ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥಮಾಶ್ವಾಸಂ

೨೩

ಮ||ಸ್ರ||ವನಜಂ ಪಂಕಾಂಕಿತಂ|ಗೋವಳಿತಿಯ ಮೊಲೆಯೊತ್ತಿಂಗೆ ಫಕ್ಕಾಯ್ತುಗೋವ
     ರ್ಧನ ವಕ್ಷೋಭಾಗಮೌರ್ವಜ್ವಲನ ಬಹುಲ ಧೂಮೂಕುಲಂ ಪಾಲ ಮುನ್ನೀ||
     ರೆನಪಾಯಸ್ಥಾನಮೆಂದಾ ಪುರವರದ ವಣಿಗ್ವಾಟ ಹರ್ಮ್ಯ೦ಗಳೊಳಮು|
     ನ್ನಿನ ಸಂಚಾರಸ್ವಭಾವಂ ಪರಿಪಡೆ ಪದೆಪಿಂ ಲಕ್ಷ್ಮಿ ನಿಶ್ಚಿಂತಮಿರ್ಪಳ್ ||೧೨೨||

     ಕಂ|| ದಿವಿಜ ವಿಮಾನಂ ಮಾಡದ
           ನಿವು ಮಾಡಿದುವೆಂಬ ಭೇದಮಲ್ಲದೆ ಚೆಲ್ವಿಂ||
           ನವರತ್ನರಚನೆಯಿ೦ ಭೇ
           ದವಿಲ್ಲ ತತ್ಪುರದ ಭವನಮೆನಿತನಿತರೊಳಂ||೧೨೩||

           ಇರುಳುಂ ಪಗಲುಂ ಪುರದೊಳ್
           ಬೆರಸಿರ್ಪುವು ಪದ್ಮರಾಗಗೃಹದೆಳವಿಸಿಲಿ೦||
           ಹರಿನೀಲಗೃಹದ ತಮದು
           ಬೃರದಿಂ ಶಶಿಕಾಂತಗೃಹದ ಚಂದ್ರಾತಪದಿಂ||೧೨೪||

           ಶಿಲ್ಪಿ ಗಡ ಕಲ್ಪಪತಿಸಂ
           ಕಲ್ಪಂ ರತ್ತೋಪಲಂ ದಳಂ ಗಡ ಶೋಭಾ||
           ತಲ್ಪಮಿದೆನ್ನದೆ ಬೇರೆ ವಿ
           ಕಲ್ಪಿಸುವನೆ ಗಾ೦ಪನೆನಿಸುಗುಂ ಕರುಮಾಡಂ||೧೨೫||

           ನೆಲೆಮಾಡದ ಪೊಸದೇಸಿಯ
           ನೆಲೆ ಮಾಡದ ಕಲ್ಪಸದನಮೆಯ ದಣಂ
           ನೆಲೆಯಾದುದಿದರ ತೆರದಿಂ
           ನೆಲೆಯಾದುದೆ ಸಕಲಜನದ ಕಣ್ಗಂ ಮನಕಂ||೧೨೬||

ಉ|| ಬಾಳತೃಣಂಗಳೆಂದೆಳಸುಗುಂ ಪಸುರ್ಗಲ್ಗಳ ಕಾಂತಿಯಂ ಮೃಗೀ,
     ಜಾಳಕಮಲ್ಲಿ ಮಾಣಿಕದ ಕೆಂಬೊಳಪಂ ಬಿಸಿಲೆಂದು ನಟ್ಟಿರುಳ್
     ಮೇಳಿಸುಗುಂ ರಥಾಂಗಮೆಳಿಲಿಕ್ಕಿದ ಮುತ್ತಿನ ಸೂಸ್ತಕಂಗಳಂ|
     ಬಾಳಮೃಣಾಳಮೆಂದು ಕರ್ದುಕಲ್ ಬಗೆಗುಂ ಕಲಹಂಸ ಪೋತಕಂ||೧೨೭||

ಚ೦|| ಗಿಳಿ ಗಿಳಿವೆಣ್ಗೆ ಚೂತಫಲಮಂ ಕಲಹಂಸಿಗೆ ಹಂಸನಬ್ಜಕ೦|
      ದಳಮನಿಭಂ ಕರೇಣುಗೆ ಲವಂಗ ದಳಂಗಳನೀವ ಚಿತ್ರಮಂ॥
      ತಳೆದು ವಿಲಾಸಮಂ ಮೆರೆವ ರಾಣಿಯವಾಸದ ಬಳ್ಳಿಮಾಡದು|
      ಜ್ವಳ ಮಣಭಿತ್ತಿ ಚೆಲ್ವನೊಳಕೊಂಡೊಳಕೊಂಡುದಪೂರ್ವ ಭಿತ್ತಿಯಂ||೧೨೮||



1. ಕಟ್ಟರುಳ್, ಕ, ಖ.
2. ಭಾವಮಂ, ಗ, ಘ.