ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ರಾಮಚಂದ್ರಚರಿತಪುರಾಣಂ

ಮತ್ತಂ ತದನ್ವಯದೊಳ್ ಮಯಮಾಂಧಾತೃವೀರಸೇನ ಕಮಲಬಂಧು ವಸnta
ತಿಲಕ ಕುಬೇರದತ್ತ1ಮೃಗಾರಿದಮನ ದ್ವಿಪರಥ ಹಿರಣ್ಯಕಶಿಪ್ವರ್ಕರಥ ದಿಲೀಪ ರಘು
ವೀರ ಪ್ರಮುಖರೆನಿಬರಾನುಮರಸುಗಳನುಕ್ರಮದಿಂ ರಾಜ್ಯಂಗೆಯ್ದು ಕೆಲಬರಮರ
ಕಾಮಿನೀ ಕಚಗ್ರಹಣಮಂ ಕೆಲಂಬರಮೃತಲಕ್ಷ್ಮೀಪಾಣಿಗ್ರಹಣಮಂ ಪಡೆವುದುಂ----
ಕಂ॥ ಧರಣೀಪ್ರಾಕಾರಂ ವೀ
ರ ರಸಾರ್ಣವ ಸೇತು ದಾನಗುಣಭೂಷಣ ದಿ||
ಕರಿಧರರತ್ನರೋಹಣ
ಗಿರೀ೦ದ್ರಮಿಕ್ಷ್ವಾಕು ವಂಶಮಾಯ್ತಪ್ರತಿಮಂ||೬೭||

ಆ ವಂಶದೊಳ್ ವಿನೀತಾಪುರಮನಾಳ್ವನವರಣನೆಂಬರಸನಖಿಲ ರಾಜಕುಲ ಮಣಿಮಕುಟ ಮಕರಿಕಾಪತ್ರ ವಿಚಿತ್ರಚಿತ್ರಿತ ಪಾದಪೀಠ೦---

ಕಂ॥ ನೆನೆಯಿಸುವಂ ಮಾನ್ಯಪುರಾ
ತನ ರಾಜನ್ಯಕಮನತುಲ ಬಾಹಾ ಬಲದಿಂ||
ದನರಣ್ಯಂ ಕೃತಪುಣ್ಯಂ
ಮನುವಂಶ ವರೇಣ್ಯ ನಖಿಲ ಭುವನ ಶರಣ್ಯಂ||೬೮||

ಅನರಣ್ಯನೆಂಬ ಪೆಸರಂ,
ಜನಪತಿ ದೇಶದೊಳರಣ್ಯಮಿಲ್ಲೆನೆ ನಾನಾ||
ಜನಪದಮಂ ಪಡೆದು ಜಗ
ಜ್ಜನಂ ಕುಡಲ್ ಪಡೆದನುಂತ ಪಡದನ ಪಸರಂ||೬೯||

ನ್ಯಾಯಾರ್ಜಿತವಿತ್ತಂ ಧ
ರ್ಮಾಯತ್ತ ಮೆನಿಪ್ಪ ರಾಜವೃತ್ತಂ ತನಗೇ||
ಕಾಯತ್ತಮಾಗೆ ಧರೆಯಂ
ಜೀಯೆನಿಸಿದನಿ೦ತುದಾತ್ತ ಚರಿತರುಮೊಳರೇ||೭೦||

ಆ ವಸುಧಾವಲ್ಲಭನ ಮ
ನೋವಲ್ಲಭೆ ರೂಪವತಿ ಕಲಾವತಿ ಪೃ||
ಥ್ವೀವದು ಧೈಯ್ಯದೊಳಂ ಪೃ
ಯುವತಿ ಸವತಿಯೆನೆ ಪೆಸರ್ವಡೆದಳ್||೭೧||


೧. ಮೃಗಾರಿ ಮದನದ್ವಿಪ, ಚ. ಮೃಗಾರಿ ಮದದ್ವಿಪ ಕ, ಖ.
೨. ದಿಲೀಪ ಪುರೂರವ ರಘುವೀರ ಗ. ಘ.