ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ರಾಮಚಂದ್ರಚರಿತಪುರಾಣಂ

ಮ|| ಜಡಿಯುತ್ತುಂ ಬಾಲಮಂ ಕಣ್ಣುರಿಯನುಗುಳೆ ಜಿಹ್ವಾನಲಂ ಪೆರ್ಚೆ ಬಾಯ್ವಿ|
     ಟ್ಟೊಡೆವನ್ನ೦ ಗರ್ಜಿಸುತ್ತುಂ ಪವನಜವದೆ ಮೇಲ್ವಾಯ್ದು ಪೊಯ್ದತ್ತುಕೈಯೇ ||
     ಜಡೆಯಿಂಬಾಯೇರ ಬಾಯಿಂದೊಡನೆ ರುಧಿರಮುಂ ಕಂಡಮುಂಸೂಸುವನ್ನಂ|
     ಸಿಡಿಲೆಂಬಾಶಂಕೆಯಂ ಪೆಣ್ಬುಲಿ ಪಡೆದು ಮೃಗೀರಕ್ತಸೇವಾನುರಕ್ತಂ||೫೫||

     ಅ೦ತಾಪುಲಿ ಮುನೀಂದ್ರಯುಗಳದ ಮೇಲೆ ಪಾಯ್ದುಗಿಬಗಿಮಾಳ್ಪುದುಮಾ ಮ ಹೋಪಸರ್ಗಮಂ ಸೈರಿಸಿ--

      ಕ೦|| ಘಾತಿಯುಮನಘಾತಿಯುಮಂ
            ಘಾತಿಸಿ ಕೀರ್ತಿಧರ ಯಾಗಿ ಮುಕ್ತಿಗೆ ಸಂದ೦||
            ಘಾತಿಕ್ಷಯದಿಂ ಕೈವ
            ಲ್ಯಾತಿಶಯಂಬೆತ್ತ ನಾ ಸುಕೌಶಲ ಮುನಿಪಂ ||೫೬||

ಉ|| ಇತ್ತ ವಿಚಿತ್ರಮಾಲೆಗೆ ತನೂಭವನಾಗೆ ಹಿರಣ್ಯಗರ್ಭನೆಂ।
     ದತ್ತು ಧರಿತ್ರಿಗರ್ಭದೊಳೆ ವಲ್ಲಭನಾಗೆ ಸಮಸ್ತರಾಜ್ಯಸಂ||
     ಪತ್ತಿಗೆ ತತ್ಸುತಂ ಬಳೆದು ಚಾಗದ ಬೀರದ ಪೆರ್ಮೆಯಿಂ ದಿಶಾ।
     ಭಿತ್ತಿಯನೆಂಟನೆಯ್ದೆ ತೆರೆಸುತ್ತಿದನಾತ್ಮ ಯಶೋ ದುಕೂಲದಿಂ||೫೭||
 
      ಕಂ|| ಸರಸ ಬಿಸಗರ್ಭಗೌರಂ
            ಪರೆಯೆ ಜಸಂ,ಪರಪುರಕ್ಕೆ ಗರ್ಭಸ್ರಾವಂ||
            ದೊರೆಕೊಳೆ ಹಿರಣ್ಯಗರ್ಭ೦
            ಧರಿತ್ರಿಯಂ ಹರ್ಷಗರ್ಭಮೆನೆ ಪಾಲಿಸಿದಂ||೫೮||

            ತದಪತ್ಯಂ ನಹುಷಂ ಚತು
            ರುದಧಿವರಂ ವಸುಧೆಯಂ ನಿಮಿರ್ಚಿ ಭುಜಾ ಗ||
            ರ್ವದಗುರ್ವಿ೦ ಮಾಣ್ದನೆ ಚತು
            ರುದಧಿಯೊಳುದವಾಸಮಿರಿಸಿದಂ ರಿಪುನೃಪರಂ||೫೯||
 
            ಈ ಸಕಲಧರೆಯನುಗ್ರಭು
            ಜಾಸಿಯೊಳಳವಡಿಸಿ ನಹುಷನಗ್ರಸುತಂ ಸಂ||
            ವಾಸಂ ರಿಪು ದಾರಕರಂ
            ದಾಸೇರಕರೆನೆ ಪೊಡರ್ಪು ಗಿಡೆ ನಡೆಯಿಸಿದಂ||೬೦||

ತತ್ತನೂಭವಂ--


1: ಕೇವಲಿಯಾದು. ಚ.