ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೧

ದ್ವಿತೀಯಾಶ್ವಾಸಂ



      ಕಂ|| ಕಡುಚೆಲ್ವಿಂ ರತಿಗೆಗ್ಗ೦
            ಪಡೆದು ವಿಲಾಸಕ್ಕೆ ದೇಸಿವಡೆದವನಿಪನೊಳ್
            ಪಡೆದು ಪಿರಿಯರಸಿತನಮಂ
            ಪಡೆದಳ್ ತನಯರನೆನಂತರಥ ದಶರಥರಂ

       ಆ ಪೃಥ್ವಿವಧೂಮಹಾದೇವಿಯೊಳಖಿಲ ಪೃಥ್ವೀವಲ್ಲಭಂ ಧರ್ಮಾರ್ಥವಿರುದ್ಧ ಮಾಗದಂತು ವಿಷಯಸುಖಮನನುಭವಿಸುತ್ತಿರ್ದೊ೦ದು ದಿವಸಂ---

ಮ|| ಭುವನ ಸ್ತುತ್ಯಪದಂ ಸಹಸ್ರಕಿರಣಂ, ಸ್ವರ್ಭಾನುವಿಂದಂ ಪರಾ|
      ಭವಮಂ ಪೊರ್ದುವವೋಲ್/ ಸಹಸ್ರಕಿರಣಂ ಮಾಹಿಷ್ಮತೀವಲ್ಲಭಂ||
      ಬವರಂಗೆಯ್ದು ದಶಾನನಂಗೆ ರಣದೊಳ್ ಸೋಲ್ತೇವದಿಂ ಕ್ಷತ್ರ ಪು|
      ಇವರೇಣ್ಯಂ ಜಿನದೀಕ್ಷೆಗೊಂಡನನರಣ್ಯಂ ಕೇಳ್ದನಾ ವಾರ್ತೆಯಂ||೬೩||

      ಅ೦ತು ಕೇಳ್ದದುವೆ ತನಗೆ ನಿರ್ವೇಗನಿಮಿತ್ತಮಾಗೆ---
      
      ಕಂ|| ಕೆಳೆಯಂ ಸಹಸ್ರಕಿರಣಂ
            ತಳೆದಂ ದೀಕ್ಷೆಯನುಪೇಕ್ಷಿಸಲ್ ಪದನಲ್ಲೀ
            ಯೆಳೆಯನಪೇಕ್ಷಿಸೆನೆಂದಾ
            ಗಳನಂತರಥಂಗೆ ನುಡಿದನಿಂತರಣ್ಯಂ||೭೪||

      ಪಡೆದೆಂ ನಿನ್ನನ್ನನಂ ರಕ್ಷಿಸಲಖಿಲಧರಾಚ ಕ್ರಮಂ ಪುತ್ರ ನೀ೦ ಬೆ।
      ಳ್ಗೊಡೆಯಂ ಕೈಕೊಳ್, ಧರಾಭಾರಮನಿಳಿಪೆನಗೆಂದಂಗೆ ದ೦ತಾಂಶು ಜಾಲಂ||
      ಕುಡಿಮಿಂಚಂ ಬೀರೆ ಕೈಯಂ ಮುಗಿದು ನುಡಿದನೇಮಾತೊ ನಿರ್ವಾಣಮಾರ್ಗ
      ಕ್ಕೊಡಸಲ್ವೆಂ ನಿಮ್ಮ ಚಿತ್ರಕ್ಕೆಡರಿದ ನೆಲನಂ ದೇವ ಕೈಕೊಳ್ವನಲ್ಲೆಂ||೭೫||

      ಎಂದು ತನ್ನೊಡನೆ ತಪಂಬಡಲೊಡಂಬಟ್ಟು ತರಿಸಂದು ನುಡಿವುದುಮೊಂ
ದುತಿಂಗಳ ಮಗನಪ್ಪ ದಶರಥಂಗೆ ಪಟ್ಟಂಗಟ್ಟಿ ತಾನುಮನಂತರಥನುಂ ಅಭಯಘೋಷ ಭಟ್ಟಾರಕರ ಪಾದೋಪಾಂತದೊಳ್ ತಪಂಬಟ್ಟು---
       ಕಂ|| ಅನರಣ್ಯಂ ಮುಕ್ತಿಶ್ರೀ
             ವನಿತಾ ವರನಾದನಂತನಂತರಥಂ ಚಿ||
             ತನಿರೋಧದಗ್ಧಕರ್ಮೇ೦
             ಧನ ಭಾರನನಂತ ವೀರ್ಯಕೇವಲಿಯಾದಂ||||೭೬||

ಆ ಮಹಾಮಹಿಮೆಯೊಳ್---