ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಔರಂಗಜೇಬನ ಮನೋನಿಶ್ಚಯ ೧೫ ೧೦h A ೧ A ~ ೧n Arn Anony : \ n// AA VA ಮೂರನೆಯ ಪ್ರಕ ರಣ 34-45 ಔರಂಗಜೇಬನ ಮನೋನಿಶ್ಚಯ ಚಿತ್ರ ಮಾರುವವಳು ಮನೆಗೆ ಬಂದು ಮುಟ್ಟಿದಳು ಆಕೆಯ ಮನೆಯು ಆಗಾಪಟ್ಟಣದಲ್ಲಿತ್ತು ಅದೇ ಅವಳ ಉದ್ಯೋಗವಾದ್ದರಿಂದ ಎಲ್ಲಿಬೇಕಾದಲ್ಲಿ ವಸತಿಯನ್ನು ಮಾಡುತ್ತಿದ್ದಳು ಮರುದಿವಸ ತನ್ನ ಮಾರಾಟವನ್ನು ಮುಗಿಸಿಕೊಂಡು ಮನೆಗೆ ಬರುತಿದ್ದಳು ಆದರೆ ಈ ಹೊತ್ತು ಎಲ್ಲಿಯೂ ನಿಲ್ಲದೆ ಹೊರಟು ಮನೆಗೆ ಬಂದಳು ಆಕೆ ಮನೆಗೆ ಬಂದುದರಿಂದ ಆಕೆಯ ಮಗನಿಗೆ ಅತ್ಯಂತ ಆನಂದವಾಯಿತು ಆ ಮಗ ನಾದರೂ ದಿಲ್ಲಿಯಲ್ಲಿ ಚಿತ್ರಗಳ ಅಂಗಡಿಯನ್ನು ಇಟ್ಟಿದ್ದನು ರೂಪನಗರದ ರಾಜಕನ್ನೆಯ ವರ್ತನವನ್ನು ಮುದುಕೆಯು ಈ ವರಿಗೆ ಯಾರಮುಂದೂ ಹೇಳಿದ್ದಿಲ್ಲ ಆದ್ದರಿಂದ ಅವಳ ಮನಸ್ಸಿನಲ್ಲಿ ನಮಾಧಾನವಿದ್ದಿಲ್ಲ ಯಾರಮಂಗಾದರೂ ಹೇಳಬೇಕೆಂದು ಆತುರ ಳಾಗಿದ್ದಳು ಆದರೆ ಯಾರಿಂದಲಾದರೂ ಈ ಸುದ್ದಿಯು ಬಾದಷಹನಿಗೆ ತಿಳಿದರೆ ಅರಸುಮಗಳ ಗತಿಯು ನೆಟ್ಟಗಾಗಲಿಕ್ಕಿಲ್ಲೆಂದು ಹಳಹಳಿಸುತ್ತಿ ದ್ದಳು ಅದಕ್ಕಾಗಿ ಮನಸ್ಸನ್ನು ಸ್ವಲ್ಪ ಬಿಗಿಹಿಡಿಯಬೇಕಾಗುತ್ತಿತ್ತು. ಆದರೆ ಆಕೆಗೆ ರಾತ್ರಿ ನಿದ್ರೆ ಬರಲೊಲ್ಲದು ಊಟವು ಸೀಯನಿಸಲೊಲ್ಲದು, ಇದೇ ವಿಚಾರದಲ್ಲಿ ಯಾವಾಗಲೂ ಮಗ್ನಳಾಗಿದ್ದಳು ಇದರಿಂದ ಅವಳ ಸ್ಪತಿಯಲ್ಲಿ ಬಹಳ ಹೆಚ್ಚು ಕಡಿಮೆಯಾಯಿತು ಇದನ್ನು ಕಂಡು ಮಗನು • ಅಮ್ಮಾ, ಹೀಗೇಕೆಗಾಬರಿಯಾಗಿರುವೆಯೆ?” ಎಂದು ಕೇಳಿದನು ಅದಕ್ಕೆ ಮುದುಕಿಯು ( ಅಪ್ಪಾ, ಇಲ್ಲ, ನಾನು ಗಾಬರಿಯಾಗಿಲ್ಲ. ರೂಪನಗರದಲ್ಲಿ ಒಂದು ಚಮತ್ಕಾರವನ್ನು ಕಂಡೆನು.” ಅದಕ್ಕೆ ಮಗ