ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೯

ದ್ವಿತೀಯಾಶ್ವಾಸಂ



ಕಂ||ಸಂಹರಿಸಿ ರಿಪು ಮದದ್ವಿಪ
     ಸಂಹತಿಯಂ ಬೀರಸಿರಿಗೆ ವಲ್ಲಭನಾದಂ
     ಸಿ೦ಹ ಪರಾಕ್ರಮನೆನಿಸಿದ
     ಸಿಂಹರಥಂ ಸಾರ್ವಭೌಮವಿಭವ ಸನಾಥಂ||೬೧||

ಆ ಸಿಂಹರಥನ ಸುತನಯೋಧ್ಯಾಸಿಂಹಾಸನಮನಲಂಕರಿಸಿ--

ಕಂ || ಒರ್ವನೆ ಧನ್ವಿಯೆನಲ್ ಸಕ
       ಲೋರ್ವರೆಯಂ ಕಾದು ತನ್ನ ಬಾಣದ ಮೊನೆಯೊಳ್||
       ಮಾರ್ವಲಮಂ ತವಿಸಿದನೆನೆ
       ದೋರ್ವಲಮೇಂ ಬ್ರಹ್ಮರಥನೊಳ ವಿತಥಮಾಯ್ತೋ||೬೨||

ತತ್ತನಯಂ--

ಕಂ||ಸಮರ ಮುಖದೊಳ್ ವಿರೋಧಿ
     ಪ್ರಮುಖರನೆಯ್ದಿಸೆ ಶಿಲೀಮು_೦ ಯಮ ಮುಖಮಂ
     ಕ್ಷಮೆಯಂ ತಳೆದಂ ಚಾಪಾ
     ಗಮ ಚತುರ ಚತುರ್ಮುಖಂ ಚತುರ್ಮುಖನೆಂಬಂ||೬೩||
 
     ಭೂಮಂಡಲನುಂ ತಳೆದಂ
     ಕ್ಷೇಮಾಸ್ಪದಮಾಗೆ ನಾಮಮಹಿಮೋನ್ನತಿಯಿಂ||
     ಹೇಮಾಚಲಮಂ ಮೆಚ್ಚಂ,
     ಹೇಮರಥಂ ಶ್ರುತಿಮುಖಂ ಚತುರ್ಮುಖತನಯಂ||೬೪||

     ಆ ರಾಜಸುತಂ ಕೀರ್ತಿ ಸು
     ಧಾರಸದಿಂ ತಣ್ಪುವಡೆದು ಪರಿಪೂರ್ಣಕಲಾ||
     ಧಾರಂ ಸಕಲೇಂದುರಥಂ
     ವೈರಿ ಮನೋರಥ ರಥಾಂಗಮಂ ವಿಘಟಿಸಿದಂ||೬೫||

ಆ ಮಹೀಭುಜನ ತನೂಭವಂ---

ಕಂ|| ತೇಜಂ ಪುದುವಿಲ್ಲೆನಿಸಿ ವಿ
      ರಾಜಿಸೆ ಪರರಾಜಮಂಡಲಂ ತನ್ನಿಂ ನಿ||
      ಸ್ತೇಜಂ ಬೆತ್ತಿರೆ ಬೆಳಗಿದ
      ನೀ ಜಗಮಂ ಭಾನುವೆಂಬಿನಂ ಭಾನುರಥಂ||೬೬||


೧. ಪ್ರೇಮಾ. ಕ. ಖ. ಚ.