ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೪

ರಾಮಚಂದ್ರಚರಿತಪುರಾಣಂ

      ಕಂ|| ಓದಿದೊಡೇನರಗಿಳಿ ಕ
            ಲ್ತೋದುವವೋಲ್ ಧರ್ಮಶಾಸ್ತ್ರಮಂ ದಶರಥನಂ||
            ತೋದಿ ತಿಳಿದವನಿಪತಿ ಮ
            ರ್ಯಾದೆಯೊಳೆಸಗುವುದು ಧರ್ಮಪರನೆನೆ ಲೋಕಂ||೭||
 
            ಕಾದಳ್ ವರ್ಣಾಶ್ರಮ
            ರ್ಮಾದಿಗಳ೦ ಮಿಾರದಂತು ನೆಲನಂ ನೃಪನಾ||
            ಜ್ಞಾ ದೇವತೆ ವೇದಿಕೆ ಮ
            ರಾದೆಯೊಳಂಭೋನಿಧಾನಮಂ ನಿಲಿಸುವವೋಲ್||೮||

ಚ || ಮನಮೆಳದಾಗೆ ವೈರಿಗೆ,ಮನೀಷಿಜನಂ ಮನಮಿಾಯೆ ಮಾನಿನೀ
      ಜನಮಭಿಮಾನಮಂ ಮರೆಯೆ ಭೂಭುವನ ಸ್ತವನೀಯಮಾದುದಾ||
      ತನ ಬಲಗೈಯೊಳಿರ್ಪ ಜಯಲಕ್ಷ್ಮಿಗಮಾತನ ಸೊಲ್ಲೊಳಿರ್ಪ ವಾ
      ಗ್ವನಿತೆಗಮಾ ಮಹೀಪತಿಗಮಪ್ರತಿಮಂ ಪರಿಪೂರ್ಣ ಯೌವನಂ||೯||

      ಅಂತು ದಶರಥ ನರನಾಥಂ ನವಯೌವನಲಕ್ಷ್ಮಿಯನಪ್ಪು ಕೆಯ್ದು ಲಾವ
ಣ್ಯಲಕ್ಷ್ಮೀವಿರಾಜಿತೆಯೆನಿಪ್ಪಪರಾಜಿತೆಯುಂ, ಮದನ ಮೋಹನ ವಿದ್ಯಾದೇವತೆಯ
ಮಿತ್ರೆಯೆನಿಪ್ಪ ಸುಮಿತ್ರೆಯುಂ, ಕಂತು ಸಂತಾಪನ ದೀಪ ಕಳಿಕಾ ಪ್ರಭೆಯೆನಿಪ್ಪ ಸುಪ್ರ
ಭೆಯುಂ, ಓರೂರ್ಮೆ ಪೇರುರದೊಳಿರ್ಪ ಸಿರಿಯಂ ಗಾಢಾಲಿಂಗನದ ನೆವದಿ೦ನೆಲೆಮೊಲೆ ಯೊಳಿಟ್ಟೊತ್ತುವಂತೆರ್ದೆವತ್ತುಗೆವೆತ್ತು, ಕಲಭಾಷಿತ ಸುಧಾಜಲದಿಂ ಸರಸ್ವತಿಯ ಕಲಾ
ವಲೇಪಮಂ ಕರ್ಚಿ ಕಳೆವಂತೆ ಮೊಗಂಬಡೆದು, ಪ್ರಣಯಕಲಹ ಕೇಳಿಯಿಂ ವಿಜಯ
ಶ್ರೀಯಂ ಜನಿಸುವಂತೆ ತೋಳ್ವೆರಗನಪ್ಪುಕೆಯ್ದು, ತನಗೆ ಮನೋನಯನ ವಲ್ಲಭೆ
ಯರೆನಿಸೆ--

       ಕಂ|| ಕುಲಸತಿಯರಿಂ ನೃಪಂ ದಾ|
             ನ ಲೇಖೆಯಿಂ ದಿಗಭಮಮೃತಕಳೆಯಿಂ ಶಶಿ ಮೇ||
             ಖಲೆಯಿಂ ಮಂದರಶೈಲಂ,
             ವಿಲಾಸಮಂ ತಳೆದುದೆನೆ ಬೆಡಂಗಂ ತಳೆದಂ||೧೦||

             ಇನನೆಂತು ಬೆರಸಿ ಸಂಜೆಯೊ
             ಳನುರಾಗಿಯೆನಿಪ್ಪನಂತೆ ನೃಪನಾನೃಪನಂ||
             ದನೆಯರೊಳನುರಾಗದಿನಿ
             ರ್ದನವರತಂ ತೊಳಗಿ ಬೆಳಗಿದಂ ಸತ್ಪಥಮಂ||೧೧||