ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೭

ದ್ವಿತೀಯಾಶ್ವಾಸಂ



       ಕಂ|| ಸ್ತ್ರೀ ಬಾಲ ಸಾಧ್ಯವಿಳೆ ನಿ
            ಮ್ಮೀ ಬಾಹಾಬಲದಿನಾದುದೆನಗಾ ತೇರದಿ೦||
            ದೀ ಬಾಲೆಯ ಗರ್ಭದೋಳಿ
            ರ್ದಾ ಬಾಲನನರಸುಮಾಳ್ಪುದಿದು ನಿಮಗೆ ಬೆಸಂ||||೫೦||

        ಎಂದು ಪರಿಜನಮನೊಡಂಬಡಿಸಿ ಕೀರ್ತಿಧರ ಮುಮುಕ್ಷುಗಳ ಸಮಕ್ಷದೊಳ್
ದೀಕ್ಷೆಯಂ ಕೈಕೊಂಡು--
  
        ಕಂ|| ಶ್ರುತದಗ್ಗಳಿಕ್ಕೆ ತಪದು
              ನ್ನತಿಕ್ಕೆ ತನ್ನೊಳೆ ನೆಗಳ್ತೆವೆತ್ತಿರೆ ಭೂವಿ||
              ಶ್ರುತನೆನೆ ಸುಕೌಶಲ ವ್ರತಿ
              ಪತಿ ತಪದಿಂ ಶ್ರುತದಿನಾರುಮಂ ಗೆಲೆವಂದಂ||೫೧||

        ಅ೦ತವಿಶ್ರಾನ್ತತಪಶ್ಯ್ರೀಯನಪ್ಪುಕೆಯ್ದಿರ್ಪಿನಂ--

        ಕಂ|| ಕಡವಲರ್ದುವು ಮೊಲ್ಲೆಯ ಪೂ
              ಗುಡಿ ನಿಮಿರ್ದುವು ಸೋಗೆ ಕೇಗಿದುವುಕೇದಗೆ ಬೆ||
              ಳ್ಗುಡಿವೊದುವುಚಾದಗೆಗಳ್,
              ಕಡ೦ಗಿ ನುಂಗಿದುವು ತೋರವನಿಯಂ ಕಾರೊಳ್||೫೨||

         ಆ ಘನಸಮಯ ಪ್ರವೇಶದೊಳ್ ತನ್ಮುನಿಯುಗಳ೦ ವೃಕ್ಷಮೂಲನಿಯೋಗ ನಿರ್ವರ್ತನಾನಂತರಂ ಯೋಗ್ಯಕಾಲಾವೇಕ್ಷೆಯಿಂ ಕಾಂತಾರಭಿಕ್ಷೆಗೆ ಬರುತಿರೆ--

ಉ|| ಕಣ್ಬಂಗಟ್ಟು ದಿವ್ಯಮುನಿಗಿತ್ತ ಪಮಾನದಿನಾರ್ತರೌದ್ರದಿಂ|
     ಪೆಣ್ನುಲಿಯಾಗಿ ಪುಟ್ಟಿ ಸಹದೇವಿ ಬರುತ್ತಿರೆ ಕಂಡಶಂಕಿತರ್
     ಕಣ್ಬೊಲದೊಳ್ ನಿವೃತ್ತಿಪರಿಣಾಮ ಮೊಡಂಬಡೆ ಧರ್ಮಶುಕ್ಲದೊಳ್
     ಜಾಣ್ಣಡೆದಿಕ್ಕಿ ಕೈಯನುಪಸರ್ಗ ಸಹಿಷ್ಣುಗಳಿರ್ದರಿರ್ವರುಂ||೫೩||

ಮ||ಸ್ರ|| ತನುವಂ ಬೇರ್ಕೆಯ್ದು ತಮ್ಮಿಂ ಮುನಿಪತಿಗಳನುಪ್ರೇಕ್ಷೆಯಂ ತಾಳಿ ಸನ್ಯಾ|
         ಸನಯುಕ್ತರ್ಚಿತ್ತದೊಳ್ ನಿಶ್ಚಲಮಿರಿಸಿ ಜಿನಶ್ರೀ ಪದಾಬ್ಜಂಗಳಂ ಪಂ||
         ಚ ನಮಸ್ಕಾರಂಗಳಂ ನಾಲಗೆ ಜಪಿಯಿಸೆ ಗುಂಜದು ಹಾ ರಂಜಿತಂ ಕಾ೦|
         ಚನಶೈಲದ್ವಂದ್ವಮಿರ್ಪಂತಿರೆ ಶುಭಚರಿತ‌ರ್ ಪೂಣ್ದು ಕೈಯಿಕ್ಕಿ ನಿಂದರ್ ||೫೪||

ಅಂತು ನಿಂದ ಮುನಿಯುಗಳಮಂ ಕಂಡು ಕಡುಮುಳಿದು---