ಅಂತಲಂಘ್ಯಮುಮಭ್ರಂಕಷ, ವಿವಿಧಾಟ್ಟಾಲಕಮುಮನಿಪ ಕನಕ ಪ್ರಾಕಾರ
ದಿಂದೊಳಗೆ---
ಚ|| ಬರೆದ ವಿಚಿತ್ರಪತ್ರನಿಚಯಂನಿಜಲೋಚನ ಚಂದ್ರಿಕಾಪರಂ|
ಪರೆ೧ನಡೆನಟ್ಟು ಸೋರ್ವ ಶಶಿಕಾಂತದ ಕೇರ್ಗಳ ನೀರ್ವೊನಲ್ಗಳಿ೦||
ಪರೆಯೆಕನಲ್ದು ಕಣ್ಗೆ ಕಿಸುಗಣ್ಚಿ ಹರಿನ್ಮಣಿಭಿತ್ತಿಭಾಗದೊಳ್|
ಪುರವನಿತಾಜನಂ ಬರೆಯುತಿರ್ಪುದಭಂಗುರ ಪತ್ರಭಂಗಮಂ||೧೧೭||
ಒದವಿದ ತಮ್ಮ ಕ೦ದಳದ ಕೆಂಪುಗಳಿ೦ ಗಿಳಿ ಪದ್ಮರಾಗ ರ|
ತ್ನದ ಗಿಳಿಯಂತೆ ತಮ್ಮ ನಯನಾ೦ಚಲ ಚ೦ದ್ರಿಕೆಯಿಂ ನವೇಂದುಕಾ||
ನ್ತದ ಗಿಳಿಯಂತೆ ಕೌತುಕಮನಾಕ್ಷಣದೊಳ್ ಕುಡೆ ನೋಡಿ ನೋಡಿ ಮಾ
ಯದ ಗಿಳಿಯೆಂದೆ ಪ೦ಜರದೊಳಿಕ್ಕುವರೋದಿಸಲ೦ಜಿ ಮುಗ್ದೆಯರ್||೧೧೮||
ಲಲಿತವೃತ್ತಂ|| ತು೦ಗ ಕುಚಕುಂಭಯುಗವ೦ಗಜಗಜ೦ ಮೊಗವಡಂಗಳೆದುದೆನಿಸೆ ವಿಗತಾಂಚಲಮಪಾಂಗಂ|
ಮೀಂಗೆಳಸುವಿಂದುಕಿರಣಂಗಳೆನೆ ಕರ್ಣಯುಗಳ೦ಗಳವತಂಸ ಮಣಿಯಂ ಬಳಸೆ ಘರ್ಮೋ|| ದಂಗಳಿರೆ ನೊಸಲೊಳೆಳದಿಂಗಳಮರ್ದಿನ ಪನಿಯ ಪಾಂಗನೊಳಕೊಂಡು ನಳಿ ತೋಳ್ನಲಿದು ನೀಳು|
ತ್ತಂಗಭವ ಪಾಶಮೆನೆಪಿಂಗದರೆವುದು ಘಟ್ಟಿಯಂ ಗಡಣದಿಂ ಘಟ್ಟವಳ್ತಿಯರ ತಂಡಂ||೧೧೯||
ಮ||ಸ್ರ||ನರುಸುಯ್ಗಂ ಮಾಲೆಗಂ ಸೂಳಿರಿದೆರಗುವಿನಂ ತುಂಬಿಗಳ್|ನೋಡಿದರ್ಮೆ|
ಯ್ಮರೆವನ್ನ೦ ಬಾಹುಮೂಲಂ ಪೊಗರನುಗುಳ್ವಿನಂ ಕಣ್ಮಲರ್ ಬಳ್ಳಿಮಿಂಚ೦||
ಕರೆವನ್ನಂ ಮಾಲೆವೂವಂ ನೆಗಪಿ ಸೊಗಯಿಕುಂ ನೀರರೊಳ್ ಪುಷ್ಪಚಾಪಂ|
ಗುರಿಯೇಸಂ ತೋರಲ೦ಬ೦ ಪೊದೆಗೆದರಿದವೋಲ್ ಪುಷ್ಪಲಾವೀಕದ೦ಬಂ||
ಚ೦|| ಸುರಪನ ವಜ್ರಮುಂ ಹರಿಯ ಕೌಸ್ತುಭಮುಂ ಹರನಿಂದುಲೇಖೆಯುಂ
ವರುಣನ ಮುತ್ತಿನೆಕ್ಕಸರಮುಂ ಗರುಡಾಂಗದ ಪಚ್ಚೆಯುಂ ಫಣೀ||
ಶ್ವರ ಫಣರತ್ನಮುಂ ಬೆಲೆಗೆ ಬಿಣ್ಣಿದುವಲ್ಲಮೆನಿಪ್ಪ೨ಪೆಂಪಿನಿ೦|
ದೆರಡನೆಯಬ್ಧಿರನ್ನ ವಸರಂ ಗೆಲೆವಂದುದು ರೋಹಣಾದ್ರಿಯಂ||೧೨೧||
118, 119-ಈ ಪದ್ಯಗಳು ಗ ಘ ಗಳಲ್ಲಿಲ್ಲ.
1. ನಡೆವಟ್ಟು, ಕ, ಖ. (ಗಳಪಟ್ಟು, ಘ)
2. ರತ್ನದಿ೦ದೆರಡನೆಯಬ್ಧಿಯನ್ನ