವುದು ಕಷ್ಟವಾಗಿದ್ದುದರಿಂದ ಮೊಟ್ಟ ಮೊದಲು ಆತನು ಸ್ವಲ್ಪ ಶ್ರಮಪಟ್ಟನು. ಆತನು ತನ್ನ ಕೃತ್ಯ ರೊಂದಿಗೆ ತಾನೂ ಆ ಕೋಣೆಯಲ್ಲಿಯೇ ಭೋಜನಮಾಡುತ್ತಾ ಹೊರಕ್ಕೆ ಬಾರಗೆ ಯಾವಾಗಲೂ ಅಲ್ಲಿಯೇ ಇರುತ್ತಿದ್ದನು, ಗಾಳಿ ಬೀಸಿದಾಗ ದೊಡ್ಡ ದೊಡ್ಡ ಅಲೆ ಗಳನ್ನು ಬರುವಾಗ ಆತನು ಒಂದುಸಾರಿ ಹೊರಕ್ಕೆ ಬಂದು ಅವುಗಳ ಶಬ್ದವನ್ನು ಕೇಳುತ್ತ ಆನಂದಪಡುತ್ತಿದ್ದನು. ತಾನಿರುವ ಕೋಣೆಯು ಬಹು ಇಕ್ಕಟ್ಟಾಗಿಯೇ ಇದೆಯೆಂದು ಒಂದುಸಾರಿ ಹೇಳೆದನು, ಹಾಗೆ ಇದ್ದ ಆ ಚಿಕ್ಕ ಕೊಠಡಿಯಲ್ಲಿಯೇ ಸವರಿಸಿಕೊಂಡು ಇದ್ದುದನ್ನು ನೋಡಿ ಆತನಿಗೆ ನೃತ್ಯರಲ್ಲಿ ತುಂಬಾ ಆದರವಿರುವುದೆಂದು ತಿಳಿದೆನು, ಪ್ರತಿದಿ ನವೂ ಹಗಲಲ್ಲಿ ನಮ್ಮ ದೇಶದ ಪ್ರಯಾಣಿಕರೆಲ್ಲರೂ ಒಂದೇ ಪಟ್ಟಿಯಲ್ಲಿ ಕುಳಿತು ಭೋಜನ ಮಾಡುತ್ತಿದ್ದಾಗ ಈತನು ಅಲ್ಲಿಗೆ ಬಂದು ಕೇಳಲಿಕ್ಕೆ ಹಿತವಾಗುವಂತೆ ಲೋಕದ ವಾರ್ತೆಗ ಇನ್ನು ಹೇಳುತ್ತಾ ಬರುವನು, ಆತನು ಸಂತೋಷಪ್ರಿಯನೂ, ವಿದ್ಯಾವಿಶಾರದನೂ ಮಾ ತ್ರವಲ್ಲದೆ ಬುದ್ಧಿವಂತನಾಗಿದ್ದುದರಿಂದ ಜತೆಯಲ್ಲಿ ಪ್ರಯಾಣಮಾಡುತ್ತಿದ್ದ ನಮ್ಮೆಲ್ಲರಿಗೂ ಆತನಲ್ಲಿ ತುಂಬಾ ಗೌರವವುಂಟಾಯಿತು. ಆತನು ತನ್ನ ಸಂಗಡ ಒಂದು ಆಕಳನ್ನೂ ತಂದಿ ದನು, ನೆಟಾಲಿನಲ್ಲಿ ಆತನು ಫ್ರಾನ್ಸಿನವರ ಹಡಗಿನಮೇಲೆ ಇದ್ದ ಸ್ವಾತಂತ್ರ ದ ಧ್ವಜ ವನ್ನು ನೋಡಿ ಅವರಿಗೆ ಸ್ವಾಗತವನ್ನು ಕೊಡಲಿಕ್ಕೆ ಹೋದಾಗ ಆತನ ಕಾಲಿಗೆ ಸ್ವಲ್ಪ ಪೆಟ್ಟಾಗಿ ಗಾಯವಾಯಿತು, ಪಾಪ ! ಅದು ಆತನನ್ನು ಬಹುಕಾಲ ಬಾಧಿಸಿರಬಹುದೆಂದು ತಿಳಿಯುವೆನು ಸುಪ್ರಸಿದ್ಧನಾದ ರಾಮಮೋಹನನು ಈದಿನ ಹೊಗೆ ಹಡಗಿನಲ್ಲಿ ಲಿವರ್ಪೂಲ್ಲಿ ಇಲ್ಲಿ ಯುವನೆಂಬ ವರ್ತಮಾನವು ದಿನಂಪ್ರತಿಯೂ ಹೊರಡುವ ವಾರ್ತಾಪತ್ರದಲ್ಲಿ ಅದುವರೆಗೆ ಪ್ರಕಟಿಸಲ್ಪಟ್ಟಿತ್ತು ಅದನ್ನು ನೋಡಿ ವಿಲ್ಲಿಯಂ ರಾತ'ರ್ಬ' ಎಂಬ ಒಬ್ಬ ದೊಡ್ಡ ಮನು ಷ್ಯನು ರಾಮಮೋಹನನನ್ನು ತನ್ನ (ರ್ಿ ಬ್ಯಾಕ್ ಎಂಬ ವಿಶಾಲಭವನದಲ್ಲಿ ಬಿಡಾರ ಮಾಡಲು ಪ್ರಾರ್ಥಿಸುವೆನೆಂದು ಆತನಿಗೆ ಒಂದು ಪತ್ರ ಬರೆದನು, ಆದರೆ ಸ್ವಾತಂತ್ರ್ಯ ಪ್ರಿಯನಾದ ರಾಮ ಮೋಹನನು ಅದನ್ನು ಅಂಗೀಕರಿಸದೆ ಡೆಡ್ಡಿ” ಎಂಬ ಸತ್ರದಲ್ಲಿ ಇಳಿದು ಕೊಂಡನು, ಪಟ್ಟಣವಾಸಿಗಳಲ್ಲಿ ಅನೇಕರು ಆತನನ್ನು ನೋಡಲಿಕ್ಕೆ ಅಲ್ಲಿಗೆ ಹೊರಟು ಬಂದರು. ಅವರು ಬಾಲ್ಯದಲ್ಲಿ ಒಂದು ಹೊಗೇಹಡಗಿನ ಉದ್ಯೋಗಸ್ಥನಾಗಿದ್ದು, ಕಲ್ಕ ಕೈಗೆ ಬಂದು ಅಲ್ಲಿ ರಾಮಮೋಹನನ ಕೀರ್ತಿ ಪ್ರತಿಷ್ಠೆಗಳನ್ನು ಕೇಳಿ ಆತನನ್ನು ನೋಡಲಿಕ್ಕೆ ಬಂದ ಯೌವ್ವನ ಪುರುಷನೊಬ್ಬನಿದ್ದನು. ಆತನು ಮುಂದಕ್ಕೆ ಬಂದು, ತಾನು ಕಲ್ಕತ್ತೆ ಯಲ್ಲಿ ಆತನನ್ನು ನೋಡಿದ ಸಂಗತಿಯನ್ನೂ, ತಾನು ಕಂಡ ಕೆಲವು ಗುರುತುಗಳನ್ನೂ ವಿವ ಏಸಿ ಹೇಳಿದನು, ರಾಮಮೋಹನನು ಆತನ ಪ್ರೇಮಕ್ಕೆ ತುಂಬ ಕೃತಜ್ಞತೆಯನ್ನು ತೋ ಏಸಿ, ಪ್ರಮುಖರನ್ನು ಗೌರವಿಸಿದಹಾಗೆ ಆತನಿಗೆ ಕೂಡ ಮಲ್ಯಾದೆಯನ್ನು ತೋರಿಸಿದನು.