ಪುಟ:ರಾಣಾ ರಾಜಾಸಿಂಹ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂಹ [ಪ್ರಕರಣ • / \ \vv •v • • • Jv \ vvvvvv

  • ರಾಜ_“ನನಗಾದರೂ ಅದೇಗುಣವೆಂದು ತೋರುತ್ತದೆ. ಇವ ರನ್ನು ಉಪವಾಸ ಕೊಲ್ಲುವದು ನನ್ನ ಮನಸ್ಸಿಲ್ಲ ಹಸಿದವರಿಗೆ ಅನ್ನ ಕೊಡುವದು ಆರ್ಯರ ಕರ್ತವ್ಯವು, ಆದ್ದರಿಂದ ಶತ್ರುಗಳನ್ನು ಅನ್ನ ವಿಲ್ಲದೆ ಕೊಲ್ಲ ಕೂಡದು ಆದರೆ ಅವರ ಎದುರಿಗೆ ನಿಂತು ಅವರೊಡನೆ ಕಾದಿ ಕೊಲ್ಲುವದು ರಜಪೂತರ ಧರ್ಮವು. ”

ಸಾಯಂಕಾಲಕ್ಕೆ ಅದೇಸ್ಥಳದಲ್ಲಿ ಸಭಗೂಡಿಸಿದರು ಆಸಭೆಗೆ ಪ್ರಧಾನ, ಸೇನಾಪತಿ, ಮೊದಲಾದ ದೊಡ್ಡ ದೊಡ್ಡ ಅಧಿಕಾರಸ್ಥರು ಬಂದಿ ದ್ದರು ಮೊದಲು ರಾಜಸಿಂಹನು ತನ್ನ ವಿಚಾರವನ್ನು ತಿಳಿಸಿದನು. ಆಮೇಲೆ ಯಾರಾದರೂ ಮಾತಾಡುವವರು ಮಾತಾಡ ಬಹುದೆಂದು ಅಪ್ಪಣೆಯನ್ನು ಕೊಟ್ಟನು ಎಷ್ಟೊಜನರು ಅಡ್ಡಿಯಿಲ್ಲ. ಮೊಗಲರನ್ನು ಈಗಿರುವಸ್ಥಳದಲ್ಲಿಯೆ ಸಾಯಗೊಲ್ಲುವದು ಯೋಗ್ಯವಾದದ್ದು ನಾವು ಔರಂಗಜೇಬನ ಹಿರೇಮಗನನ್ನು ಕರೆತಂದು ಇಲ್ಲಿ ಆತನ ಅಂತರ್ವಿಧಿಯನ್ನು ಮಾಡಿಸೋಣ, ಅಂದರೆ ಮೊಗಲರು ರಜಪೂತರ ಮೇಲೆ ಈವರೆಗೆಮಾ ಡಿದ ಅತ್ಯಾಚಾರದ ಪ್ರತೀಕಾರವಾದಂತಾಗುವದು” ಎಂದು ಹೇಳಿದರು. ರಾಜ_' ಸೇಡು ತೀರಿಸಿಕೊಳ್ಳಬೇಕೆಂಬ ಬುಟ್ಟಿ ಹುಟ್ಟುವದು ಸಹಜವಾದದ್ದು ಆದರೆ ಔರಂಗಜೇಬನೂ ಆತನ ಸೇನೆಯೂ ಸತ್ತುಹೋ ದರೆ ಹಿಂದುಸ್ತಾನದಲ್ಲಿ ಮೊಗಲರ ನಿಃಪಾತವಾದಂತಾಗಲಿಲ್ಲ ಆತನ ಮಗನಾದ ಶಹಾ ಅಲಮನು ಗಾದಿಯ ಮೇಲೆ ಕುಳಿತುಕೊಳ್ಳುವನು ಆತ ನಹತ್ತರ ಮಹಾರಾಷ್ಟ್ರದಿಂದ ಒ೦ದ ಸೇನೆಇರುವದು ಅದು ವರ್ವತದ ಆಚೇಮಗ್ಗಲು ಸಿದ್ದವಾಗಿರುತ್ತದೆ, ಅಲ್ಲದೆ ಮತ್ತೆ ಎರಡು ಮಗ್ಗಲಿಗೆ ಮುಸಲ್ಮಾನರ ಸೇನೆಯು ನಿಂತಿರುತ್ತದೆ ನಮ್ಮ ಸ್ವಲ್ಪ ಸೇನೆಯಿಂದ ಇಂಧ ದೊಡ್ಡ ಸೈನ್ಯವೆಲ್ಲ ನಾಶವಾದೀತೆಂದು ಹೇಳಲಿಕ್ಕಾಗುವದಿಲ್ಲ ನಾವು ಈಹೊತ್ತಲ್ಲ, ನಾಳೆಯಾದರೂ ತಹಮಾಡಿಕೊಳ್ಳತಕ್ಕವರೆ, ತಹಮಾಡಿ ಕೊಳ್ಳುವದಕ್ಕೆ ಈ ಹೊತ್ತಿನಂಧ ಸಮಯವು ನಾಳೆ ದೊರೆಯಲಾರದು. ಔರಂಗಜೇಬನ ಕಡೆಗೆ ನಮಗೆ ಬೇಕಾದ ಶರ್ತುಗಳನ್ನು ಕಳಿಸಿ ತಹ ಮಾಡಿ ಕೊಳ್ಳೋಣ ಈ ಸಮಯವನ್ನು ಕಳೆಯಕೂಡದು. ??